ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯೋಯೋ ಟೆಸ್ಟ್‌ನಲ್ಲಿ ರಾಯುಡು ಫೇಲ್: ಇಂಗ್ಲೆಂಡ್ ಪ್ರವಾಸದಿಂದ ಔಟ್

Rayudu fails in yoyo test, set to be dropped from india squad

ಬೆಂಗಳೂರು, ಜೂನ್ 16: ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಅಂಬಾಟಿ ರಾಯುಡು ಅದ್ಭುತ ಪ್ರದರ್ಶನ ನೀಡಿದ್ದರು. ಈ ಕಾರಣದಿಂದ ಅವರು ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ ಏಕದಿನ ತಂಡಕ್ಕೆ ಮತ್ತೆ ಆಯ್ಕೆಯಾಗಿದ್ದರು.

ಆದರೆ, ಭಾರತ ತಂಡದ ಪರವಾಗಿ ಮತ್ತೆ ಆಡುವ ಅವರ ಕನಸು ಭಗ್ನವಾಗಿದೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋಯೋ ಟೆಸ್ಟ್‌ ಫಿಟ್ನೆಸ್ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ರಾಯುಡು ವಿಫರಾಗಿದ್ದಾರೆ.

ಯೋಯೋ ಪರೀಕ್ಷೆಗೆ ಒಳಗಾದ ಕೊಹ್ಲಿ: ಇಂಗ್ಲೆಂಡ್ ಪ್ರವಾಸ ಇನ್ನೂ ಖಾತ್ರಿ ಇಲ್ಲ ಯೋಯೋ ಪರೀಕ್ಷೆಗೆ ಒಳಗಾದ ಕೊಹ್ಲಿ: ಇಂಗ್ಲೆಂಡ್ ಪ್ರವಾಸ ಇನ್ನೂ ಖಾತ್ರಿ ಇಲ್ಲ

ತಂಡದಲ್ಲಿ ಆಡುವ ಅರ್ಹತೆ ಪಡೆದುಕೊಳ್ಳಬೇಕೆಂದರೆ ಯೋಯೋ ಪರೀಕ್ಷೆಯಲ್ಲಿ 16.1 ಅಂಕವನ್ನು ಪಡೆದುಕೊಳ್ಳಬೇಕು. ಆದರೆ, ರಾಯುಡು ಇದರಲ್ಲಿ ಅನುತ್ತೀರ್ಣರಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಎಂ.ಎಸ್. ಧೋನಿ ಯೋಯೋ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ.

ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ರಾಯುಡು ಅವರನ್ನು ಏಕದಿನ ತಂಡದಿಂದ ಕೈಬಿಡಲಾಗುತ್ತದೆ. ಇದಕ್ಕೂ ಮುನ್ನ ಫಿಟ್ನೆಸ್ ಪರೀಕ್ಷೆಯಲ್ಲಿ ನಿಗದಿತ ಅಂಕ ಗಳಿಸಲು ವಿಫಲರಾದ ಕಾರಣಕ್ಕೆ ವೇಗದ ಬೌಲರ್ ಮೊಹಮದ್ ಶಮಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಪಂದ್ಯದಿಂದ ಕೈಬಿಡಲಾಗಿತ್ತು.

ಭಾರತ 'ಎ' ತಂಡದ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡ ಯೋಯೋ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ತಂಡದಿಂದ ಹೊರಗುಳಿಯಬೇಕಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಉಮೇಶ್ ಯಾದವ್ 100 ವಿಕೆಟ್ ಸಾಧನೆಟೆಸ್ಟ್ ಕ್ರಿಕೆಟ್‌ನಲ್ಲಿ ಉಮೇಶ್ ಯಾದವ್ 100 ವಿಕೆಟ್ ಸಾಧನೆ

ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆಯಾಗಿದ್ದ ಆಟಗಾರರಲ್ಲಿ ಅಂಬಾಟಿ ರಾಯುಡು ಮಾತ್ರ ಯೋಯೋ ಪರೀಕ್ಷೆಯಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಇನ್ನುಳಿದಂತೆ ಬಹುತೇಕ ಎಲ್ಲ ಆಟಗಾರರೂ ಯಾವುದೇ ತೊಂದರೆ ಇಲ್ಲದೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ರಾಯುಡು ಅವರು ಭಾರತ ಮತ್ತು ಭಾರತ 'ಎ' ತಂಡಕ್ಕೆ ಆಯ್ಕೆಯಾಗಲು ನಿಗದಿಪಡಿಸಿರುವ 16.1 ಅಂಕಗಳಿಗಿಂತ ಕಡಿಮೆ ಪಡೆದುಕೊಂಡಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗುವುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಶ್ರೀಲಂಕಾ ಪ್ರವಾಸ ವೇಳೆ ಹಿರಿಯ ಆಟಗಾರರಾದ ಸುರೇಶ್ ರೈನಾ, ಯುವರಾಜ್ ಸಿಂಗ್ ಮತ್ತು ಯುವ ಪ್ರತಿಭೆ ವಾಷಿಂಗ್ಟನ್ ಸುಂದರ್ ಅವರು ಯೋಯೋ ಪರೀಕ್ಷೆಯಲ್ಲಿ ವಿಫಲರಾಗಿದ್ದರು.

2019ರ ಐಸಿಸಿ ವಿಶ್ವಕಪ್‌ಗೆ ತಂಡದ ಎಲ್ಲ ಆಟಗಾರರ ದೈಹಿಕ ಸಾಮರ್ಥ್ಯ ಇನ್ನಷ್ಟು ಚುರುಕಾಗಿರಬೇಕು ಎಂಬ ಉದ್ದೇಶದಿಂದ ಯೋಯೋ ಪರೀಕ್ಷೆಯ ಅಂಕವನ್ನು 16.1ರಿಂದ 16.3ಕ್ಕೆ ಹೆಚ್ಚಿಸಲು ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿತ್ತು.

ಅಂಬಾಟಿ ರಾಯುಡು ಐಪಿಎಲ್‌ನಲ್ಲಿ ಒಂದು ಶತಕ, ಮೂರು ಅರ್ಧ ಶತಕ ಸಹಿತ 602 ರನ್ ಗಳಿಸಿ, ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನ ಪಡೆದುಕೊಂಡಿದ್ದರು.

Story first published: Saturday, June 16, 2018, 12:25 [IST]
Other articles published on Jun 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X