ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಅರ್ಧಶತಕ ಬಾರಿಸಿ ಅಚ್ಚರಿಯ ದಾಖಲೆ ಬರೆದ ಜಡೇಜಾ

ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರವೀಂದ್ರ ಜಡೇಜಾ ಅವರು ಐಪಿಎಲ್ 2020ರಲ್ಲಿ ಅಚ್ಚರಿಯ ದಾಖಲೆ ಬರೆದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ(ಅ.2) ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರು ಅರ್ಧಶತಕ ಗಳಿಸಿ, ತಮ್ಮ ವೃತ್ತಿ ಬದುಕಿನಲ್ಲಿ ಹೊಸ ಮೈಲಿಗಲ್ಲು ದಾಟಿದರು.

ಸರಿ ಸುಮಾರು 13 ವರ್ಷ, 241 ಟ್ವೆಂಟಿ 20 ಪಂದ್ಯ, 174 ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳ ನಂತರ ರವೀಂದ್ರ ಜಡೇಜಾ ಮೊದಲ ಬಾರಿಗೆ 50 ರನ್ ಗಡಿ ದಾಟಿದರು. ಹೈದರಾಬಾದ್ ವಿರುದ್ಧ ರನ್ ಚೇಸಿನಲ್ಲಿ ಚೆನ್ನೈ ಸೋಲು ಕಂಡರೂ ಜಡೇಜಾ ಬ್ಯಾಟಿಂಗ್ ಎಲ್ಲರನ್ನು ಗಮನ ಸೆಳೆಯಿತು. 50ರನ್ ಗಳಿಸುತ್ತಿದ್ದಂತೆ ಎಂದಿನಂತೆ ಕತ್ತಿ ವರಸೆ ರೀತಿಯ ಶೈಲಿಯಲ್ಲಿ ಬ್ಯಾಟ್ ತಿರುಗಿಸಿ ತಮ್ಮ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಹ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.

ಎಬಿ ಡಿಗೆ ಹೋಲಿಸಿದರೆ ಭಾರತ ಮಿ. 360 ಬ್ಯಾಟ್ಸ್ ಮನ್ ಯಾರು?ಎಬಿ ಡಿಗೆ ಹೋಲಿಸಿದರೆ ಭಾರತ ಮಿ. 360 ಬ್ಯಾಟ್ಸ್ ಮನ್ ಯಾರು?

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 2) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 7 ರನ್ ರೋಚಕ ಜಯ ಗಳಿಸಿದೆ

ದೀರ್ಘಾವಧಿ ಅರ್ಧ ಶತಕ ಗಳಿಸಿದೆ ಅತಿ ಹೆಚ್ಚು ರನ್

ದೀರ್ಘಾವಧಿ ಅರ್ಧ ಶತಕ ಗಳಿಸಿದೆ ಅತಿ ಹೆಚ್ಚು ರನ್

ದೀರ್ಘಾವಧಿ ಅರ್ಧ ಶತಕ ಗಳಿಸಿದೆ ಅತಿ ಹೆಚ್ಚು ಟಿ20 ಹಾಗೂ ಐಪಿಎಲ್ ರನ್ ಗಳಿಸಿದ ಸಾಧನೆ ಜಡೇಜಾ ಹೆಸರಿನಲ್ಲಿತ್ತು. 31 ವರ್ಷ ವಯಸ್ಸಿನ ಚೆನ್ನೈ ತಂಡದ ಆಲ್ ರೌಂಡರ್ ಜಡೇಜಾ ಅವರು 35 ಎಸೆತಗಳಲ್ಲಿ 50ರನ್ ಪೂರೈಸಿದರು.

 ಡೆಕ್ಕನ್ ಚಾರ್ಜಸ್ ವಿರುದ್ಧ 48ರನ್ ಗಳಿಸಿದ್ದರು

ಡೆಕ್ಕನ್ ಚಾರ್ಜಸ್ ವಿರುದ್ಧ 48ರನ್ ಗಳಿಸಿದ್ದರು

ಇದಕ್ಕೂ ಮೊದಲು 2012ರಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 48ರನ್ ಗಳಿಸಿದ್ದೇ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. 2007ರ ಏಪ್ರಿಲ್ 4ರಂದು ಟಿ20 ಕ್ರಿಕೆಟ್ ಲೋಕಕ್ಕೆ ಜಡೇಜಾ ಎಂಟ್ರಿ ಕೊಟ್ಟರೂ 2009ರಲ್ಲಿ ಭಾರತ ಪರ ಟೀ20 ಆಡಿದರು. ಸುದೀರ್ಘ ಅವಧಿ 50ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಅಂತೂ ಈ ಪಂದ್ಯ ಈ ಸಾಧನೆ ಮಾಡಿದ್ದಾರೆ.

ಸುರೇಶ್ ರೈನಾ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ

2000+ ರನ್ ಮತ್ತು 100+ ವಿಕೆಟ್ ಪಡೆದ ಆಲ್‌ ರೌಂಡರ್

2000+ ರನ್ ಮತ್ತು 100+ ವಿಕೆಟ್ ಪಡೆದ ಆಲ್‌ ರೌಂಡರ್

ಐಪಿಎಲ್‌ನಲ್ಲಿ 2000+ ರನ್ ಮತ್ತು 100+ ವಿಕೆಟ್ ಪಡೆದ ಮೊದಲ ಆಲ್‌ ರೌಂಡರ್ ಎಂಬ ಹೆಗ್ಗಳಿಕೆಗೆ ಇದೇ ಐಪಿಎಲ್ ನಲ್ಲಿ ಜಡೇಜಾ ಪಾತ್ರರಾಗಿದ್ದಾರೆ. 174 ಪಂದ್ಯಗಳಿಂದ 123. 32 ಸ್ಟ್ರೈಕ್ ರೇಟ್ ಹಾಗೂ 24.09 ರನ್ ಸರಾಸರಿಯಂತೆ 2000ರನ್ ಗಳಿಸಿದ್ದಾರೆ. 7.66 ಎಕಾನಾಮಿ, 23.44 ಸ್ಟ್ರೈಕ್ ರೇಟ್ ನಂತೆ 110 ವಿಕೆಟ್ ಕಬಳಿಸಿದ್ದಾರೆ.

50ರನ್ ನಡುವೆಯೂ ಚೆನ್ನೈ ತಂಡಕ್ಕೆ ಸೋಲು

50ರನ್ ನಡುವೆಯೂ ಚೆನ್ನೈ ತಂಡಕ್ಕೆ ಸೋಲು

ಆದರೆ, ಜಡೇಜಾ ಅವರ 5 ಬೌಂಡರಿ, 2 ಸಿಕ್ಸರ್ ಇದ್ದ 50ರನ್ ನಡುವೆಯೂ ಚೆನ್ನೈ ತಂಡ ರನ್ ಚೇಸ್ ನಲ್ಲಿ ಎಡವಿತು. 165 ರನ್ ಚೇಸ್ ಮಾಡಿದ ಚೆನ್ನೈ ತಂಡವು 5 ವಿಕೆಟ್ ಕಳೆದುಕೊಂಡು 157ರನ್ ಮಾತ್ರ ಗಳಿಸಿ 7 ರನ್ ಗಳಿಂದ ಹೈದರಾಬಾದ್ ವಿರುದ್ಧ ಸೋಲುಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡವು ಪ್ರಿಯಂ ಗರ್ಗ್ 51 (26 ಎಸೆತ), ಅಭಿಷೇಕ್ ಶರ್ಮಾ 31 (24 ಎಸೆತ) ಕೊಡುಗೆಯೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಬಾರಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಫಾಫ್ ಡು ಪ್ಲೆಸಿಸ್ 22, ಎಂಎಸ್ ಧೋನಿ 47 (36 ಎಸೆತ), ರವೀಂದ್ರ ಜಡೇಜಾ 50 (35 ಎಸೆತ), ಸ್ಯಾಮ್ ಕರನ್ ಅಜೇಯ 15 ರನ್‌ ಸೇರ್ಪಡೆಯೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತು.

Story first published: Saturday, October 3, 2020, 9:22 [IST]
Other articles published on Oct 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X