ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ಷೇತ್ರ ರಕ್ಷಕನನ್ನು ಹೆಸರಿಸಿದ ಆಕಾಶ್ ಚೋಪ್ರಾ

Ravindra Jadeja is best Indian fielder-Aakash Chopra

ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಭಾರತದ ಸಾರ್ವಕಾಲಿಕ ಶ್ರೇಷ್ಠ ಪೀಲ್ಡರ್ ಎಂದು ಮಾಜಿ ಕ್ರಿಕೆಟಿಗ ಕಾಮೆಂಟೆಟರ್ ಆಕಾಶ್ ಚೋಪ್ರಾ ಹೇಳಿದ್ದಾರೆ. ರವೀಂದ್ರ ಜಡೇಜಾ ಅವರನ್ನು ರಾಕೆಟ್ ಮ್ಯಾನ್ ಎಂದು ಆಕಾಶ್ ಚೋಪ್ರಾ ಬಣ್ಣಿಸಿದ್ದಾರೆ.

ಭಾರತದ ಆರು ಶ್ರೇಷ್ಠ ಫೀಲ್ಡರ್‌ಗಳನ್ನು ಆಕಾಶ್ ಚೋಪ್ರಾ ಹೆಸರಿಸಿದ್ದರು ಅದರಲ್ಲಿ ರವೀಂದ್ರ ಜಡೇಡಾ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳಿದ್ದಾರೆ. ಆತನೋರ್ವ ಖಂಡಿತವಾಗಿಯೂ ವಿಶೇಷ ಫೀಲ್ಡರ್. ಆತ ರಾಕೆಟ್ ಮ್ಯಾನ್ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ನಾಯಕನಾಗಿ ಧೋನಿಯ ಯಶಸ್ಸಿಗೆ ನಾಯಕನಾಗಿ ಧೋನಿಯ ಯಶಸ್ಸಿಗೆ "ಆತನೇ" ಕಾರಣ ಎಂದ ಗೌತಮ್ ಗಂಭೀರ್

ರವೀಂದ್ರ ಜಡೇಜಾ ಪ್ರಸಕ್ತ ಆಟಗಾರರ ಪೈಕಿ ಅತ್ಯಂತ ಶ್ರೇಷ್ಠ ಫೀಲ್ಡರ್ ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆತ ಅಂಗಳವನ್ನು ಆಕ್ರಮಿಸುವ ರೀತಿಯನ್ನು ಗಮನಿಸಿ. ಆತನ ಕೈಯ ಎಸೆತ ಅತ್ಯಂತ ನಿಖರವಾಗಿರುತ್ತದೆ. ಆತ ಕೇವಲ ಸ್ಲಿಪ್‌ನಲ್ಲಿ ಮಾತ್ರ ಉತ್ತಮ ಫೀಲ್ಡರ್ ಅಲ್ಲ. ಅದೇ ಈಗ ಪ್ರಮುಖ ವಿಚಾರವಾಗುತ್ತದೆ ಎಂದಿದ್ದಾರೆ ಆಕಾಶ್ ಚೋಪ್ರಾ.

ಆಕಾಶ್ ಚೋಪ್ರಾ ಹೆಸರಿಸಿದ ಆರು ಶ್ರೇಷ್ಠ ಫೀಲ್ಡರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಾಜಿ ನಾಯಕ ಕಪಿಲ್ ದೇವ್ ಅವರು ಕೂಡ ಈ ಪಟ್ಟಿಯಲ್ಲಿದ್ದು 1983ರ ವಿಶ್ವಕಪ್‌ನ ಫೈನಲ್‌ನಲ್ಲಿ ವಿವಿಯನ್ ರಿಚರ್ಡ್ ಅವರ ಕ್ಯಾಚ್ ಅತ್ಯಂತ ಶ್ರೇಷ್ಠ ಕ್ಯಾಚ್‌ಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ಬಗ್ಗೆ ವಿರಾಟ್ ಕೊಹ್ಲಿಗೆ ಸೌರವ್ ಗಂಗೂಲಿ ಕಠಿಣ ಸಂದೇಶಆಸ್ಟ್ರೇಲಿಯಾ ಪ್ರವಾಸದ ಬಗ್ಗೆ ವಿರಾಟ್ ಕೊಹ್ಲಿಗೆ ಸೌರವ್ ಗಂಗೂಲಿ ಕಠಿಣ ಸಂದೇಶ

ಆರು ಮಂದಿ ಶ್ರೇಷ್ಠ ಭಾರತೀಯ ಫೀಲ್ಡರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ರವೀಂದ್ರ ಜಡೇಜಾ ಪಡೆದುಕೊಂಡಿದ್ದರೆ ಎರಡನೇ ಸ್ಥಾನವನ್ನು ಸುರೇಶ್ ರೈನಾ ಮೂರು ಹಾಗೂ ನಾಲ್ಕನೇ ಸ್ಥಾನ ಕ್ರಮವಾಗಿ ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಪಡೆದಿದ್ದರೆ ಐದನೇ ಸ್ಥಾನದಲ್ಲಿ ಕಪಿಲ್ ದೇವ್ ಇದ್ದಾರೆ. ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.

Story first published: Monday, July 13, 2020, 10:08 [IST]
Other articles published on Jul 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X