ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪದೇ ಪದೇ ಗಾಯದಿಂದ ನಿವೃತ್ತಿಯತ್ತ ಮನಸ್ಸು ಮಾಡಿದ್ದ ರವಿಚಂದ್ರನ್ ಅಶ್ವಿನ್

ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ , ಒಂದು ಸಮಯದಲ್ಲಿ ಭಾರತ ತಂಡದಲ್ಲಿ ತನಗೆ ಅರ್ಹವಾದ ಬೆಂಬಲ ಸಿಗುತ್ತಿಲ್ಲ ಎಂದು ಭಾವಿಸಿದ್ದರಿಂದ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಬಗ್ಗೆ ಯೋಚಿಸುತ್ತಿದ್ದೆ ಎಂದಿದ್ದಾರೆ.

2008 ರಿಂದ 2020 ರವರೆಗೆ ಅಶ್ವಿನ್ ಅನೇಕ ರೀತಿಯ ಗಾಯಗಳೊಂದಿಗೆ ಹೋರಾಡಿದ್ದಾರೆ. ಸದ್ಯ ಈತ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಕಪಿಲ್ ದೇವ್ ಅವರ ಟೆಸ್ಟ್ ದಾಖಲೆಯನ್ನು ಮುರಿಯಲು ಇನ್ನು ಕೆಲವು ವಿಕೆಟ್‌ಗಳಷ್ಟೇ ಬಾಕಿ ಉಳಿದಿದೆ.

ashwin

ಇಎಸ್‌ಪಿಎನ್‌ ಕ್ರಿಕ್‌ಇನ್‌ಫೋ ಜೊತೆ ಮಾತನಾಡುತ್ತಾ ಹೇಳಿರುವ ಅಶ್ವಿನ್ "ಈ ಗಾಯಗಳು ನನಗೆ ತುಂಬಾ ದುಃಖವನ್ನುಂಟುಮಾಡಿದವು. ಭಾರತೀಯ ಕ್ರಿಕೆಟ್ ಸಮುದಾಯದಲ್ಲಿ ಗಾಯಾಳುಗಳನ್ನ ಕಳಪೆಯಾಗಿ ನೋಡಲಾಗುತ್ತದೆ. ಆದ್ರೆ ನಾನು ಗಾಯಗೊಂಡಾಗ ಬೇರೆ ಆಟಗಾರರಂತೆ ತನ್ನನ್ನು ನೋಡಲಿಲ್ಲ'' ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ.

ಆರ್‌. ಅಶ್ವಿನ್ ಗಾಯಗೊಂಡಾಗ, ಭಾರೀ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಗೊಂಡಿರುವ ಇತರ ಆಟಗಾರರಂತೆ ತನಗೆ ಬೆಂಬಲ ಸಿಗುತ್ತಿಲ್ಲ ಎಂದ ಅಶ್ವಿನ್, ಈ ಎಲ್ಲ ಕಾರಣಗಳಿಂದ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಆಲೋಚನೆ ಆರಂಭಿಸಿದ್ದೆ ಎಂದಿದ್ದಾರೆ.

"ನನ್ನ ಗಾಯಗಳ ಬಗ್ಗೆ ಜನರು ಸಂವೇದನಾಶೀಲರಾಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಬಹಳಷ್ಟು ಜನರು ಇತರೆ ಗಾಯಾಳುಗಳನ್ನ ಬೆಂಬಲಿಸಿದ್ದಾರೆ ಆದರೆ ನನಗೆ ನೀಡಲಾಗಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಕಡಿಮೆ ಆಟವಾಡಿಲ್ಲ, ನಾನು ತಂಡಕ್ಕಾಗಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಆದ್ರೆ ಗಾಯಗೊಂಡಾಗ ಸಿಕ್ಕ ಬೆಂಬಲ ಕಡಿಮೆ'' ಎಂದು ಆರ್. ಅಶ್ವಿನ್ ಅಳಲು ತೋಡಿಕೊಂಡಿದ್ದಾರೆ.

ಆರ್‌. ಅಶ್ವಿನ್ ಅವರು ಸಾಮಾನ್ಯವಾಗಿ ಸಹಾಯಕ್ಕಾಗಿ ಎದುರು ನೋಡುವುದಿಲ್ಲ. ಆದರೆ ಕೆಲವೊಮ್ಮೆ ತಂಡಕ್ಕೆ ಕಂಬ್ಯಾಕ್ ಮಾಡಲು ಬೆಂಬಲದ ಅಗತ್ಯವಿದೆ ಎಂದಿದ್ದಾರೆ. ತಮ್ಮ ಗಾಯದ ಸಮಯವನ್ನು ನೆನಪಿಸಿಕೊಂಡ ಅಶ್ವಿನ್, ಪ್ರತಿ ಎಸೆತವನ್ನು ವಿಭಿನ್ನವಾಗಿ ಬೌಲ್ ಮಾಡಬೇಕಾಗಿತ್ತು. ಏಕೆಂದರೆ ಚೆಂಡು ಪುಟಿಯುವ ಮೂಲಕ ಅದು ಮೊಣಕಾಲುಗಳ ನೋವಿನ ಮೇಲೆ ಪರಿಣಾಮ ಬೀರುತ್ತಿತ್ತು. ಪ್ರತಿ ಎಸೆತದಲ್ಲೂ ಹೊಸತನ್ನು ಮಾಡಬೇಕಾಗಿದ್ದು, ಓವರ್‌ನ ಅಂತ್ಯದ ವೇಳೆಗೆ ವಿರಾಮದ ಅಗತ್ಯವಿರುತ್ತಿತ್ತು ಎಂದು ಅಶ್ವಿನ್ ಹಳೆಯ ದಿನಗಳನ್ನ ನೆನಪಿಸಿಕೊಂಡಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಆರ್. ಅಶ್ವಿನ್ 427 ವಿಕೆಟ್‌ಗಳ ಸರದಾರನಾಗಿದ್ದಾರೆ. ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಯ ಜೊತೆಗೆ ಕಪಿಲ್ ದೇವ್ ರೆಕಾರ್ಡ್ ಮುರಿಯಲು ಇನ್ನು ಕೆಲವೇ ವಿಕೆಟ್‌ಗಳು ಬಾಕಿ ಉಳಿದಿವೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್, ಭಾರತದ ಲೆಜೆಂಡ್ರಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದರು.

ವಿಶ್ವದ Top 10 ನಾಯಕರಲ್ಲಿ Modiಗೆ ಎಷ್ಟನೇ ಸ್ಥಾನ? | Oneindia Kannada

Story first published: Wednesday, December 22, 2021, 11:56 [IST]
Other articles published on Dec 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X