ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಕೋಚ್‌ ರವಿ ಶಾಸ್ತ್ರಿ, ಭರತ್ ಅರುಣ್, ಆರ್‌ ಶ್ರೀಧರ್‌ಗೆ ಕೋವಿಡ್

Ravi Shastri tests positive in RT-PCR along with Bharath Arun, R Sridhar

ಲಂಡನ್‌: ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಕೋಚ್ ರವಿ ಶಾಸ್ತ್ರಿ ಕೋವಿಡ್-19 ಸೋಂಕಿಗೀಡಾಗಿದ್ದಾರೆ. ಶಾಸ್ತ್ರಿ ಅಲ್ಲದೆ, ಬೆಂಬಲ ಸಿಬ್ಬಂದಿ ಸದಸ್ಯ ಭರತ್ ಅರುಣ್, ಬೌಲಿಂಗ್ ಕೋಚ್ ಆರ್‌ ಶ್ರೀಧರ್ ಅವರ ಆರ್‌ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ. ಭಾರತ vs ಇಂಗ್ಲೆಂಡ್ ಟೆಸ್ಟ್‌ ಸರಣಿ ನಡೆಯುತ್ತಿರುವಾಗಲೇ ಈ ಹಿನ್ನಡೆಯ ಸಂಗತಿ ಕೇಳಿಬಂದಿದೆ.

T20 World Cup 2021: 15 ಮಂದಿಯ ತಂಡ ಪ್ರಕಟಿಸಿದ ಪಾಕಿಸ್ತಾನT20 World Cup 2021: 15 ಮಂದಿಯ ತಂಡ ಪ್ರಕಟಿಸಿದ ಪಾಕಿಸ್ತಾನ

ಕೋವಿಡ್‌-19 ಪಾಸಿಟಿವ್ ಬಂದಿರುವುದರಿಂದ ರವಿ ಶಾಸ್ತ್ರಿ, ಭರತ್ ಅರುಣ್ ಮತ್ತು ಆರ್ ಶ್ರೀಧರ್ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್‌ಗಾಗಿ ಮ್ಯಾನ್ಚೆಸ್ಟರ್‌ಗೆ ಹೋಗುವಂತಿಲ್ಲ. ಭಾರತ vs ಇಂಗ್ಲೆಂಡ್ ಐದನೇ ಟೆಸ್ಟ್‌ ಪಂದ್ಯ ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 10ರಿಂದ ನಡೆಯಲಿದೆ.

ಭಾರತ vs ಇಂಗ್ಲೆಂಡ್, ನಾಲ್ಕನೇ ಟೆಸ್ಟ್‌ ಪಂದ್ಯ Live ಸ್ಕೋರ್‌ಕಾರ್ಡ್

1
49715

59ರ ಹರೆಯದ ರವಿ ಶಾ್ತ್ರಿ ಅವರ ಕೋವಿಡ್ ಪರೀಕ್ಷಾ ಫಲಿತಾಂಶ ಭಾನುವಾರ ಮತ್ತು ಸೋಮವಾರ ಎರಡೂ ದಿನ ಪಾಸಿಟಿವ್ ಬಂದಿರುವುದಾಗಿ ವರದಿಯಾಗಿದೆ. ಬೆಂಬಲ ಸಿಬ್ಬಂದಿ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಜೊತೆಗೆ ಫಿಸಿಯೋ ಥೆರಪಿಸ್ಟ್ ನಿತಿನ್ ಪಾಟೆಲ್ ಕೂಡ ಸದ್ಯ ಐಸೊಲೇಶನ್‌ನಲ್ಲಿದ್ದಾರೆ.

ಸತತ ಕಳಪೆ ಆಟವಾಡಿದರೂ ಭಾರತ ತಂಡದಲ್ಲಿ ಸ್ಥಾನ; ಫ್ಲಾಪ್ ಬ್ಯಾಟ್ಸ್‌ಮನ್‌ಗೆ ಬ್ಯಾಟಿಂಗ್ ಕೋಚ್ ಬೆಂಬಲಸತತ ಕಳಪೆ ಆಟವಾಡಿದರೂ ಭಾರತ ತಂಡದಲ್ಲಿ ಸ್ಥಾನ; ಫ್ಲಾಪ್ ಬ್ಯಾಟ್ಸ್‌ಮನ್‌ಗೆ ಬ್ಯಾಟಿಂಗ್ ಕೋಚ್ ಬೆಂಬಲ

"ಟು ಲ್ಯಾಟರಾಲ್ ಫ್ಲೋ ಟೆಸ್ಟ್‌ ಬಳಿಕ ಆರ್‌ಟಿ-ಪಿಸಿಆರ್‌ ಟೆಸ್ಟ್‌ನಲ್ಲೂ ರವಿ ಶಾಸ್ತ್ರಿಯ ಫಲಿತಾಂಶ ಪಾಸಿಟಿವ್ ಬಂದಿದೆ. ಅವರಿಗೆ ಕೋವಿಡ್‌ ಲಕ್ಷಣ ಸ್ವಲ್ಪ ಪ್ರಮಾಣದಲ್ಲಿದೆ. ಗಂಟಲಿನ ಭಾಗದಲ್ಲಿ ಶಾಸ್ತ್ರಿಗೆ ಸ್ವಲ್ಪ ನೋವಿದೆ. ಅವರಿನ್ನು 10 ದಿನಗಳ ಕ್ವಾರಂಟೈನ್ ಪಾಲಿಸಲಿದ್ದಾರೆ," ಎಂದು ಬೋರ್ಡ್ ಆಫ್ ಕಂಟ್ರೋಲ್ ಪಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲ ಪಿಟಿಐಗೆ ಮಾಹಿತಿ ನೀಡಿದೆ.

4ನೇ ಟೆಸ್ಟ್: ಭಾರತ ನೀಡಿರುವ ಗುರಿ ಮುಟ್ಟುವುದು ಸುಲಭದ ಮಾತಲ್ಲ ಎಂದ ಇಂಗ್ಲೆಂಡ್ ಆಟಗಾರ4ನೇ ಟೆಸ್ಟ್: ಭಾರತ ನೀಡಿರುವ ಗುರಿ ಮುಟ್ಟುವುದು ಸುಲಭದ ಮಾತಲ್ಲ ಎಂದ ಇಂಗ್ಲೆಂಡ್ ಆಟಗಾರ

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಆರಂಭಿಕ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 11, ಕೆಎಲ್ ರಾಹುಲ್ 17, ಚೇತೇಶ್ವರ ಪೂಜಾರ 4, ವಿರಾಟ್ ಕೊಹ್ಲಿ 50, ಅಜಿಂಕ್ಯ ರಹಾನೆ 14, ರಿಷಭ್ ಪಂತ್ 9, ರವೀಂದ್ರ ಜಡೇಜಾ 10, ಶಾರ್ದೂಲ್ ಠಾಕೂರ್ 57, ಉಮೇಶ್ ಯಾದವ್ 10, ಮೊಹಮ್ಮದ್ ಸಿರಾಜ್ 1 ರನ್‌ನೊಂದಿಗೆ 61.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಗಳಿಸಿತ್ತು.

ಐಪಿಎಲ್ 2021: ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡ ಎಬಿಡಿಐಪಿಎಲ್ 2021: ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡ ಎಬಿಡಿ

ಮೊದಲ ಇನ್ನಿಂಗ್ಸ್‌ಗೆ ಇಳಿದ ಇಂಗ್ಲೆಂಡ್, ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ಡೇವಿಡ್ ಮಲನ್ 31, ಜೋ ರೂಟ್ 21, ಆಲಿ ಪೋಪ್ 81, ಜಾನಿ ಬೈರ್‌ಸ್ಟೋ 37, ಮೊಯೀನ್ ಅಲಿ 35, ಕ್ರಿಸ್ ವೋಕ್ಸ್ 50, ಕ್ರೇಗ್ ಓವರ್‌ಟನ್ 1, ಆಲಿ ರಾಬಿನ್ಸನ್ 5, ಜೇಮ್ಸ್ ಆಂಡರ್ಸನ್ 1 ರನ್‌ನೊಂದಿಗೆ 84 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಗಳಿಸಿ 99 ರನ್ ಮುನ್ನಡೆ ಸಾಧಿಸಿತ್ತು.

ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ನೀಡಿತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 127, ಕೆಎಲ್ ರಾಹುಲ್ 46, ಚೇತೇಶ್ವರ್ ಪೂಜಾರ 61, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 17, ರಿಷಭ್ ಪಂತ್ 50, ಶಾರ್ದೂಲ್ ಠಾಕೂರ್ 60, ಉಮೇಶ್ ಯಾದವ್ 25 ರನ್‌ನೊಂದಿಗೆ 148.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 466 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿಗೆ 368 ರನ್ ಗುರಿ ನೀಡಲಾಗಿತ್ತು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದ್ದು, ಈಗಾಗಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದೆ.

Story first published: Monday, September 6, 2021, 19:52 [IST]
Other articles published on Sep 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X