ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತಕ್ಕೆ ಸೋಲು: ರವೀಂದ್ರ ಜಡೇಜಾ ಬೆನ್ನಿಗೆ ಅಂಟಿದ ಕಳಂಕ

Ravindra Jadeja So Far Scored 12 Half Centuries, How Many Matches India Won

ಚುಟುಕು ಕ್ರಿಕೆಟ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ, ಏಕದಿನ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಸೋಲುವ ಭೀತಿಯಲ್ಲಿದೆ. ಮೂರು ಏಕದಿನ ಸರಣಿಯ ಎರಡನೇ ಪಂದ್ಯವನ್ನೂ ಟೀಂ ಇಂಡಿಯಾ ಸೋತಿದೆ.

ಟಿ20 ಕ್ರಿಕೆಟ್ ನಲ್ಲಿ ಗೆದ್ದಾಗ ಹೊಗಳಿ ಅಟ್ಟಕೇರಿಸಿದ್ದ ಸಾಮಾಜಿಕ ಜಾಲತಾಣದವರು, ಸೋತಾಗ ಈಗ ನೆಲಕ್ಕಿಳಿಸುತ್ತಿದ್ದಾರೆ. ನ್ಯೂಜಿಲ್ಯಂಡ್ ವಿರುದ್ದದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋತಿದೆ.

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ!ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ!

ಏಕದಿನ ಪಂದ್ಯದಲ್ಲಿ ಸಾಧಾರಣ ಎನ್ನಬಹುದಾದ 274ರ ಗುರಿಯನ್ನು ತಲುಪಲಾಗದೇ, ಭಾರತ, 251 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು, 22 ರನ್ ನಿಂದ ಶರಣಾಗಿದೆ.

ಎರಡನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ನವದೀಪ್ ಶೈನಿಯವರ ಜೊತೆಯಾಟ, ಗೆಲುವಿನ ಆಸೆಯನ್ನು ಹುಟ್ಟುಹಾಕಿತ್ತು. ಜಡೇಜಾ 55 ರನ್ ಹೊಡೆದು ಅತಿಹೆಚ್ಚು ರನ್ ಹೊಡೆದ ಹೆಗ್ಗಳಿಕೆಗೆ ಪಾತ್ರವಾದರೂ, ಅವರಿಗೆ ಕಳಂಕವೊಂದನ್ನು ಸಾಮಾಜಿಕ ತಾಣದಲ್ಲಿ ಕಟ್ಟಲಾಗುತ್ತಿದೆ.

12 ವರ್ಷಗಳ ಹಿಂದೆ, ಶ್ರೀಲಂಕಾದ ವಿರುದ್ದ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ

12 ವರ್ಷಗಳ ಹಿಂದೆ, ಶ್ರೀಲಂಕಾದ ವಿರುದ್ದ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ

ಇಂದಿಗೆ (ಫೆ 8) ಸರಿಯಾಗಿ ಹನ್ನೆರಡು ವರ್ಷಗಳ ಹಿಂದೆ, ಶ್ರೀಲಂಕಾದ ವಿರುದ್ದ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ರವೀಂದ್ರ ಜಡೇಜಾ, ಇದುವರೆಗೆ, 164 ಪಂದ್ಯಗಳನ್ನು ಆಡಿದ್ದಾರೆ. 2,288 ರನ್ ಅನ್ನು ಇದುವರೆಗೆ ಹೊಡೆದಿರುವ ಜಡೇಜಾ, ಅವರ ಏಕದಿನ ಕ್ರಿಕೆಟ್ ನಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ 87.

ಇದುವರೆಗೆ ಒಂದೂ ಶತಕವನ್ನು ದಾಖಲಿಸದ ಜಡೇಜಾ

ಇದುವರೆಗೆ ಒಂದೂ ಶತಕವನ್ನು ದಾಖಲಿಸದ ಜಡೇಜಾ

ಏಕದಿನ ಕ್ರಿಕೆಟ್ ನಲ್ಲಿ ಇದುವರೆಗೆ ಒಂದೂ ಶತಕವನ್ನು ದಾಖಲಿಸದ ಜಡೇಜಾ, ಹನ್ನೆರಡು ಅರ್ಧಶತಕವನ್ನು ಹೊಡೆದಿದ್ದಾರೆ. 85.9 ಬ್ಯಾಟಿಂಗ್ ಸ್ಟ್ರೈಕ್ ರೇಟ್ ಅನ್ನು ಹೊಂದಿರುವ ಜಡೇಜಾ, ಹೊಡೆದ ಹನ್ನೆರಡು ಫಿಫ್ಟೀಸ್ ನಲ್ಲಿ, ಭಾರತ ಗೆದ್ದದ್ದು ಎಷ್ಟು ಪಂದ್ಯವನ್ನು? ಈ ವಿಚಾರದಲ್ಲಿ ಜಡೇಜಾ ಅನ್ ಲಕ್ಕಿ ಎಂದು ಟ್ವಿಟ್ಟಿಗರು ಹೇಳುತ್ತಿದ್ದಾರೆ. ಅದು ಹೀಗಿದೆ:

ಹನ್ನೆರಡು ಫಿಫ್ಟೀಸ್ ನಲ್ಲಿ ಭಾರತ ಗೆದ್ದದ್ದು ಕೇವಲ ಒಂದು ಪಂದ್ಯವನ್ನು

ಹನ್ನೆರಡು ಫಿಫ್ಟೀಸ್ ನಲ್ಲಿ ಭಾರತ ಗೆದ್ದದ್ದು ಕೇವಲ ಒಂದು ಪಂದ್ಯವನ್ನು

ಜಡೇಜಾ, ಅವರ ಹನ್ನೆರಡು ಫಿಫ್ಟೀಸ್ ನಲ್ಲಿ ಭಾರತ ಗೆದ್ದದ್ದು ಕೇವಲ ಒಂದು ಪಂದ್ಯವನ್ನು. ಅದು ಇಂಗ್ಲೆಂಡ್ ತಂಡದ ಎದುರು, ಆ ಪಂದ್ಯದಲ್ಲಿ ಜಡೇಜಾ 61 ರನ್ ಹೊಡೆದಿದ್ದರು. ಇದಲ್ಲದೇ, 66 ರನ್ ಹೊಡೆದ ನ್ಯೂಜಿಲ್ಯಾಂಡ್ ವಿರುದ್ದದ ಪಂದ್ಯ ಟೈ ಆಗಿತ್ತು.

ಹತ್ತು ಪಂದ್ಯವನ್ನು ಭಾರತ ಸೋತಿದೆ

ಹತ್ತು ಪಂದ್ಯವನ್ನು ಭಾರತ ಸೋತಿದೆ

ಇನ್ನು ಹತ್ತು ಪಂದ್ಯವನ್ನು ಭಾರತ ಸೋತಿದೆ. ಶ್ರೀಲಂಕಾ, ಆಸ್ಟ್ರೇಲಿಯಾ, ಪಾಕ್ ವಿರುದ್ದ ತಲಾ ಒಂದು ಪಂದ್ಯ, ಜಿಂಬಾವ್ವೆ, ಇಂಗ್ಲೆಂಡ್ ವಿರುದ್ದ ಎರಡು ಮತ್ತು ನ್ಯೂಜಿಲ್ಯಾಂಡ್ ವಿರುದ್ದ ನಾಲ್ಕು ಅರ್ಥಶತಕವನ್ನು ಜಡೇಜ ಹೊಡೆದಿದ್ದರು.

Story first published: Saturday, February 8, 2020, 22:07 [IST]
Other articles published on Feb 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X