ವಿಶಾಖಪಟ್ಟಣ, ಅಕ್ಟೋಬರ್ 4: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ. ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ 200 ಟೆಸ್ಟ್ ವಿಕೆಟ್ ಮೈಲಿಗಲ್ಲು ಸ್ಥಾಪಿಸಿದ್ದಾರೆ.ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್ ಮ್ಯಾನ್ ರೋಹಿತ್!ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 4) ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಡೀನ್ ಎಲ್ಗರ್ ಅವರ ವಿಕೆಟ್ ನೊಂದಿಗೆ ಜಡೇಜಾ 200 ವಿಕೆಟ್ ದಾಖಲೆ ನಿರ್ಮಿಸಿದ್ದಾರೆ.ಭಾರತ vs ದ.ಆಫ್ರಿಕಾ: ಸ್ಮಿತ್ ದಾಖಲೆ ಮುರಿದ ಮಯಾಂಕ್ ಅಗರ್ವಾಲ್ಭಾರತ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದಲ್ಲಿ 200 ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಜಡೇಜಾ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. 30ರ ಹರೆಯದ ಜಡೇಜಾ 99.3ನೇ ಓವರ್ ನಲ್ಲಿ ಎಲ್ಗರ್ ವಿಕೆಟ್ ಪಡೆದಾಗ ದಾಖಲೆ ನಿರ್ಮಾಣವಾಯ್ತು. ದಕ್ಷಿಣ ಆಫ್ರಿಕಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಎಲ್ಗರ್, 160 ರನ್ ಬಳಿಕ ಜಡೇಜಾ ಓವರ್ ನಲ್ಲಿ ಚೇತೇಶ್ವರ ಪೂಜಾರಗೆ ಕ್ಯಾಚಿತ್ತು ನಿರ್ಗಮಿಸಿದರು. ಇದಕ್ಕೂ ಮುನ್ನ ಜಡೇಜಾ ಆಫ್ರಿಕಾದ ಡೇನ್ ಪೀಡ್ಟ್ ಅವರನ್ನು 0 ರನ್ ಗೆ ಪೆವಿಲಿಯನ್ ಗಟ್ಟಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದಲ್ಲಿ 200 ವಿಕೆಟ್ ಪಡೆದ ದಾಖಲೆ ಪಟ್ಟಿಯಲ್ಲಿ ಸ್ಪಿನ್ನರ್ ಆರ್ ಅಶ್ವಿನ್ ಮೊದಲ ಸ್ಥಾನದಲ್ಲಿದ್ದರೆ, ಜಡೇಜಾ ದ್ವಿತೀಯ ಸ್ಥಾನದಲ್ಲಿದ್ದಾರೆ. 200 ವಿಕೆಟ್ ಸಾಧನೆಗೆ ಅಶ್ವಿನ್ 37 ಪಂದ್ಯಗಳನ್ನು ಬಳಸಿಕೊಂಡಿದ್ದರೆ, ಜಡೇಜಾ 44 ಪಂದ್ಯಗಳನ್ನು ಬಳಸಿಕೊಂಡಿದ್ದಾರೆ. ಟೆಸ್ಟ್ ನಲ್ಲಿ ವೇಗದಲ್ಲಿ 200 ವಿಕೆಟ್ ಪಡೆದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ (46 ಪಂದ್ಯ), 4ನೇ ಸ್ಥಾನದಲ್ಲಿ ಕನ್ನಡಿಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ (47 ಪಂದ್ಯ) ಇದ್ದಾರೆ. ಕುಂಬ್ಳೆ 1998ರಲ್ಲಿ ಜಿಂಬ್ವಾಬ್ವೆ ವಿರುದ್ಧ ಈ ಸಾಧನೆ ಮಾಡಿದ್ದರು. ಇನ್ನು 5ನೇ ಸ್ಥಾನದಲ್ಲಿ ಬಿಎಸ್ ಚಂದ್ರಶೇಖರ್ (48 ಪಂದ್ಯ) ಇದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತ 502 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ಬೇಗನೆ ವಿಕೆಟ್ ಕಳೆದುಕೊಳ್ಳಲಾರಂಭಿಸಿತಾದರೂ ಆರಂಭಿಕ ಬ್ಯಾಟ್ಸ್ ಮನ್ ಡೀನ್ ಎಲ್ಗರ್ ತಂಡಕ್ಕೆ ಬಲವಾಗಿ ನಿಂತರು. ಎಲ್ಗರ್ 160, ಕ್ವಿಂಟನ್ ಡಿ ಕಾಕ್ 111, ಫಾ ಡು ಪ್ಲೆಸಿಸ್ 55 ರನ್ ನೊಂದಿಗೆ ಆಫ್ರಿಕಾ ಶುಕ್ರವಾರ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದು 385 ರನ್ ಮಾಡಿತ್ತು.