ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಅಭಿಮಾನಿಗಳು ಖುಷಿಪಡುವಂತಾ ಸುದ್ದಿ ಹೇಳಿದ ಎಬಿ ಡಿವಿಲಿಯರ್ಸ್

RCB batsman AB de Villiers statement on his IPL future
ಐಪಿಎಲ್ ಆಟಗಾರರಿಗೆ ಖಡಕ್ ಎಚ್ಚರಿಕೆ ಕೊಟ್ಟ abd ! AB De Villiers | Oneindia Kannada

ಬೆಂಗಳೂರು, ಆಗಸ್ಟ್ 3: ವಿರಾಟ್ ಕೊಹ್ಲಿ ಹೊರತು ಪಡಿಸಿದರೆ ಅತಿ ಹೆಚ್ಚು ವರ್ಷಗಳಿಂದ ಆರ್‌ಸಿಬಿ ತಂಡದ ಭಾಗವಾಗಿರುವ ಆಟಗಾರ ಎಬಿ ಡಿವಿಲಿಯರ್ಸ್. ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಐಪಿಎಲ್‌ನಲ್ಲಿ ಸಾಕಷ್ಟು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ನೀಡಿ ಅಭಿಮಾನಿಗಳ ಪಾಲಿಗೆ ಆಪತ್ಬಾಂಧವ ಎನಿಸಿದ್ದಾರೆ. ಈಗ ಈ ಬಾರಿಯ ಐಪಿಎಲ್‌ನ ಎರಡನೇ ಚರಣದ ಆರಂಭಕ್ಕೆ ಕೆಲವೇ ದಿನಗಳಿರುವಾಗ ಅಭಿಮಾನಿಗಳು ಖುಷಿಪಡುವಂತಾ ಸಂಗತಿಯನ್ನು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದಿರುವ ಎಬಿ ಡಿವಿಲಿಯರ್ಸ್ ಐಪಿಎಲ್ ಸಹಿತ ಲೀಗ್ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಐಪಿಎಲ್‌ನಲ್ಲಿ ಪ್ರತಿ ಆವೃತ್ತಿಯಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡುವ ಎಬಿ ಡಿವಿಲಿಯರ್ಸ್ ಲೀಗ್ ಕ್ರಿಕೆಟ್‌ನಿಂದಲೂ ಸದ್ಯದಲ್ಲಿಯೇ ನಿವೃತ್ತಿಯಾಗಲಿದ್ದಾರಾ ಎಂಬ ಅನುಮಾನಗಳು ಕ್ರಿಕೆಟ್ ಪ್ರೇಮಿಗಳಲ್ಲಿತ್ತು.

ಭಾರತ vs ಬೆಲ್ಜಿಯಂ ಹಾಕಿ ಸೆಮಿಫೈನಲ್‌ ವೇಳೆ ಪ್ರಧಾನಿ ಮೋದಿ ಟ್ರೋಲ್!ಭಾರತ vs ಬೆಲ್ಜಿಯಂ ಹಾಕಿ ಸೆಮಿಫೈನಲ್‌ ವೇಳೆ ಪ್ರಧಾನಿ ಮೋದಿ ಟ್ರೋಲ್!

ಅಭಿಮಾನಿಗಳಲ್ಲಿದ್ದ ಈ ಪ್ರಶ್ನೆಗಳಿಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸ್ಪಷ್ಟನೆಯನ್ನು ನೀಡಿದ್ದಾರೆ. ಹಾಗಾದರೆ ಎಬಿ ಡಿವಿಲಿಯರ್ಸ್ ಹೇಳಿದ್ದೇನು ಮುಂದೆ ಓದಿ..

ಇನ್ನೂ ಕೆಲ ವರ್ಷ ಆಡುತ್ತೇನೆ

ಇನ್ನೂ ಕೆಲ ವರ್ಷ ಆಡುತ್ತೇನೆ

ಇನ್ಸ್ಟಾಗ್ರಾನ್ ಸೆಶನ್‌ನಲ್ಲಿ ಆರ್‌ಬಿ ಆಟಗಾರ ಎಬಿ ಡಿವಿಲಿಯರ್ಸ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆರ್‌ಸಿಬಿ ತಂಡದಲ್ಲಿನ ಕೆಲ ಸಂತಸದ ಕ್ಷಣಗಳ ಬಗ್ಗೆ ಸ್ಮರಿಸಿದ್ದಾರೆ. ಈ ಸಂದರ್ಭದಲ್ಲಿ ಎಬಿಡಿ ವಿಲಿಯರ್ಸ್ ತನ್ನಲ್ಲಿನ್ನೂ ಕ್ರಿಕೆಟ್ ಸಾಕಷ್ಟು ಇದೆ. ನಾನು ಇನ್ನೂ ಕೆಲ ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವುದಾಗಿ ಹೆಳಿಕೊಂಡಿದ್ದಾರೆ. ಇನ್ನೂ ಕೆಲ ವರ್ಷಗಳ ಕಾಲ ನಾನು ಕ್ರಿಕೆಟ್ ಆಡುತ್ತೇನೆ ಎಂದು ಹೇಳುವ ಮೂಲಕ ಎಬಿ ಡಿವಿಲಿಯರ್ಸ್ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.

ಆರ್‌ಸಿಬಿ ತಂಡದೊಂದಿಗಿನ ನೆನಪು

ಆರ್‌ಸಿಬಿ ತಂಡದೊಂದಿಗಿನ ನೆನಪು

ಐಪಿಎಲ್‌ನಲ್ಲಿ ಆಡುತ್ತಾ ಅಭಿಮಾಣಿಗಳ ಸಮ್ಮುಖದಲ್ಲಿ ನಾನು ಒಂದೆರಡು ದಾಖಲೆಗಳನ್ನು ಮುರಿದಿದ್ದೆ. ಆಗ ನನ್ನ ಸಹ ಆಟಗಾರರು ಕೂಡ ಆಶ್ಚರ್ಯಪಟ್ಟಿದ್ದನ್ನು ನಾನು ಗಮನಿಸಿದ್ದೆ. ಅಂತಾ ಒಂದೆರಡು ಅಥವಾ ಮೂರ್ನಾಲ್ಕು ವಿಶೇಷ ಕ್ಷಣಗಳನ್ನು ನಾನು ಅನುಭವಿಸಿದ್ದೇನೆ" ಎಂದು ಆರ್‌ಸಿಬಿಯಲ್ಲಿನ ತಮ್ಮ ನೆನಪುಗಳನ್ನು ಎಬಿ ಡಿವಿಲಿಯರ್ಸ್ ಸ್ಮರಿಸಿದ್ದಾರೆ.

ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರ ಎಬಿ ಡಿವಿಲಿಯರ್ಸ್

ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರ ಎಬಿ ಡಿವಿಲಿಯರ್ಸ್

ಎಬಿ ವಿಲಿಯರ್ಸ್ ಕಳೆದ ಹಲವು ಆವೃತ್ತಿಗಳಿಮದ ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ಎಬಿ ಡಿವಿಲಿಯರ್ಸ್ ನೀಡಿರುವ ಶ್ರೇಷ್ಠ ಇನ್ನಿಂಗ್ಸ್‌ಗಳು ಅಭಿಮಾನಿಗಳ ಪಾಲಿಗೆ ಸ್ಮರಣೀಯವಾಗಿದೆ. ಅನೇಕ ದಾಖಲೆಗಳನ್ನು ಕೂಡ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಪರವಾಗಿ ದಾಖಲಿದ್ದಾರೆ. ಹಲವಾರು ಪಂದ್ಯಗಳಲ್ಲಿ ಸೋಲಿನ ದವಡೆಯಿಂದ ಪಾರು ಮಾಡಿ ಗೆಲ್ಲಿಸಿದಂತಾ ಉದಾಹರಣೆಗಳು ಕೂಡ ಇದೆ. ಹೀಗಾಗಿಯೇ ಆರ್‌ಸಿಬಿ ಅಭಿಮಾನಿಗಳು ಎಬಿ ಡಿವಲಿಯರ್ಸ್‌ಗೆ ಆಪತ್ಬಾಂಧವ ಎಂದು ಹೆಸರಿಟ್ಟಿದ್ದಾರೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಸಾಮರ್ಥ್ಯವವನ್ನು ಹೊಂದಿದ್ದಾರೆ ಈ ಸ್ಪೋಟಕ ಕ್ರಿಕೆಟಿಗ.

ಮತ್ತೆ ಐಪಿಎಲ್‌ನಲ್ಲಿ ಆರ್ಭಟಿಸಲು ಸಜ್ಜು

ಮತ್ತೆ ಐಪಿಎಲ್‌ನಲ್ಲಿ ಆರ್ಭಟಿಸಲು ಸಜ್ಜು

ಇನ್ನು ಈ ಬಾರಿಯ ಐಪಿಎಲ್ ಕೊರೊನಾವೈರಸ್‌ನಿಂದಾಗಿ ಅರ್ಧಕ್ಕೆ ಸ್ಥಗಿತವಾಗಿತ್ತು. ಇದರ ಮುಂದುವರಿದ ಭಾಗವನ್ನು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆಡಿಸಲಾಗುತ್ತದೆ. ಈ ಭಾಗದಲ್ಲಿಯೂ ಆರ್‌ಸಿಬಿ ತಂಡದ ಈ ಪ್ರಮುಖ ಆಟಗಾರ ಕಾಣಿಸಿಕೊಳ್ಳಲಿದ್ದಾರೆ. ಪ್ರಥಮಾರ್ಧದಲ್ಲಿ ಆಡಿದ 7 ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಉತ್ತಮ ಪ್ರದರ್ಶನ ನೀಡಿ 207 ರನ್‌ಗಳಿಸಿದ್ದರು. 50ರ ಸರಾಸರಿಯಲ್ಲಿ 160ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ ಎಬಿ ಡಿವಿಲಿಯರ್ಸ್. ಈಗ ಮತ್ತೊಮ್ಮೆ ಇದೇ ಪ್ರದರ್ಶನವನ್ನು ಮುಂದುವರಿಸುವ ನಿರೀಕ್ಷೆಯಿದೆ.ಈ ಬಾರಿ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಲು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿತಯೂ ಎಬಿ ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ

Story first published: Tuesday, August 3, 2021, 19:36 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X