ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಲಿ ರಾಬಿನ್ಸನ್‌ಗೆ ಪ್ರತಿಕ್ರಿಯಿಸಿ ವಿಶೇಷ ಟ್ವೀಟ್ ಮಾಡಿದ ಆರ್‌ ಅಶ್ವಿನ್

Ravichandran Ashwin reacted on Ollie Robinsons Suspension

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಬೌಲಿಂಗ್ ಆಲ್ ರೌಂಡರ್ ಆಲಿ ರಾಬಿನ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತಾಗಿದ್ದಾರೆ. 8 ವರ್ಷಗಳ ಹಿಂದೆ ಟ್ವಿಟರ್‌ನಲ್ಲಿ ಮಾಡಿದ್ದ ಅಸಂಬದ್ಧ ಟ್ವೀಟ್‌ಗಳು ವೈರಲ್ ಆಗಿದ್ದರಿಂದ ಪ್ರತಿಭಾನ್ವಿತ ಆಟಗಾರನನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ.

ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!

ಟೆಸ್ಟ್‌ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಆಲಿ ರಾಬಿನ್ಸನ್ ಅಮಾನತಾಗಿರುವುದಕ್ಕೆ ಭಾರತದ ಪ್ರಮುಖ ಸ್ಪಿನ್ನರ್ ಆರ್‌ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ. ರಾಬಿನ್ಸನ್ ಅಮಾನತು, ಸಾಮಾಜಿಕ ಜಾಲತಾಣಗಳಿಂದಾಗುವ ಅನಾಹುತಗಳ ಬಗ್ಗೆ ಅಶ್ವಿನ್ ವಿಶೇಷ ಸಂದೇಶ ಬರೆದುಕೊಂಡಿದ್ದಾರೆ.

'ಕೆಲ ವರ್ಷಗಳ ಹಿಂದೆ ಆಲಿ ರಾಬಿನ್ಸನ್ ಮೂಡಿಸಿದ್ದ ನಕಾರಾತ್ಮಕ ಭಾವನೆಗಳ ಬಗ್ಗೆ ನನಗೆ ಅರ್ಥವಾಗುತ್ತದೆ. ಆದರೆ ತನ್ನ ಟೆಸ್ಟ್ ವೃತ್ತಿ ಬದುಕಿನ ಆರಂಭದಲ್ಲೇ ರಾಬಿನ್ಸನ್ ಅಮಾನತಾಗಿರುವುದಕ್ಕೆ ಅಷ್ಟೇ ಬೇಸರವಾಗಿದೆ. ಸಾಮಾಜಿಕ ಜಾಲತಾಣದಲ್ಲಿನ ನಮ್ಮ ನಡೆ ನಮ್ಮ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದಕ್ಕೆ ರಾಬಿನ್ಸನ್ ಅಮಾನತು ಬಲವಾದ ಸೂಚನೆಯಾಗಿದೆ' ಎಂದು ಅಶ್ವಿನ್ ಬರೆದುಕೊಂಡಿದ್ದಾರೆ.

ಲಂಡನ್‌ನ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ನ್ಯೂಜಿಲೆಂಡ್-ಇಂಗ್ಲೆಂಡ್‌ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಆಲಿ ರಾಬಿನ್ಸನ್ ಅದ್ಭುತ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 4, ದ್ವಿತೀಯ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಮುರಿದು ಆಂಗ್ಲ ತಂಡಕ್ಕೆ ಬಲ ತುಂಬಿದ್ದರು. ಆದರೆ ಮುಂದಿನ ಪಂದ್ಯದಲ್ಲಿ ರಾಬಿನ್ಸನ್ ಆಡಲು ಅವಕಾಶ ಇಲ್ಲವಾಗಿದೆ. ಅಂದ್ಹಾಗೆ, ಆರಂಭಿಕ ಟೆಸ್ಟ್‌ ಡ್ರಾ ಅನ್ನಿಸಿದೆ.

Story first published: Monday, June 7, 2021, 16:47 [IST]
Other articles published on Jun 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X