ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿ ಟೆಸ್ಟ್: ಅಗತ್ಯಬಿದ್ದರೆ ಅಂತಿಮ ದಿನ ಚುಚ್ಚುಮದ್ದಿನ ಸಹಾಯದಿಂದ ಜಡೇಜಾ ಕಣಕ್ಕೆ

Ravindra jadeja might play in sydney test last day if team needed

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಈಗ ರೋಚಕ ಘಟ್ಟವನ್ನು ತಲುಪಿದೆ. ಆದರೆ ಇದಕ್ಕೂ ಮುನ್ನ ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಮೂರನೇ ದಿನದಾಟದಲ್ಲಿ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಮಧ್ಯೆ ಅಂತಿಮ ದಿನದಾಟಕ್ಕೂ ಮುನ್ನ ಸಣ್ಣದೊಂದು ನಿರಾಳತೆಯ ಸುದ್ಧಿ ತಂಡದ ಮೂಲಗಳಿಂದ ದೊರೆತಿದೆ.

ಅಂತಿಮ ದಿನದಾಟದಲ್ಲಿ ಭಾರತ ಉಳಿದಿರುವ 8 ವಿಕೆಟ್‌ಗಳಿಂದ 309 ರನ್ ಗಳಿಸಬೇಕಾದ ಅನಿವಾರ್ಯತೆಯಿದೆ. ಇದರಲ್ಲಿ ರವೀಂದ್ರ ಜಡೇಜಾ ಅಂತಿಮ ದಿನ ಆಡದೇ ಇದ್ದರೆ ಭಾರತಕ್ಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಅಂತಿಮ ದಿನ ರವೀಂದ ಜಡೇಜಾ ನೋವು ನಿವಾರಕ ಔಷಧಿ ಹಾಗೂ ಚುಚ್ಚುಮದ್ದು ಸೇವಿಸಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಭಾರತ vs ಆಸ್ಟ್ರೇಲಿಯಾ: ಭಾರತಕ್ಕೆ 407 ರನ್‌ಗಳ ಗುರಿ ನೀಡಿದ ಆಸಿಸ್ ಪಡೆಭಾರತ vs ಆಸ್ಟ್ರೇಲಿಯಾ: ಭಾರತಕ್ಕೆ 407 ರನ್‌ಗಳ ಗುರಿ ನೀಡಿದ ಆಸಿಸ್ ಪಡೆ

ಮೂರನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಅವರ ಎಡಗೈಯ ಹೆಬ್ಬೆರಳಿಗೆ ಗಾಯವಾಗಿತ್ತು. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಜಡೇಜಾ ಫೀಲ್ಡ್‌ಗೇ ಇಳಿದಿರಲಿಲ್ಲ. ಈ ಮಧ್ಯೆ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಜಡೇಜಾ ಹೊರಗುಳಿಯುವುದು ಕೂಡ ಖಚಿತವಾಗಿದೆ.

ಜಡೇಜಾ ಗಾಯದ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ ಮೂಲಗಳು ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಸಂಪೂರ್ಣವಾಗಿ ಚೇತರಿಕೆ ಕಾಣಲು ಅವರಿಗೆ ನಾಲ್ಕರಿಂದ ಆರು ವಾರಗಳ ಅವಶ್ಯಕತೆಯಿದೆ ಎಂದಿದೆ.

ಭಾರತ vs ಆಸ್ಟ್ರೇಲಿಯಾ: ಕೊನೆಯ ದಿನ ಭಾರತದ ಗೆಲುವಿಗೆ 309 ರನ್‌ಗಳ ಅವಶ್ಯಕತೆಭಾರತ vs ಆಸ್ಟ್ರೇಲಿಯಾ: ಕೊನೆಯ ದಿನ ಭಾರತದ ಗೆಲುವಿಗೆ 309 ರನ್‌ಗಳ ಅವಶ್ಯಕತೆ

ರವೀಂದ್ರ ಜಡೇಜಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದು ತಂಡಕ್ಕೆ ಆಸರೆಯಾಗಿದ್ದಾರೆ. ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲೂ ಜಡೇಜಾ 28ರನ್‌ಗಳ ಅಮೂಲ್ಯ ಕೊಡುಗೆಯ ಜೊತೆಗೆ ಬೌಲಿಂಗ್‌ನಲ್ಲಿ 4 ವಿಕೆಟ್ ಕಿತ್ತು ತಂಡಕ್ಕೆ ನೆರವಾಗಿದ್ದರು.

Story first published: Sunday, January 10, 2021, 23:12 [IST]
Other articles published on Jan 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X