ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುರಿದುಬಿತ್ತು ಜಡ್ಡು-ಚೆನ್ನೈ ಸಂಬಂಧ: 2023ಕ್ಕೆ ಬೇರೆ ತಂಡ ಸೇರಲಿದ್ದಾರೆ ಜಡೇಜಾ; ಇಲ್ಲಿವೆ ಸಾಕ್ಷಿಗಳು

Ravindra Jadeja likely to leave CSK and play for other franchise in IPL 2023; Here are the proofs

ರವೀಂದ್ರ ಜಡೇಜಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಖಾಯಂ ಸದಸ್ಯನಾಗಿ ಗುರುತಿಸಿಕೊಂಡಿರುವ ಆಟಗಾರ. ಇನ್ನು ಆಟಗಾರರನ್ನು ಸುಲಭವಾಗಿ ಬಿಟ್ಟುಕೊಡದ ಫ್ರಾಂಚೈಸಿ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ತನ್ನ ಖಾಯಂ ಸದಸ್ಯನಾದ ರವೀಂದ್ರ ಜಡೇಜಾರನ್ನು ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿದೆ. ಹೌದು, ಮೂಲಗಳ ಪ್ರಕಾರ ರವೀಂದ್ರ ಜಡೇಜಾ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ಬೇರೆ ಫ್ರಾಂಚೈಸಿ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.

ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ20 ರನ್ ಎಷ್ಟು? 30 ರನ್ ದಾಟಲಾಗದೇ ಪರದಾಟ!ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ20 ರನ್ ಎಷ್ಟು? 30 ರನ್ ದಾಟಲಾಗದೇ ಪರದಾಟ!

ಎಲ್ಲಾ ಚೆನ್ನಾಗಿಯೇ ಇದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿತ್ತು. ಆದರೆ ಈ ಬೃಹತ್ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ದೊಡ್ಡ ಮಟ್ಟದಲ್ಲಿ ವಿಫಲವಾದ ರವೀಂದ್ರ ಜಡೇಜಾ ಸಾಲು ಸಾಲು ಪಂದ್ಯಗಳಲ್ಲಿ ಸೋಲನ್ನುಂಡರು. ಹೀಗೆ ಅದೇ ಟೂರ್ನಿ ಮಧ್ಯದಲ್ಲಿಯೇ ರವೀಂದ್ರ ಜಡೇಜಾ ಎಂಎಸ್ ಧೋನಿಗೆ ನಾಯಕತ್ವವನ್ನು ಹಸ್ತಾಂತರಿಸಲಿದ್ದಾರೆ ಎಂಬ ಸುದ್ದಿ ಬಂತು. ಆದರೆ ಇಲ್ಲಿ ರವೀಂದ್ರ ಜಡೇಜಾ ನಾಯಕತ್ವವನ್ನು ಸ್ವತಃ ಹಸ್ತಾಂತರಿಸಿದ್ರಾ ಅಥವಾ ವಿಫಲರಾದ ಕಾರಣಕ್ಕೆ ಫ್ರಾಂಚೈಸಿಯೇ ನಾಯಕತ್ವವನ್ನು ಕಸಿದುಕೊಂಡಿತ್ತಾ ಎಂಬ ಅನುಮಾನವಿತ್ತು.

ಜಿಂಬಾಬ್ವೆ ಸರಣಿಯಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್ ಬದಲು ಆರ್‌ಸಿಬಿ ಆಟಗಾರನಿಗೆ ಸ್ಥಾನಜಿಂಬಾಬ್ವೆ ಸರಣಿಯಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್ ಬದಲು ಆರ್‌ಸಿಬಿ ಆಟಗಾರನಿಗೆ ಸ್ಥಾನ

ಇನ್ನು ನಾಯಕತ್ವದಿಂದ ಕೆಳಗಿಳಿದ ನಂತರ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದದ್ದು ಈ ಅನುಮಾನ ಹೆಚ್ಚಾಗಲು ಮತ್ತಷ್ಟು ಕಾರಣವಾಗಿತ್ತು. ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ನಂತರವೂ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರು ಫ್ರಾಂಚೈಸಿ ಹಾಗೂ ರವೀಂದ್ರ ಜಡೇಜಾ ನಡುವೆ ಎಲ್ಲವೂ ಚೆನ್ನಾಗಿಯೇ ಇದೆ ಎಂಬ ಹೇಳಿಕೆ ನೀಡಿದ್ದರು. ಆದರೆ, ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಹಾಗೂ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ಬಹಳ ದೂರ ಸರಿದಿದ್ದಾರೆ ಎನ್ನುವುದಕ್ಕೆ ಈ ಕೆಳಕಂಡ ವಿಷಯಗಳು ಪುಷ್ಟಿ ನೀಡುತ್ತವೆ.

ಜಡ್ಡು ಚೆನ್ನೈ ಬಿಡಲಿದ್ದಾರೆ ಎಂಬುದಕ್ಕೆ ಇವೇ ಸಾಕ್ಷಿ

ಜಡ್ಡು ಚೆನ್ನೈ ಬಿಡಲಿದ್ದಾರೆ ಎಂಬುದಕ್ಕೆ ಇವೇ ಸಾಕ್ಷಿ

ಜಡೇಜಾ ಚೆನ್ನೈ ತಂಡ ಬಿಡುತ್ತಾರೆ ಎಂಬುದಕ್ಕೆ ಈ ಕೆಳಕಂಡ ಬೆಳವಣಿಗೆಗಳೇ ಸಾಕ್ಷಿ

* ರವೀಂದ್ರ ಜಡೇಜಾ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಜೊತೆ ಆನ್‌ಲೈನ್ ಅಥವಾ ಆಫ್‌ಲೈನ್ ಸಂಪರ್ಕಕ್ಕಾಗಲಿ ಸಿಕ್ಕಿಲ್ಲ.

* ಇನ್ನು ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಹಾಗೂ ಪ್ರತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ರವೀಂದ್ರ ಜಡೇಜಾರನ್ನು ಅನ್‌ಫಾಲೋ ಮಾಡಿದೆ. ಇಷ್ಟು ದಿನ ಆನ್‌ಲೈನ್‌ನಲ್ಲಿ ಚೆನ್ನಾಗಿಯೇ ಇದ್ದ ಸಂಬಂಧ ಇದೀಗ ಹಾಳಾಗಿರುವುದು ಬಿರುಕಿಗೆ ಪ್ರಮುಖ ಸಾಕ್ಷಿ ಎನ್ನಬಹುದು.

* ಇನ್ನು ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಕುರಿತಾಗಿ ಈ ಹಿಂದೆ ಹಂಚಿಕೊಂಡಿದ್ದ ಎಲ್ಲಾ ಪೋಸ್ಟ್‌ಗಳನ್ನೂ ಸಹ ಡಿಲೀಟ್ ಮಾಡಿದ್ದಾರೆ.

* ಅಷ್ಟೇ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ಎಂ ಎಸ್ ಧೋನಿ ಹುಟ್ಟುಹಬ್ಬದ ಅಂಗವಾಗಿ ಮಾಡಿದ್ದ ಶುಭಾಶಯದ ವಿಡಿಯೋದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರೂ ಕಾಣಿಸಿಕೊಂಡು ಧೋನಿಗೆ ಶುಭಕೋರಿದ್ದರು. ಆದರೆ, ರವೀಂದ್ರ ಜಡೇಜಾ ಮಾತ್ರ ಈ ವಿಡಿಯೋದಲ್ಲಿ ಭಾಗವಹಿಸಿರಲಿಲ್ಲ.

ಹೀಗೆ ಈ ಮೇಲಿನ ಎಲ್ಲಾ ಅಂಶಗಳನ್ನೂ ಸಹ ಗಮನಿಸಿದರೆ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ದೂರ ಸರಿದಿರುವುದು ಬಹುತೇಕ ಖಚಿತ ಎನ್ನಬಹುದು.

ಮುಂದಿನ ಬಾರಿ ಬೇರೆ ಫ್ರಾಂಚೈಸಿ ಪರ ಆಡ್ತಾರೆ ಜಡೇಜಾ

ಮುಂದಿನ ಬಾರಿ ಬೇರೆ ಫ್ರಾಂಚೈಸಿ ಪರ ಆಡ್ತಾರೆ ಜಡೇಜಾ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಚರ್ಚೆಗೆ ಒಳಗಾಗಿರುವ ವಿಷಯವೆಂದರೆ ರವೀಂದ್ರ ಜಡೇಜಾ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟು ಬೇರೆ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದು. ಜಡೇಜಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸಂಬಂಧ ಬಹುತೇಕ ಕಡಿತಗೊಂಡಿದ್ದು, ಜಡೇಜಾ ಬೇರೆ ತಂಡದ ಪರ ಆಡಲಿದ್ದಾರೆ ಎಂಬ ಸುದ್ದಿಯನ್ನು ಬಲ್ಲ ಮೂಲಗಳು ತಿಳಿಸಿವೆ.

ಯಾವ ತಂಡ ಸೇರಬಹುದು ಜಡೇಜಾ

ಯಾವ ತಂಡ ಸೇರಬಹುದು ಜಡೇಜಾ

ಇನ್ನು ಜಡೇಜಾ ಮುಂದಿನ ಬಾರಿ ಬೇರೆ ಫ್ರಾಂಚೈಸಿ ಪರ ಆಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಜಡೇಜಾ ಬೇರೆ ಯಾವ ತಂಡದ ಪರ ಕಣಕ್ಕಿಳಿಯಬಹುದು ಎಂಬ ಚರ್ಚೆ ಶುರುವಾಗಿವೆ. ಇನ್ನು ರವೀಂದ್ರ ಜಡೇಜಾ ಓರ್ವ ಅದ್ಭುತ ಆಲ್‌ರೌಂಡರ್ ಆಗಿರುವ ಕಾರಣ ಇತರೆ ತಂಡಗಳು ಜಡೇಜಾರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ.

Story first published: Tuesday, August 16, 2022, 20:14 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X