ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಮಿಮಿಕ್ ಮಾಡಿದ ರವೀಂದ್ರ ಜಡೇಜಾ: ಗಮ್ಮತ್ತಿನ ವಿಡಿಯೋ

Ravindra Jadeja mimics Virat Kohli for Heads Up challenge with Rohit Sharma

ನವದೆಹಲಿ, ಆಗಸ್ಟ್ 9: ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ನಾಯಕ ವಿರಾಟ್ ಕೊಹ್ಲಿ ಅವರನ್ನು ಮಿಮಿಕ್ ಮಾಡಿರುವ ಗಮ್ಮತ್ತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅದೂ ಜಡೇಜಾ, ಕೊಹ್ಲಿ ಅವರನ್ನು ನಕಲಿ ಮಾಡಿದ್ದ ರೋಹಿತ್ ಶರ್ಮಾ ಮುಂದೆ.

ಭಾರತ 'ಎ' vs ವೆಸ್ಟ್ ಇಂಡೀಸ್ 'ಎ': ಇತಿಹಾಸ ನಿರ್ಮಿಸಿದ ಶುಭ್‌ಮಾನ್‌ ಗಿಲ್ಭಾರತ 'ಎ' vs ವೆಸ್ಟ್ ಇಂಡೀಸ್ 'ಎ': ಇತಿಹಾಸ ನಿರ್ಮಿಸಿದ ಶುಭ್‌ಮಾನ್‌ ಗಿಲ್

'ಹೆಡ್ಸ್ ಅಪ್‌ ಚಾಲೆಂಜ್' ಅನ್ನೋ ಆಟವಿದು. ಒಬ್ಬ ಆಟಗಾರ ತನ್ನ ತಂಡದ ಇತರ ಆಟಗಾರರ ಹೆಸರಿರುವ ಕಾರ್ಡ್ ಎತ್ತಿಕೊಳ್ಳುತ್ತಾನೆ. ಆತ ಬೋರ್ಡ್ ನೋಡದೆ ಇನ್ನೊಬ್ಬನಿಗೆ ಆ ಕಾರ್ಡ್ ತೋರಿಸುತ್ತಾನೆ. ಇನ್ನೊಬ್ಬ ಕಾರ್ಡ್‌ನಲ್ಲಿರುವ ಹೆಸರಿನ ಆಟಗಾರನ್ನು ಅನುಕರಣೆ ಮಾಡಬೇಕು. ಮಾತನಾಡುವಂತಿಲ್ಲ. ಕಾರ್ಡ್ ಹಿಡಿದಾತ ಬರೀ ಅನುಕರಣೆ ನೋಡಿ ಅದು ಯಾವ ಆಟಗಾರ ಅನ್ನೋದನ್ನು ಹೇಳಬೇಕು.

ಕಾರ್ಡ್ ಎತ್ತುವ ಸರದಿ ರೋಹಿತ್‌ದು. ಅನುಕರಣೆ ಜಡೇಜಾಗೆ. ರೋಹಿತ್ ಎತ್ತಿದ ಮೊದಲ ಕಾರ್ಡ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ಹೆಸರಿತ್ತು. ರೋಹಿತ್ ಇದನ್ನು ತಟ್ಟನೆ ಹೇಳಿಬಿಟ್ಟರು. ಆದರೆ ಎರಡನೇ ಕಾರ್ಡ್‌ನಲ್ಲಿರುವ ಹೆಸರನ್ನು ಸುಲಭವಾಗಿ ಅಂದಾಜಿಸಲು ರೋಹಿತ್ ಅವರಿಂದಾಗಲಿಲ್ಲ.

ಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊ

ಎರಡನೇ ಬಾರಿ ಜಡೇಜಾ ಕೊಂಚ ಸುಳಿವಿನೊಂದಿಗೆ ಅನುಕರಣೆ ಮಾಡಿದಾಗ ರೋಹಿತ್, ಅದು ಕೊಹ್ಲಿ ಅನ್ನೋದನ್ನು ಹೇಳಿಬಿಟ್ಟರು. ರೋಹಿತ್-ಜಡೇಜಾ ಆಟಕ್ಕೆ ಪಕ್ಕದಲ್ಲಿ ಕುಳಿತಿದ್ದ ಕೊಹ್ಲಿ ಕೂಡ ಹಲ್ಲುಬಿಟ್ಟರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಅಂದ್ಹಾಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ, ಆಗಸ್ಟ್ 11ರಂದು ದ್ವಿತೀಯ ಏಕದಿನ ಪಂದ್ಯವನ್ನಾಡಲಿದೆ.

Story first published: Friday, August 9, 2019, 16:33 [IST]
Other articles published on Aug 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X