ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ಗೆ ಭಾರತದ 'ರೆಟ್ರೋ ಜಂಪರ್' ಪ್ರದರ್ಶಿಸಿದ ರವೀಂದ್ರ ಜಡೇಜಾ

Ravindra Jadeja displays Indias retro jumper for WTC final against New Zealand

ನವದೆಹಲಿ: ಭಾರತದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಶನಿವಾರ (ಮೇ 29) ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಧರಿಸಲಿರುವ ಜಂಪರ್‌ನ ಚಿತ್ರ ಹಾಕಿಕೊಂಡಿದ್ದಾರೆ. ಇದು ರೆಟ್ರೋ ಜಂಪರ್. ಭಾರತ ತಂಡ ಇಂಥದ್ದೇ ಜಂಪರ್‌ ಅನ್ನು ಹಿಂದೆ ಧರಿಸುತ್ತಿತ್ತು.

 ಐಪಿಎಲ್ 2021 ಯುಎಇಗೆ ಸ್ಥಳಾಂತರ, ಬಿಸಿಸಿಐ ಅಧಿಕೃತ ಘೋಷಣೆ ಐಪಿಎಲ್ 2021 ಯುಎಇಗೆ ಸ್ಥಳಾಂತರ, ಬಿಸಿಸಿಐ ಅಧಿಕೃತ ಘೋಷಣೆ

ಜೂನ್ 18ರಿಂದ 22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಭಾರತ ತಂಡ ಮತ್ತು ನ್ಯೂಜಿಲೆಂಡ್ ಸಿದ್ಧವಾಗಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ ಚೊಚ್ಚಲ ಆವೃತ್ತಿಯ ಫೈನಲ್ ಇದು. ಹೀಗಾಗಿ ಈ ವಿಶೇಷ ಪಂದ್ಯವನ್ನು ಸ್ಮರಣೀಯವಾಗಿರಿಸಲು ಟೀಮ್ ಇಂಡಿಯಾ ವಿಶೇಷ ಜಂಪರ್‌ನೊಂದಿಗೆ ಮೈದಾನಕ್ಕಿಳಿಯಲಿದೆ.

ತೆಂಡೂಲ್ಕರ್ ಪುತ್ರಿ ಸಾರಾ ಜೊತೆಗಿನ 'ಗುಸುಗುಸು' ಬಗ್ಗೆ ಬಾಯ್ತೆರೆದ ಗಿಲ್ತೆಂಡೂಲ್ಕರ್ ಪುತ್ರಿ ಸಾರಾ ಜೊತೆಗಿನ 'ಗುಸುಗುಸು' ಬಗ್ಗೆ ಬಾಯ್ತೆರೆದ ಗಿಲ್

ರವೀಂದ್ರ ಜಡೇಜಾ ಶನಿವಾರ ಟ್ವಿಟರ್‌ನಲ್ಲಿ ಜಂಪರ್ ಹಾಕಿರುವ ಫೋಟೋ ಹಾಕಿ, '90s ರಿವೈಂಡ್ (ನೆನಪು)' ಎಂದು ಬರೆದುಕೊಂಡಿದ್ದಾರೆ. ಈ ಸ್ಲೀವ್‌ಲೆಸ್ ಸ್ವೆಟರ್‌ನಲ್ಲಿ ಪ್ರಾಯೋಜಕರ ಲೋಗೋ ಕೂಡ ಇಲ್ಲ. ಯಾಕೆಂದರೆ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಡೆಸುತ್ತಿರುವ ಪಂದ್ಯವಾಗಿರುವುದರಿಂದ ತಂಡಗಳ ಜಂಪರ್‌ನಲ್ಲಿ ಆಯಾ ತಂಡಗಳ ಪ್ರಾಯೋಜಕರ ಲೋಗೋ ಇರುವುದಿಲ್ಲ.

ಜಂಪರ್‌ನ ಎಡ ಎದೆಯ ಭಾಗದಲ್ಲಿ ಬಿಸಿಸಿಐ ಲೋಗೋ ಚಿಕ್ಕದಾಗಿದೆ. ಇನ್ನೊಂದು ಬದಿ ಐಸಿಸಿ WTC ಫೈನಲ್ ಎಂಬ ಲೋಗೋ ಇದೆ. ಇದು 90ರ ದಶಕದಲ್ಲಿ ಭಾರತೀಯ ತಂಡ ಧರಿಸುತ್ತಿದ್ದ ಜಂಪರ್‌ನ ವಿನ್ಯಾಸದ ರೀತಿಯಲ್ಲೇ ಇದೆ. ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಭಾರತೀಯ ತಂಡ ಜೂನ್ 2ರಂದು ಭಾರತ ತೊರೆಯಲಿದೆ.

Story first published: Saturday, May 29, 2021, 16:45 [IST]
Other articles published on May 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X