ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ಪಂದ್ಯದಿಂದ ನಾನು ಕೆಟ್ಟವನಾಗಿ ತಂಡದಿಂದ ಹೊರಬಿದ್ದೆ, ಎಷ್ಟೋ ರಾತ್ರಿ ನಿದ್ರೆ ಮಾಡಿರಲಿಲ್ಲ: ರವೀಂದ್ರ ಜಡೇಜಾ

 Ravindra Jadeja reveals he had sleepless nights thinking about comeback to Team India
ಪಾಕ್ ವಿರುದ್ಧದ ಪಂದ್ಯದಲ್ಲಿ ನಾನು ವಿಲನ್ ಆಗಿದ್ದೆ | Oneindia Kannada

ರವೀಂದ್ರ ಜಡೇಜಾ, ಟೀಮ್ ಇಂಡಿಯಾ ಮಾತ್ರವಲ್ಲದೆ ವಿಶ್ವ ಕ್ರಿಕೆಟ್ ಕಂಡ ಅತ್ಯದ್ಭುತ ಆಲ್‌ರೌಂಡರ್ ಆಟಗಾರರಲ್ಲಿ ಒಬ್ಬರು. ತಮ್ಮ ಅತ್ಯುತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‍ನಲ್ಲಿಯೂ ನಿಸ್ಸೀಮರು. ಜಡೇಜಾ ಭಾರತ ತಂಡದ ಪರ ಆಪತ್ಬಾಂಧವನಾಗಿ ಅನೇಕ ಪಂದ್ಯದಲ್ಲಿ ಹೋರಾಟ ನಡೆಸಿ ಜಯವನ್ನು ತಂದು ಕೊಟ್ಟಿದ್ದಾರೆ. ಪ್ರಸ್ತುತ ಭಾರತ ತಂಡ ಯಾವುದೇ ಸರಣಿಗಳಿಗೂ ತಂಡಗಳನ್ನು ಪ್ರಕಟಿಸಿದರೆ ಆ ತಂಡಗಳಲ್ಲಿ ಖಡಾಖಂಡಿತವಾಗಿ ರವೀಂದ್ರ ಜಡೇಜಾ ಹೆಸರು ಇದ್ದೇ ಇರುತ್ತದೆ. ಇಷ್ಟು ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ರವೀಂದ್ರ ಜಡೇಜಾ ಹಿಂದೊಮ್ಮೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದೆ ಒಂದೂವರೆ ವರ್ಷಗಳ ಕಾಲ ಎದುರಿಸಿದ ಕಷ್ಟವನ್ನು ನೆನಪಿಸಿಕೊಂಡಿದ್ದಾರೆ.

ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 180 ರನ್‌ಗಳ ಗೆಲುವನ್ನು ಸಾಧಿಸಿತ್ತು. ಪಾಕಿಸ್ತಾನದ ವಿರುದ್ಧದ ಈ ಸೋಲಿನ ಬಳಿಕ ಟೀಮ್ ಇಂಡಿಯಾ ತಂಡ ಒತ್ತಡಕ್ಕೆ ಸಿಲುಕಿ ತಂಡದ ಆಡುವ ಬಳಗದಲ್ಲಿ ಭಾರೀ ಬದಲಾವಣೆಯನ್ನು ಮಾಡಿಕೊಂಡಿತು. ಈ ವೇಳೆ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡು ಹೊರಬಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಮತ್ತು ರವೀಂದ್ರ ಜಡೇಜಾ ಕಳಪೆ ಪ್ರದರ್ಶನ ನೀಡಿದರು ಎಂದು ಸಾಲುಸಾಲು ಟೀಕೆಗಳು ಕೂಡ ವ್ಯಕ್ತವಾದವು. ಈ ಘಟನೆ ಬಳಿಕ ರವೀಂದ್ರ ಜಡೇಜಾ ಎದುರಿಸಿದ ಕಷ್ಟಗಳನ್ನು ಈ ಕೆಳಕಂಡಂತೆ ಹಂಚಿಕೊಂಡಿದ್ದಾರೆ.

 ಒಂದೂವರೆ ವರ್ಷ ಅವಕಾಶ ಸಿಗದೇ ನೊಂದಿದ್ದೆ

ಒಂದೂವರೆ ವರ್ಷ ಅವಕಾಶ ಸಿಗದೇ ನೊಂದಿದ್ದೆ

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾದ ಆಡುವ ಬಳಗದಿಂದ ನನ್ನನ್ನು ಕೈಬಿಟ್ಟರು. ಅಲ್ಲಿಂದ ಸರಿಯಾಗಿ ಒಂದೂವರೆ ವರ್ಷದ ಕಾಲ ನನಗೆ ತಂಡದಲ್ಲಿ ಆಡುವ ಅವಕಾಶವೇ ಸಿಗಲಿಲ್ಲ, ಆಗ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದು ಜಡೇಜಾ ಹೇಳಿಕೊಂಡಿದ್ದಾರೆ.

5 ಗಂಟೆಯವರೆಗೂ ಮಲಗದೆ ಎದ್ದಿರುತ್ತಿದ್ದೆ

5 ಗಂಟೆಯವರೆಗೂ ಮಲಗದೆ ಎದ್ದಿರುತ್ತಿದ್ದೆ

ಟೀಮ್ ಇಂಡಿಯಾದಿಂದ ಸ್ಥಾನವನ್ನು ಕಳೆದುಕೊಂಡು ಹೊರಬಿದ್ದಾಗ ನಿದ್ರೆಯಿಲ್ಲದೆ ರಾತ್ರಿ ಪೂರಾ ತಂಡಕ್ಕೆ ಹೇಗೆ ಮರಳಬೇಕು ಎಂದು ಯೋಚಿಸುತ್ತಿದ್ದೆ. ಬೆಳಗಿನ ಜಾವ 5 ಗಂಟೆಯವರೆಗೂ ನಿದ್ರೆಯಿಲ್ಲದೆ ಪರಿತಪಿಸುತ್ತಿದ್ದೆ ಎಂದು ಜಡೇಜಾ ಹೇಳಿಕೊಂಡಿದ್ದಾರೆ.

ತಂಡದಲ್ಲಿದ್ದರೂ ಆಡುವ ಅವಕಾಶ ನೀಡುತ್ತಿರಲಿಲ್ಲ

ತಂಡದಲ್ಲಿದ್ದರೂ ಆಡುವ ಅವಕಾಶ ನೀಡುತ್ತಿರಲಿಲ್ಲ

ವಿವಿಧ ಸರಣಿಗಳಿಗೆ ಟೀಮ್ ಇಂಡಿಯಾ ತಂಡ ಪ್ರಕಟವಾದಾಗ ಜಡೇಜಾ ಹೆಸರು ಕೂಡ ಇರುತ್ತಿತ್ತು, ಆದರೆ ಆಡುವ ಬಳಗದಲ್ಲಿ ಮಾತ್ರ ಜಡೇಜಾರನ್ನು ಸೇರಿಸಿಕೊಳ್ಳದೇ ಕೈಬಿಡಲಾಗುತ್ತಿತ್ತು. ಹೀಗಾಗಿ ತಂಡದಲ್ಲಿ ಅವಕಾಶ ಸಿಗದೇ ಇದ್ದರೂ ಸಹ ತಂಡದ ಜೊತೆ ಪ್ರವಾಸವನ್ನು ಕೈಗೊಳ್ಳುತ್ತಿದೆ ಎಂದು ಜಡೇಜಾ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಮತ್ತೆ ಯಶಸ್ಸಿನ ಹಾದಿಗೆ ಮರಳಿದರು

ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಮತ್ತೆ ಯಶಸ್ಸಿನ ಹಾದಿಗೆ ಮರಳಿದರು

2018ರಲ್ಲಿ ನಡೆದ ಓವಲ್ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಆಡುವ ಅವಕಾಶವನ್ನು ಪಡೆದುಕೊಂಡು ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದರು. ಟೀಮ್ ಇಂಡಿಯಾ 6 ವಿಕೆಟ್‌ಗೆ 160 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಆಪತ್ಬಾಂಧವನ ಆಟವನ್ನಾಡಿದ ಜಡೇಜಾ 86 ರನ್ ಬಾರಿಸಿ ತಂಡದ ಮೊತ್ತ 332 ತಲುಪುವಂತೆ ಮಾಡಿದರು. ಈ ಪಂದ್ಯದ ಬಳಿಕ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಂಡ ಜಡೇಜಾ ಸತತವಾಗಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ.

Story first published: Monday, May 31, 2021, 19:04 [IST]
Other articles published on May 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X