ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಬಾಟಿ ರಾಯುಡು ನಿವೃತ್ತಿ ಬಗ್ಗೆ ಗುಡುಗಿದ ಗೌತಮ್‌ ಗಂಭೀರ್‌!

Rayudus retirement is because of selectors: Gambhir

ಹೊಸದಿಲ್ಲಿ, ಜುಲೈ 03: ಟೀಮ್‌ ಇಂಡಿಯಾದ ಆಯ್ಕೆ ಸಮಿತಿಯಿಂದ ಕಡೆಗಣನೆಗೆ ಗುರಿಯಾಗಿರುವ ಅನುಭವಿ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು, ಇದೀಗ ಅವರ ಈ ಹಠಾತ್‌ ನಿವೃತ್ತಿಗೆ ಆಯ್ಕೆ ಸಮಿತಿಯ ನಿರ್ಲಕ್ಷತೆಯೇ ಕಾರಣ ಎಂದು ಮಾಜಿ ಆಟಗಾರ ಗೌತಮ್‌ ಗಂಭೀರ್‌ ಗುಡುಗಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪ್ರಸಕ್ತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಈ ಹಿಂದೆ ಪ್ರಕಟಿಸಲಾದ 15 ಆಟಗಾರರ ತಂಡದಲ್ಲಿ ಅಂಬಾಟಿ ರಾಯುಡು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ, ಬಳಿಕ ಪ್ರಕಟಿಸಲಾದ ಕಾಯ್ದಿರಸಲ್ಪಟ್ಟ ಆಟಗಾರರ ಪಟ್ಟಿಯಲ್ಲಿ ರಾಯುಡು ಗುರುತಿಸಿಕೊಂಡಿದ್ದರು.

ಭಾರತ ತಂಡಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆಸರಿಸಿದ ಯುವರಾಜ್‌!ಭಾರತ ತಂಡಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆಸರಿಸಿದ ಯುವರಾಜ್‌!

ವಿಸ್ವಕಪ್‌ ತಂಡದಲ್ಲಿ ಯಾವುದೇ ಆಟಗಾರರು ಗಾಯಗೊಂಡರೂ ಬದಲಿ ಆಟಗಾರರನ್ನು ಕಳುಹಿಸುವ ಉದ್ದೇಶದಿಂದ ಬಿಸಿಸಿಐ ಆಯ್ಕೆ ಸಮಿತಿ ಕಾಯ್ದಿರಿಸಲ್ಪಟ್ಟ ಆಟಗಾರರನ್ನು ಪ್ರಕಟಿಸಿತ್ತು. ಆದರೆ, ಇದೀಗ ಶಿಖರ್‌ ಧವನ್‌ ಮತ್ತು ವಿಜಯ್‌ ಶಂಕರ್‌ ಗಾಯಗೊಂಡರೂ ಭಾರತ ತಂಡದಿಂದ ರಾಯುಡುಗೆ ಬುಲಾವ್‌ ಬಂದಿಲ್ಲ. ಇದೇ ಬೇಸರದಲ್ಲಿ ಅವರು ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

ಆರಂಭದಲ್ಲಿ ಬದಲಿ ಆಟಗಾರರ ನೇಮಕ ವಿಚಾರದಲ್ಲಿ ಪಂತ್‌ ಮತ್ತು ರಾಯುಡು ತಂಡದ ಮೊದಲ ಆಯ್ಕೆ ಎಂದೆಲ್ಲಾ ಬಿಸಿಸಿಐ ಆಯ್ಕೆ ಸಮಿತಿ ಹೇಳಿತ್ತು. ಅಂತೆಯೇ ಧವನ್‌ ನಿರ್ಗಮನದ ಬಳಿಕ ಅವರ ಸ್ಥಾನದಲ್ಲಿ ಪಂತ್‌ಗೆ ಅವಕಾಶ ನೀಡಿತ್ತು. ಆದರೆ, ವಿಜಯ್ ಶಂಕರ್‌ ಹೊರಬಿದ್ದ ಬಳಿಕ ಅವರ ಜಾಗಕ್ಕೆ ರಾಯುಡು ಅವರನ್ನು ನೇಮಕ ಮಾಡುವ ಬದಲಾಗಿ ಮಯಾಂಕ್‌ ಅಗರ್ವಾಲ್‌ ಅವರನ್ನು ಹೆಸರಿಸಿ ಬಿಸಿಸಿಐ ಆಯ್ಕೆ ಸಮಿತಿ ಅಚ್ಚರಿ ಮೂಡಿಸಿತ್ತು.

ಲಾರಾ, ತೆಂಡೂಲ್ಕರ್‌ಗೆ ಸಡ್ಡು ಹೊಡೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!ಲಾರಾ, ತೆಂಡೂಲ್ಕರ್‌ಗೆ ಸಡ್ಡು ಹೊಡೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ಈ ಸಂದರ್ಭದಲ್ಲಿ ರಾಯುಡು ಅವರ ನಿವೃತ್ತಿ ಕುರಿತಾಗಿ ಮಾತನಾಡಿದ ಗಂಭೀರ್‌, ನನ್ನ ಪ್ರಕಾರ ಈ ಬಾರಿಯ ವಿಶ್ವಕಪ್‌ನಲ್ಲಿ ಆಯ್ಕೆದಾರರು ನಿಜಕ್ಕೂ ನಿರಾಸೆ ಮುಡಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಇರುವ ಐವರು ಒಟ್ಟಾಗಿ ರಾಯುಡು ಅವರ ವೃತ್ತಿ ಬದುಕಿನಲ್ಲಿ ಗಳಿಸಿರುವಷ್ಟು ರನ್‌ ಗಳಿಸಿಲ್ಲ. ಇದೀಗ ರಾಯುಡು ಅವರ ನಿವೃತ್ತಿಗೆ ಆಯ್ಕೆ ಸಮಿತಿಯ ನಿರ್ಧಾರವನ್ನೇ ದೂಶಿಸಬೇಕು, " ಎಂದು ಸೆಲೆಕ್ಟರ್‌ಗಳ ವಿರುದ್ಧ ಗಂಭೀರ್‌ ಕಿಡಿಕಾರಿದ್ದಾರೆ.

"ರಾಯುಡು ಸ್ಥಾನದಲ್ಲಿ ಯಾರೇ ಇದ್ದರೂ ಇದೇ ರೀತಿ ಮಾಡುತ್ತಿದ್ದರು. ಅವರು ಐಪಿಎಲ್‌ ಮತ್ತು ಟೀಮ್‌ ಇಂಡಿಯಾ ಪರವೂ ಮಿಂಚಿನ ಆಟವಾಡಿದ್ದಾರೆ. ಮೂರು ಶತಕ ಮತ್ತು 10 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಆದರೂ ಅವರು ಬೇಸರಿಂದ ನಿವೃತ್ತಿ ನೀಡುವಂತಾಗಿರುವುದು ಭಾರತೀಯ ಕ್ರಿಕೆಟ್‌ನಲ್ಲಿ ಎದುರಾದ ಅತ್ಯಂತ ಕಹಿ ಘಟನೆಯಾಗಿದೆ," ಎಂದು ಗಂಭೀರ್‌ ತಮ್ಮ ಅಭಿಪ್ರಾಯ ಪಟ್ಟಿದ್ದಾರೆ.

ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಸುಧಾರಣೆಗೆ ಕ್ಲೈವ್‌ ಲಾಯ್ಡ್‌ ಸಲಹೆ!ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಸುಧಾರಣೆಗೆ ಕ್ಲೈವ್‌ ಲಾಯ್ಡ್‌ ಸಲಹೆ!

ಬಲಗೈ ಬ್ಯಾಟ್ಸ್‌ಮನ್‌ ರಾಯುಡು ಒಡಿಐನಲ್ಲಿ ಆಡಿದ 55 ಪಂದ್ಯಗಳಲ್ಲಿ 47.05ರ ಸರಾಸರಿಯಲ್ಲಿ 1,694 ರನ್‌ಗಳನ್ನು ದಾಖಲಿಸಿದ್ದಾರೆ. ಗಳಿಸಿರುವ ಮೂರು ಶತಕಗಳಲ್ಲಿ 124* ಅವರ ಶ್ರೇಷ್ಠ ಪ್ರದರ್ಶನವಾಗಿದೆ. 79.04ರ ಸ್ಟ್ರೈಕ್‌ ರೇಟ್‌ ಹೊಂದಿರುವ ಅವರು 10 ಅರ್ಧಶತಕಗಳನ್ನು ಬಾರಿಸಿದ್ದಾರೆ.

Story first published: Wednesday, July 3, 2019, 17:16 [IST]
Other articles published on Jul 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X