ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಮತ್ತೆ ಅಂಗಳಕ್ಕಿಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ರವಿಶಾಸ್ತ್ರಿ

Ravi Shastri shares pictures from Team India training session

ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮತ್ತೊಮ್ಮೆ ಅಂಗಳಕ್ಕಿಳಿದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕಳೆದ ಮಾರ್ಚ್ ಬಳಿಕ ಲಾಕ್‌ಡೌನ್ ಹಿನ್ನೆಲೆಯಲ್ಲಿ ರವಿ ಶಾಸ್ತ್ರಿ ಅಂಗಳಕ್ಕಿಳಿದಿರಲಿಲ್ಲ. ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದರಾದರೂ ಕೋಚ್ ಅದರ ಭಾಗವಾಗಿಲ್ಲದ ಕಾರಣ ಆಸಿಸ್ ವಿರುದ್ಧದ ಸರಣಿಯ ಮೂಲಕ ಮತ್ತೆ ಶಾಸ್ತ್ರಿ ಕಣಕ್ಕಿಳಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ತರಬೇತಿಯ ಸಂದರ್ಭದ ಚಿತ್ರಗಳನ್ನು ರವಿ ಶಾಸ್ತ್ರಿ ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾ ಆಟಗಾರರು ನೆಟ್‌ನಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ರವಿ ಶಾಸ್ತ್ರಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಟೀಮ್ ಇಂಡಿಯಾ ಆಟಗಾರರಿಗೆ ಕ್ವಾರಂಟೈನ್ ಸಂದರ್ಭದಲ್ಲಿ ತರಬೇತಿಗಾಗಿ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ.

ಆರ್‌ಸಿಬಿಯ ನಿರಾಶಾದಾಯಕ ಆಟಗಾರನ ಹೆಸರಿಸಿದ ಆಕಾಶ್ ಚೋಪ್ರಾ!ಆರ್‌ಸಿಬಿಯ ನಿರಾಶಾದಾಯಕ ಆಟಗಾರನ ಹೆಸರಿಸಿದ ಆಕಾಶ್ ಚೋಪ್ರಾ!

ಫೋಟೋವನ್ನು ಹಂಚಿಕೊಂಡಿರುವ ರವಿ ಶಾಶ್ತ್ರಿ "ಮತ್ತೊಮ್ಮೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಂತಸವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಹಾಗೂ ಶಾರ್ದೂಲ್ ಟಾಕೂರ್ ಅವರೊಂದಿಗಿನ ಫೋಟೋವನ್ನು ರವಿ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸವನ್ನು ನಡೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.

ಕಳೆದ ಮಾರ್ಚ್ ಬಳಿಕ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿರುವ ಮೊದಲ ಕ್ರಿಕೆಟ್ ಸರಣಿ ಇದಾಗಿದೆ. ಆದರೆ ಬಹುತೇಕ ಕ್ರಿಕೆಟಿಗರು ಸೆಪ್ಟೆಂಬರ್- ನವೆಂಬರ್ ಅವಧಿಯಲ್ಲಿ ಐಪಿಎಲ್ ನಲ್ಲಿ ಪಾಲ್ಗೊಂಡಿದ್ದು ಅಲ್ಲಿಂದ ನೆರವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೇಗಿ ಸುದೀಪ್ ತ್ಯಾಗಿಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೇಗಿ ಸುದೀಪ್ ತ್ಯಾಗಿ

ಭಾರತೀಯ ಕ್ರಿಕೆಟ್ ತಂಡ ಸದ್ಯ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಸಿಡ್ನಿಯಲ್ಲಿ ಪೂರೈಸುತ್ತಿದೆ. ನವೆಂಬರ್ 27 ರಿಂದ ಏಕದಿನ ಪಂದ್ಯದ ಮೂರು ಸುದೀರ್ಘ ಸರಣಿಗೆ ಚಾಲನೆ ದೊರೆಯಲಿದೆ. ಮೂರು ಏಕದಿನ ಪಂದ್ಯಗಳ ಸರಣಿ ಬಳಿಕ ಅಷ್ಟೇ ಸಂಖ್ಯೆಯ ಟಿ20 ಪಂದ್ಯಗಳ ಸರಣಿಯೂ ನಡೆಯಲಿದೆ. ಅದಾದ ಬಳಿಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ದೊರೆಯಲಿದೆ.

Story first published: Friday, November 20, 2020, 14:51 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X