ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪತ್ನಿ ಜೊತೆ ಕೋವಿಡ್ 19 ವ್ಯಾಕ್ಸಿನ್ ಪಡೆದ ಆಲ್‌ರೌಂಡರ್ ರವೀಂದ್ರ ಜಡೇಜಾ

Ravindra Jadeja and his wife Rivaba receive first dose of Covid-19 vaccine

ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ತಮ್ಮ ಪತ್ನಿ ರಿವಬಾ ಜೊತೆಗೆ ಶುಕ್ರವಾರ ಕೋರೊನಾ ಲಸಿಕೆಯ ಮೊದಲ ಡೋಸ್‌ಅನ್ನು ರಾಜ್‌ಕೋಟ್‌ನಲ್ಲಿ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜಡೇಜಾ ಮನೆಯಲ್ಲಿಯೇ ಇರುವುದರ ಜೊತೆಗೆ ಅಗತ್ಯವಿರುವವರಿಗೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ರವೀಂದ್ರ ಜಡೇಜಾ ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿರುವ 20 ಆಟಗಾರರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್‌ನ ಈ ಪ್ರವಾಸದಲ್ಲಿ 6 ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಲಿದ್ದು ಇದರಲ್ಲಿ ಒಂದು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವಾಗಿದೆ. ಇದಾದ ನಂತರ ಐದಯ ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ ಭಾರತ.

ಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕ

ಇನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಚೇತೇಶ್ವರ್ ಪೂಜಾರ, ವೇಗಿ ಉಮೇಶ್ ಯಾದವ್, ಅನುಭವಿ ಆಟಗಾರ ಶಿಖರ್ ಧವನ್ ಕೂಡ ಈಗಾಗಲೇ ಕೊರೊನಾ ವೈರಸ್ ಮೊದಲ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಮೂರುವರೆ ತಿಂಗಳ ಕಾಲ ನಡೆಯುವ ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ಆಟಗಾರರ ಬಳಗ ಜೂನ್ 2 ರಂದು ಪ್ರಯಾಣವನ್ನು ಬೆಳೆಸಲಿದೆ. ಇದಕ್ಕೂ ಮುನ್ನ ಎಲ್ಲಾ ಆಟಗಾರರು ಮುಂಬೈಗೆ ಬಂದು ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಈ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಕೂಡ ಕೊರೊನಾ ವೈರಸ್‌ನ ಮೊದಲ ಡೋಸ್‌ಅನ್ನು ಬಿಸಿಸಿಐ ಪಡೆಯುವಂತೆ ಸೂಚನೆ ನೀಡಿದ್ದು ಎರಡನೇ ಡೋಸ್‌ಅನ್ನು ಇಂಗ್ಲೆಂಡ್‌ನಲ್ಲಿ ನೀಡುವ ವ್ಯವಸ್ಥೆಯನ್ನು ಬಿಸಿಸಿಐ ಮಾಡಲಿಕೊಳ್ಳಲಿದೆ.

Story first published: Friday, May 14, 2021, 17:25 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X