ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೊಲೀಸ್ ಜೊತೆಗೆ ವಾಗ್ವಾದ ನಡೆಸಿದ ರವೀಂದ್ರ ಜಡೇಜಾ ಪತ್ನಿ ರಿವಾಬಾ

Ravindra Jadejas Wife Argued with police When Stopped For Not Wearing Mask

ರಾಜ್‌ಕೋಟ್, ಜುಲೈ 11: ಆಲ್ ರೌಂಡರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಮಹಿಳಾ ಪೊಲೀಸ್ ಪೇದೆಯ ಜೊತೆಗೆ ವಾಗ್ವಾದ ನಡೆಸಿದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಜೊತೆಗೆ ರಿವಾಬಾ ವಾದ ನಡೆಸಿರುವುದಾಗಿ ವರದಿಯಾಗಿದೆ.

ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿ

ಸೋಮವಾರ ರಾತ್ರಿ ಕಾರ್ ಚಲಾಯಿಸುವಾಗ ರವೀಂದ್ರ ಜಡೇಜಾ ಮಾಸ್ಕ್ ಧರಿಸಿದ್ದರು. ಆದರೆ ರಿವಾಬಾ ಮಾಸ್ಕ್ ಧರಿಸಿರಲಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಮಾಸ್ಕ್ ಯಾಕೆ ಧರಿಸಲಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ವಾಗ್ವಾದಕ್ಕಿಳಿದ ರಿವಾಬಾ ಬಿಗುವಿನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದಾರೆ.

 ಲಂಕಾ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜನ್ನು ಕಂಗೆಡಿಸಿದ್ದರು ಇಬ್ಬರು ವೇಗಿಗಳು: ಓರ್ವ ಭಾರತೀಯ ಲಂಕಾ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜನ್ನು ಕಂಗೆಡಿಸಿದ್ದರು ಇಬ್ಬರು ವೇಗಿಗಳು: ಓರ್ವ ಭಾರತೀಯ

ಮಾಸ್ಕ್ ಧರಿಸದ ಕಾರಣಕ್ಕಾಗಿ ರಿವಾಬಾ ಜಡೇಜಾ ಅವರಿದ್ದ ಕಾರನ್ನು ಹೆಡ್ ಕಾನ್ಸ್ಟೇಬಲ್ ಸೋನಿಯಾ ಗೋಸಯ್ ಅವರು ಕಿಸಾನ್‌ಪರಾ ಚೌಕ್ ಬಳಿ ತಡೆದರು. ಆಗ ಇಬ್ಬರ ಮಧ್ಯೆ ವಾದ ನಡೆದಿದೆ ಎಂದು ಡೆಪ್ಯುಟಿ ಕಮೀಶನರ್ ಆಫ್ ಪೊಲೀಸ್ ಮನೋಹರ್ ಸಿನ್ಹ ಜಡೇಜಾ ಪಿಟಿಐಗೆ ತಿಳಿಸಿದ್ದಾರೆ.

'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!

'ನಮ್ಮ ಮೊದಲ ತನಿಖೆಯಲ್ಲಿ ರವೀಂದ್ರ ಜಡೇಜಾ ಮಾಸ್ಕ್ ಧರಿಸಿಲ್ಲ ಎನ್ನಲಾಗಿತ್ತು. ಮತ್ತೆ ಆತನ ಪತ್ನಿ ರಿವಬಾ ಮಾಸ್ಕ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ಪೊಲೀಸ್ ಮತ್ತು ರಿವಾಬಾ ಮಧ್ಯೆ ಮಾತಿನ ಚಕಮಕಿ ನಡೆದಿದೆ,' ಎಂದು ಡಿಜಿಪಿ ಮನೋಹರ್ ಹೇಳಿದ್ದಾರೆ. 2018ರಲ್ಲಿ ಬಿಜೆಪಿಗೆ ಸೇರಿರುವ ರಿವಾಬಾ ಹಿಂದೆಯೂ ಪೊಲೀಸರ ಜೊತೆ ಕಿರಿಕ್ ಮಾಡಿ ಸುದ್ದಿಯಾಗಿದ್ದರು.

Story first published: Tuesday, August 11, 2020, 17:51 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X