ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK ಜೊತೆಗೆ ರವೀಂದ್ರ ಜಡೇಜಾ ಒಳಜಗಳ? ಸಿಎಸ್‌ಕೆ ಜೊತೆಗಿನ ಫೋಟೊಗಳು ಡಿಲೀಟ್!

Ravindra jadeja

ಐಪಿಎಲ್ 2022ರ ಸೀಸನ್‌ನಲ್ಲಿ ಅನಿರೀಕ್ಷಿತವಾಗಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ, ಕಳಪೆ ಫಾರ್ಮ್‌ನಿಂದಾಗಿ ಇಡೀ ಸೀಸನ್‌ನಲ್ಲಿ ಟೀಕೆಗೆ ಒಳಗಾಗಿದ್ದರು. ದೀರ್ಘ ಕಾಲದಿಂದ ಸಿಎಸ್‌ಕೆ ತಂಡದ ನಿರ್ಣಾಯಕ ಭಾಗವಾಗಿದ್ದ ಜಡೇಜಾ ಕಳೆದ ಸೀಸನ್‌ನಲ್ಲಿ ಅನಿರೀಕ್ಷಿತವಾಗಿ ತಂಡದ ನಾಯಕತ್ವಕ್ಕೆ ಬಂದಿದ್ದರು.

ಜಡ್ಡು ನಿರೀಕ್ಷೆಗೆ ತಕ್ಕಂತೆ ಆಡಲು ವಿಫಲವಾದ ನಂತರ, ಅವರು ಗಾಯಗಳಿಂದ ಹೊರಗುಳಿದರು ಮತ್ತು ಸೀಸನ್‌ ಅನ್ನು ಕಳೆದುಕೊಂಡರು. ಪರಿಣಾಮ ಮತ್ತೆ ಎಂಎಸ್ ಧೋನಿ ನಾಯಕರಾಗಿ ಮುಂದುವರೆದರು.

ಈ ಸಂದರ್ಭದಲ್ಲಿ ಜಡೇಜಾ ನಾಯಕತ್ವದ ಟೀಕೆ ಎದುರಿಸಿ ಹೊರಬಂದಾಗಿನಿಂದ, ಸಿಎಸ್‌ಕೆ ಮತ್ತು ಜಡೇಜಾ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳು ಬಂದವು. ಈಗ ಜಡೇಜಾ ಕಡೆಯಿಂದ ಮತ್ತೊಮ್ಮೆ ಆ ಕುರಿತು ವರದಿಯಾಗಿದ್ದು, ಸಿಎಸ್‌ಕೆ ಜತೆಗಿನ ಜಡೇಜಾ ಭಿನ್ನಾಭಿಪ್ರಾಯದ ಮುಂದುವರಿದಿದೆ.

ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಫೋಟೋಗಳನ್ನ ಡಿಲೀಟ್ ಮಾಡಿದ್ರಾ?

ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಫೋಟೋಗಳನ್ನ ಡಿಲೀಟ್ ಮಾಡಿದ್ರಾ?

ಜಡೇಜಾ ಕಳೆದ ಎರಡು ಸೀಸನ್‌ಗಳಲ್ಲಿ ಸಿಎಸ್‌ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳು ಮತ್ತು ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಿಂದ ತೆಗೆದುಹಾಕಿದ್ದಾರೆ. ಇದರೊಂದಿಗೆ ಜಡೇಜಾ ಸಿಎಸ್‌ಕೆ ತೊರೆಯುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಕನಾದ ಬಳಿಕ ದೊಡ್ಡ ಬಿಕ್ಕಟ್ಟು ಎದುರಾದಾಗ ಸಿಗಬೇಕಾದ ಬೆಂಬಲ ಸಿಗದಿರುವುದು ಜಡೇಜಾ ಅವರ ಸಮಸ್ಯೆ. ಜಡೇಜಾ ಅವರನ್ನು ಧೋನಿ ಪರೋಕ್ಷವಾಗಿ ಟೀಕಿಸಿದ ಅವರು ನಿರಾಶೆಗೊಂಡಿರಬೇಕು.

ಐಪಿಎಲ್‌ 15ನೇ ಸೀನಸ್‌ನಲ್ಲಿ ಕಳಪೆ ಆಟ

ಐಪಿಎಲ್‌ 15ನೇ ಸೀನಸ್‌ನಲ್ಲಿ ಕಳಪೆ ಆಟ

ಕಳೆದ ಋತುವಿನಲ್ಲಿ ಅವರು 10 ಪಂದ್ಯಗಳನ್ನು ಆಡಿದರು ಮತ್ತು ಕೇವಲ 116 ರನ್ ಮತ್ತು ಐದು ವಿಕೆಟ್‌ಗಳನ್ನು ಗಳಿಸಿದರು. ನಾಯಕನಾಗಿ ಇದು ತೃಪ್ತಿದಾಯಕ ಪ್ರದರ್ಶನವಲ್ಲ. ಮುಂದಿನ ವರ್ಷವೂ ಧೋನಿ ಸಿಎಸ್‌ಕೆ ನಾಯಕರಾಗಲಿದ್ದಾರೆ. ಈ ವೇಳೆ ಜಡೇಜಾ ಅರ್ಧಕ್ಕೆ ಔಟಾದಾಗ ಸ್ವತಃ ಧೋನಿಯೇ ತಂಡವನ್ನು ಮುನ್ನಡೆಸಿದರು.

Ind vs Eng 2nd T20: ಪಾರ್ಥೀವ್ ಪಟೇಲ್ ಪ್ಲೇಯಿಂಗ್ 11 ಪ್ರೆಡಿಕ್ಷನ್, ಹೂಡಾ ಬದಲು ಕೊಹ್ಲಿ?

ಧೋನಿ ಜೊತೆಗೂ ಜಡೇಜಾ ಭಿನ್ನಾಭಿಪ್ರಾಯ?

ಧೋನಿ ಜೊತೆಗೂ ಜಡೇಜಾ ಭಿನ್ನಾಭಿಪ್ರಾಯ?

ಸಿಎಸ್‌ಕೆ ಮತ್ತು ಜಡೇಜಾ ನಡುವಿನ ಸಮಸ್ಯೆಯ ಜೊತೆಗೆ, ಜಡೇಜಾ ಅವರು ಧೋನಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬುದು ಸತ್ಯ. ಈ ಬಾರಿ ಧೋನಿ ಹುಟ್ಟುಹಬ್ಬಕ್ಕೆ ಜಡೇಜಾ ವಿಶ್ ಮಾಡದೇ ಇರುವುದೇ ಇದಕ್ಕೆ ಸಾಕ್ಷಿ. ಜಡೇಜಾ ಅವರ ಬೆಳವಣಿಗೆಯಲ್ಲಿ ನಾಯಕ ಧೋನಿ ನಿರ್ಣಾಯಕ ಪಾತ್ರ ವಹಿಸಿದರು. ಹೀಗಾಗಿ, ಜಡೇಜಾ ಅವರು ಧೋನಿ ಬಗ್ಗೆ ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ಹೊಂದಿದ್ದರು.

ಅಶ್ವಿನ್‌ರನ್ನೇ ತಂಡದಿಂದ ಕೈ ಬಿಟ್ಟ ಮೇಲೆ ಕೊಹ್ಲಿಯನ್ನ ಏಕೆ ಬಿಡಬಾರದು? ಕಪಿಲ್ ದೇವ್ ಪ್ರಶ್ನೆ

ಪ್ರತಿ ಬಾರಿ ಧೋನಿ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದ ಜಡ್ಡು

ಪ್ರತಿ ಬಾರಿ ಧೋನಿ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದ ಜಡ್ಡು

ಜಡೇಜಾ ಪ್ರತಿ ಬಾರಿ ಹುಟ್ಟುಹಬ್ಬದಂದು ಧೋನಿಗೆ ಶುಭ ಹಾರೈಸುತ್ತಾರೆ. ಆದರೆ 15ನೇ ಸೀಸನ್ ನಂತರ ಈಗ ಅವರನ್ನು ಅಭಿನಂದಿಸದಿರುವುದು ಧೋನಿ ಜತೆ ಜಡೇಜಾಗೆ ಭಿನ್ನಾಭಿಪ್ರಾಯವಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ. ಜುಲೈ 7ರಂದು ಧೋನಿ ಇಂಗ್ಲೆಂಡ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಅನೇಕ ಕ್ರಿಕೆಟಿಗರು ಧೋನಿ ಶೂಭ ಹಾರೈಸಿದ್ರೂ, ಜಡ್ಡು ಮಾತ್ರ ವಿಶ್ ಮಾಡಲಿಲ್ಲ.

ಐಪಿಎಲ್‌ 2022ರ ಸೀಸನ್‌ನಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರ ಜಡೇಜಾ.

ಜಡೇಜಾ ಸಿಎಸ್‌ಕೆ ತಂಡವನ್ನ ತೊರೆಯುತ್ತಾರ?

ಜಡೇಜಾ ಸಿಎಸ್‌ಕೆ ತಂಡವನ್ನ ತೊರೆಯುತ್ತಾರ?

ರವೀಂದ್ರ ಜಡೇಜಾ ಅವರು ಮುಂದಿನ ವರ್ಷ ಸಿಎಸ್‌ಕೆ ಅನ್ನು ತೊರೆದು ಹೊಸ ಹಂತವನ್ನು ತಲುಪುತ್ತಾರೆ ಎಂದು ವರದಿಯಾಗಿದೆ. ಜಡೇಜಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚುವ ಬಹುಮುಖ ಆಲ್ ರೌಂಡರ್. ಆದ್ದರಿಂದ, ಅವರನ್ನು ತಂಡಕ್ಕೆ ಕರೆತರಲು ಹಲವು ಫ್ರಾಂಚೈಸಿಗಳು ಇರುತ್ತವೆ. ಆದರೆ ಬಹಳ ವರ್ಷಗಳಿಂದ ಆಡುತ್ತಿರುವ ತಂಡದಿಂದ ಹೊರನಡೆಯುತ್ತಾರ ಕಾದು ನೋಡಬೇಕಾಗಿದೆ.

ಜಡೇಜಾ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡದಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲೂ ಜಡೇಜಾ ಅವರನ್ನು ಭಾರತ ಪ್ರಮುಖ ಆಟಗಾರನಾಗಿ ನೋಡುತ್ತಿದೆ. ಕಳೆದ ಋತುವಿನಲ್ಲಿ ಪ್ಲೇಆಫ್‌ನಿಂದ ಹೊರಗುಳಿದಿದ್ದ ಸಿಎಸ್‌ಕೆಗೆ ಮುಂಬರುವ ಋತುವಿನಲ್ಲಿ ಬಲವಾದ ಪುನರಾಗಮನದ ಅಗತ್ಯವಿದೆ. ತಂಡದಿಂದ ಹಲವು ಪ್ರಮುಖ ಆಟಗಾರರನ್ನು ಹೊರಗಿಟ್ಟು ಬಲಿಷ್ಠ ಪುನರಾಗಮನದ ಗುರಿಯನ್ನು ಸಿಎಸ್‌ಕೆ ಹೊಂದಿದೆ.

Story first published: Saturday, July 9, 2022, 14:02 [IST]
Other articles published on Jul 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X