ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಘಟಾನುಘಟಿಗಳ ಹಿಂದಿಕ್ಕಿ ದಾಖಲೆ ಬರೆದ ರವೀಂದ್ರ ಜಡೇಜಾ!

Ravindra Jadeja beats stalwarts of Indian cricket to Test milestone

ವಿಶಾಖಪಟ್ಟಣ, ಅಕ್ಟೋಬರ್ 4: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ. ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಜಡೇಜಾ 200 ಟೆಸ್ಟ್‌ ವಿಕೆಟ್‌ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 4) ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ಅವರ ವಿಕೆಟ್‌ನೊಂದಿಗೆ ಜಡೇಜಾ 200 ವಿಕೆಟ್ ದಾಖಲೆ ನಿರ್ಮಿಸಿದ್ದಾರೆ.

ಭಾರತ vs ದ.ಆಫ್ರಿಕಾ: ಸ್ಮಿತ್ ದಾಖಲೆ ಮುರಿದ ಮಯಾಂಕ್ ಅಗರ್ವಾಲ್ಭಾರತ vs ದ.ಆಫ್ರಿಕಾ: ಸ್ಮಿತ್ ದಾಖಲೆ ಮುರಿದ ಮಯಾಂಕ್ ಅಗರ್ವಾಲ್

ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದಲ್ಲಿ 200 ವಿಕೆಟ್‌ ಪಡೆದ ಸಾಧಕರ ಪಟ್ಟಿಯಲ್ಲಿ ಜಡೇಜಾ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ.

ಅತೀ ಪ್ರಮುಖ ವಿಕೆಟ್

ಅತೀ ಪ್ರಮುಖ ವಿಕೆಟ್

30ರ ಹರೆಯದ ಜಡೇಜಾ 99.3ನೇ ಓವರ್‌ನಲ್ಲಿ ಎಲ್ಗರ್ ವಿಕೆಟ್ ಪಡೆದಾಗ ದಾಖಲೆ ನಿರ್ಮಾಣವಾಯ್ತು. ದಕ್ಷಿಣ ಆಫ್ರಿಕಾ ಪರ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಎಲ್ಗರ್, 160 ರನ್ ಬಳಿಕ ಜಡೇಜಾ ಓವರ್‌ನಲ್ಲಿ ಚೇತೇಶ್ವರ ಪೂಜಾರಗೆ ಕ್ಯಾಚಿತ್ತು ನಿರ್ಗಮಿಸಿದರು. ಇದಕ್ಕೂ ಮುನ್ನ ಜಡೇಜಾ ಆಫ್ರಿಕಾದ ಡೇನ್ ಪೀಡ್ಟ್ ಅವರನ್ನು 0 ರನ್‌ಗೆ ಪೆವಿಲಿಯನ್‌ಗಟ್ಟಿದ್ದರು.

ಅಶ್ವಿನ್‌ಗೆ ಅಗ್ರ ಸ್ಥಾನ

ಅಶ್ವಿನ್‌ಗೆ ಅಗ್ರ ಸ್ಥಾನ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 200 ವಿಕೆಟ್ ಪಡೆದ ದಾಖಲೆ ಪಟ್ಟಿಯಲ್ಲಿ ಸ್ಪಿನ್ನರ್ ಆರ್ ಅಶ್ವಿನ್ ಮೊದಲ ಸ್ಥಾನದಲ್ಲಿದ್ದರೆ, ಜಡೇಜಾ ದ್ವಿತೀಯ ಸ್ಥಾನದಲ್ಲಿದ್ದಾರೆ. 200 ವಿಕೆಟ್‌ ಸಾಧನೆಗೆ ಅಶ್ವಿನ್ 37 ಪಂದ್ಯಗಳನ್ನು ಬಳಸಿಕೊಂಡಿದ್ದರೆ, ಜಡೇಜಾ 44 ಪಂದ್ಯಗಳನ್ನು ಬಳಸಿಕೊಂಡಿದ್ದಾರೆ.

ಪಟ್ಟಿಯಲ್ಲಿ ಕನ್ನಡಿಗ ಕುಂಬ್ಳೆ

ಪಟ್ಟಿಯಲ್ಲಿ ಕನ್ನಡಿಗ ಕುಂಬ್ಳೆ

ಟೆಸ್ಟ್‌ನಲ್ಲಿ ವೇಗದಲ್ಲಿ 200 ವಿಕೆಟ್ ಪಡೆದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಸ್ಪಿನ್‌ ದಿಗ್ಗಜ ಹರ್ಭಜನ್ ಸಿಂಗ್ (46 ಪಂದ್ಯ), 4ನೇ ಸ್ಥಾನದಲ್ಲಿ ಕನ್ನಡಿಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ (47 ಪಂದ್ಯ) ಇದ್ದಾರೆ. ಕುಂಬ್ಳೆ 1998ರಲ್ಲಿ ಜಿಂಬ್ವಾಬ್ವೆ ವಿರುದ್ಧ ಈ ಸಾಧನೆ ಮಾಡಿದ್ದರು. ಇನ್ನು 5ನೇ ಸ್ಥಾನದಲ್ಲಿ ಬಿಎಸ್ ಚಂದ್ರಶೇಖರ್ (48 ಪಂದ್ಯ) ಇದ್ದಾರೆ.

ಎಲ್ಗರ್ ಭರ್ಜರಿ ಬ್ಯಾಟಿಂಗ್

ಎಲ್ಗರ್ ಭರ್ಜರಿ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತ 502 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಬೇಗನೆ ವಿಕೆಟ್‌ ಕಳೆದುಕೊಳ್ಳಲಾರಂಭಿಸಿತಾದರೂ ಆರಂಭಿಕ ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ತಂಡಕ್ಕೆ ಬಲವಾಗಿ ನಿಂತರು. ಎಲ್ಗರ್ 160, ಕ್ವಿಂಟನ್ ಡಿ ಕಾಕ್ 111, ಫಾ ಡು ಪ್ಲೆಸಿಸ್ 55 ರನ್‌ನೊಂದಿಗೆ ಆಫ್ರಿಕಾ ಶುಕ್ರವಾರ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದು 385 ರನ್ ಮಾಡಿತ್ತು.

Story first published: Friday, October 4, 2019, 18:48 [IST]
Other articles published on Oct 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X