ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಜಡೇಜಾ, ಭರ್ಜರಿಯಾಗಿ ಮರಳುತ್ತೇನೆ ಎಂದು ಟ್ವೀಟ್

Ravindra Jadeja completes surgery, ready for recuperation and return

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಎಡಗೈ ಹೆಬ್ಬೆರಳಿಗೆ ಗಾಯವಾಗಿರುವ ಕಾರಣ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಸಿಡ್ನಿಯಲ್ಲಿ ಡ್ರಾದಲ್ಲಿ ಅಂತ್ಯವಾದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೂರನೇ ದಿನದಾಟದಲ್ಲಿ ಜಡೇಜಾ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರು.

ಬುಧವಾರ ಸಿಡ್ನಿಯ ಆಸ್ಪತ್ರೆಯಲ್ಲಿ ಜಡೇಜಾ ಹೆಬ್ಬೆರಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನ ಜೊತೆಗೆ ಜಡೇಜಾ "ಕೆಲ ದಿನಗಳ ಕಾಲ ವಿಶ್ರಾಂತಿ. ಆದರೆ ಶೀಘ್ರದಲ್ಲೇ ಭರ್ಜರಿಯಾಗಿ ಖಂಡಿತಾ ಮರಳುತ್ತೇನೆ" ಎಂದು ಜಡೇಜಾ ಬರೆದುಕೊಂಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆ

ರವೀಂದ್ರ ಜಡೇಜಾ ಶೀಘ್ರದಲ್ಲೇ ಚೇತರಿಕೆ ಕಾಣಲು ಬಿಸಿಸಿಐನ ಅಧಿಕೃತ ಟ್ವಿಟ್ಟರ್ ಖಾತೆಯಿಂದಲು ಶುಭಹಾರೈಸಲಾಗಿದೆ. ಬಿಸಿಸಿಐ ಮೂಲಗಳ ಮಾಹಿತಿಯ ಪ್ರಕಾರ ರವೀಂದ್ರ ಜಡೇಜಾ ಭಾರತಕ್ಕೆ ಮರಳಲಿದ್ದು ಬೆಂಗಳೂರಿನ ಎನ್‌ಸಿಎನಲ್ಲಿ ರಿಹ್ಯಾಬ್‌ಗೆ ಒಳಗಾಗಲಿದ್ದಾರೆ.

"ಸೋಮವಾರ ಅಂತ್ಯಕಂಡ ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಪಂದ್ಯದ ಮೂರನೇ ದಿನದಾಟದಲ್ಲಿ ರವೀಮದ್ರ ಜಡೇಜಾ ಗಾಯಗೊಂಡಿದ್ದಾರೆ. ಬಳಿಕ ಸ್ಕ್ಯಾನಿಂಗ್ ನಡೆಸಲಾಗಿದ್ದು ಹೆಬ್ಬೆರಳಿನ ಮೂಳೆ ಸ್ಥಳಾಂತರವಾಗಿರುವುದು ಪತ್ತೆಯಾಗಿದೆ" ಎಂದು ಸೋಮವಾರ ಬಿಡುಗಡೆ ಮಾಡಿದ ಪ್ರಕಟನೆಯಲ್ಲಿ ಬಿಸಿಸಿಐ ಮಾಹಿತಿ ನೀಡಿತ್ತು.

ಹನುಮ ವಿಹಾರಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಕ್ಕೆ: ಇಂಗ್ಲೆಂಡ್ ಟೆಸ್ಟ್‌ಗೂ ಅನುಮಾನಹನುಮ ವಿಹಾರಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಕ್ಕೆ: ಇಂಗ್ಲೆಂಡ್ ಟೆಸ್ಟ್‌ಗೂ ಅನುಮಾನ

ಈ ಗಾಯದ ಗಾರಣದಿಂದಾಗಿ ಜಡೇಜಾ ಕೆಲ ವಾರಗಳ ಕಾಲ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾಗೆ ಅಗತ್ಯವಿದ್ದರೆ ರವೀಂದ್ರ ಜಡೇಜಾ ಬ್ಯಾಟಿಂಗ್ ನಡೆಸಲು ಸಿದ್ಧರಾಗಿದ್ದರು. ಆದರೆ ಆರ್ ಅಶ್ವಿನ್ ಹಾಗೂ ಹನುಮ ವಿಹಾರಿ ಅಜೇಯ ಆಟವಾಡುವ ಮೂಲಕ ಜಡೇಜಾ ಕಣಕ್ಕಿಳಿಯದಂತೆ ನೋಡಿಕೊಂಡಿದ್ದರು.

Story first published: Tuesday, January 12, 2021, 14:48 [IST]
Other articles published on Jan 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X