ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಈ ಮಹತ್ವದ ಬದಲಾವಣೆ ತಂದ ಮೊದಲ ತಂಡ ಆರ್‌ಸಿಬಿ!

RCB become first IPL team to hire a woman in support staff

ಬೆಂಗಳೂರು, ಅಕ್ಟೋಬರ್ 17: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹತ್ವದ ಬದಲಾವಣೆಯೊಂದಕ್ಕೆ ಕಾರಣವಾಗಿದೆ. ಮಹಿಳಾ ಬೆಂಬಲ ಸಿಬ್ಬಂದಿಯನ್ನು ನೇಮಿಸಿದ ಮೊದಲ ಐಪಿಎಲ್ ತಂಡವಾಗಿ ಆರ್‌ಸಿಬಿ ಗುರುತಿಸಿಕೊಂಡಿದೆ.

ಆರ್‌ಸಿಬಿ ಕಪ್‌ ಕನಸಿಗೀಗ ಜೀವ, ಕೋಚಿಂಗ್‌ ವಿಭಾಗದಲ್ಲಿ ಮುಖ್ಯ ಬದಲಾವಣೆ!ಆರ್‌ಸಿಬಿ ಕಪ್‌ ಕನಸಿಗೀಗ ಜೀವ, ಕೋಚಿಂಗ್‌ ವಿಭಾಗದಲ್ಲಿ ಮುಖ್ಯ ಬದಲಾವಣೆ!

ಮುಂಬರಲಿರುವ 13ನೇ ಆವೃತ್ತಿಯ ಐಪಿಎಲ್‌ಗಾಗಿ ಆರ್‌ಸಿಬಿ, ಮಹಿಳಾ ಬೆಂಬಲ ಸಿಬ್ಬಂದಿಯೊಬ್ಬರನ್ನು ನೇಮಿಸಿದೆ. ನವನೀತ ಗೌತಮ್ ಇನ್ಮುಂದೆ ಆರ್‌ಸಿಬಿ ತಂಡದ ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್ ಆಗಿ ಇರಲಿದ್ದಾರೆ. ಐಪಿಎಲ್ ತಂಡವೊಂದು ಮಹಿಳಾ ಬೆಂಬಲ ಸಿಬ್ಬಂದಿಯನ್ನು ನೇಮಿಸಿದ್ದು ಇದೇ ಮೊದಲ ಬಾರಿ.

ನವನೀತ ಅವರು ಆರ್‌ಸಿಬಿ ತಂಡದ ಹೆಡ್ ಫಿಸಿಯೋಥೆರಪಿಸ್ಟ್ ಇವಾನ್ ಸ್ಪೀಚ್ಲಿ ಮತ್ತು ಕಂಡೀಷನಿಂಗ್ ಕೋಚ್ ಶಂಕರ್ ಬಸು ಜೊತೆಗಿದ್ದು, ತಂಡಕ್ಕೆ ತಕ್ಕಂತೆ, ಅಗತ್ಯ ಬೀಳುವ ಮೌಲ್ಯಮಾಪನ, ಮಾರ್ಗದರ್ಶನ ಮತ್ತು ಮಸಾಜ್ ಥೆರಪಿಯನ್ನು ನಡೆಸಿಕೊಡಲಿದ್ದಾರೆ.

ಕೋಪದಲ್ಲಿ ಯಾಮಾರಿ ಕೈ ಮುರಿದುಕೊಂಡ ಆಸ್ಟ್ರೇಲಿಯಾ ಆಲ್ ರೌಂಡರ್!ಕೋಪದಲ್ಲಿ ಯಾಮಾರಿ ಕೈ ಮುರಿದುಕೊಂಡ ಆಸ್ಟ್ರೇಲಿಯಾ ಆಲ್ ರೌಂಡರ್!

ಮುಂಬರಲಿರುವ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕ ಕೋಚ್ ಸೈಮನ್ ಕಟಿಚ್, ಮುಖ್ಯ ಕೋಚ್‌ ಆಗಿ ಆರ್‌ಸಿಬಿ ಮುನ್ನಡೆಸಲಿದ್ದಾರೆ. ಹಿಂದಿನ ಸಾರಿ ಕಳಪೆ ಪ್ರದರ್ಶನ ನೀಡಿದ್ದ ಬೆಂಗಳೂರು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ, ಕಪ್‌ ಗೆಲ್ಲುತ್ತಾ ಕಾದು ನೋಡಬೇಕಿದೆ.

Story first published: Thursday, October 17, 2019, 19:50 [IST]
Other articles published on Oct 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X