ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಾರ್ಜಾದಲ್ಲಿ ಗೆಲುವಿನ ಕಹಳೆ ಊದಿದ RCB: ಕೆಕೆಆರ್‌ಗೆ ಹೀನಾಯ ಸೋಲು

 RCB Biggest Win Against KKR: Won By 82 Runs

ಐಪಿಎಲ್ 28ನೇ ಪಂದ್ಯದಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದಲ್ಲಿ ಕೊಹ್ಲಿ ಪಡೆ 82 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ವಿರಾಟ್ ಕೊಹ್ಲಿ ತಂಡ ಉತ್ತಮ ಆರಂಭಿಕ ಜೊತೆಯಾಟಕ್ಕೆ ಸಾಕ್ಷಿಯಾಯ್ತು. ಆರ್‌ಸಿಬಿ ಪರ ಆ್ಯರೋನ್ ಫಿಂಚ್ 47ರನ್ ಗಳಿಸಿ ಔಟಾದ್ರೆ, ದೇವದತ್ ಪಡಿಕ್ಕಲ್ ಅದಕ್ಕೂ ಮೊದಲು 32 ರನ್‌ಗೆ ರಸೆಲ್‌ಗೆ ವಿಕೆಟ್ ಒಪ್ಪಿಸಿದ್ರು.

ಕೊಹ್ಲಿ-ಎಬಿಡಿ ಶತಕದ ಜೊತೆಯಾಟ: ಐಪಿಎಲ್‌ನಲ್ಲಿ ಹೊಸ ಮೈಲುಗಲ್ಲುಕೊಹ್ಲಿ-ಎಬಿಡಿ ಶತಕದ ಜೊತೆಯಾಟ: ಐಪಿಎಲ್‌ನಲ್ಲಿ ಹೊಸ ಮೈಲುಗಲ್ಲು

ಮೊದಲೆರಡು ವಿಕೆಟ್ ಉರುಳಿದ ಬಳಿಕ ಜೊತೆಯಾದ ವಿಶ್ವದ ಇಬ್ಬರು ಶ್ರೇಷ್ಟ ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಿಸ್ಟರ್ 360 ಎಬಿ ಡಿ ವಿಲಿಯರ್ಸ್‌ ಶತಕದ ಜೊತೆಯಾಟದ ಮೂಲಕ ಆರ್‌ಸಿಬಿ ಬೃಹತ್ ಮೊತ್ತ ಕಲೆಹಾಕಲು ನೆರವಾದ್ರು.

 RCB Biggest Win Against KKR: Won By 82 Runs

ವಿರಾಟ್‌ ಕೊಹ್ಲಿ ಅಜೇಯ 33 ರನ್‌ಗಳನ್ನು ಕಲೆಹಾಕಿದ್ರೆ, ಮತ್ತೊಂದೆಡೆ ಎಬಿ ಡಿ ವಿಲಿಯರ್ಸ್ ಕೇವಲ 33 ಎಸೆತಗಳಲ್ಲಿ 73 ರನ್‌ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್‌ಗಳಿದ್ದವು. ಕೊಹ್ಲಿ-ಎಬಿಡಿ ಜೊತೆಯಾಟದಿಂದಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 194ರನ್ ಕಲೆಹಾಕಿತು.

195 ರನ್‌ಗಳ ಗುರಿ ಬೆನ್ನಟ್ಟಿದ ಕೊಲ್ಕತ್ತಾ ನೈಟ್‌ ರೈಡರ್ಸ್ ಆರಂಭಿಕ ಪವರ್‌ ಪ್ಲೇ ಓವರ್‌ಗಳಲ್ಲಿ ರನ್‌ಗಳಿಸಲು ಹೆಣಗಾಡಿತು. ಶುಭ್ಮನ್ ಗಿಲ್ ಜೊತೆಗೆ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಟಾಮ್‌ ಬ್ಯಾಂಟನ್ ನವದೀಪ್ ಸೈನಿಗೆ ಕೇವಲ ಎಂಟು ರನ್‌ಗೆ ವಿಕೆಟ್ ಒಪ್ಪಿಸಿದ್ರು. ನಂತರ ನಡೆದಿದ್ದು ಆರ್‌ಸಿಬಿ ಜೋಡಿ ಸ್ಪಿನ್ನರ್‌ಗಳ ಮ್ಯಾಜಿಕ್.

ಕೆಕೆಆರ್ ಬ್ಯಾಟ್ಸ್‌ಮನ್‌ಗಳ ರನ್‌ಗಳಿಗೂ ಕಡಿವಾಣ ಹಾಕುವುದರ ಜೊತೆಗೆ ವಿಕೆಟ್ ಕಬಳಿಸಿದ ವಾಷಿಂಗ್ಟನ್ ಸುಂದರ್ ಮತ್ತು ಯುಜವೇಂದ್ರ ಚಹಾಲ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ರು. ಕೆಕೆಆರ್ ಪರ ನಿತಿಶ್ ರಾನಾ 9 ರನ್, ಇಯಾನ್ ಮಾರ್ಗನ್ 8 ರನ್‌ಗಳಿಸಿ ವಾಷಿಂಗ್ಟನ್ ಸುಂದರ್‌ಗೆ ಬಲಿಯಾದ್ರು. ಇದಕ್ಕೂ ಮೊದಲು ಉತ್ತಮವಾಗಿ ಆಡ್ತಿದ್ದ ಶುಭ್ಮನ್ ಗಿಲ್ 34ರನ್‌ಗೆ ರನೌಟ್ ಆದ್ರು.

ನಾಯಕ ದಿನೇಶ್ ಕಾರ್ತಿಕ್ ಆಟ ಕೇವಲ 1ರನ್‌ಗೆ ಮುಕ್ತಾಯಗೊಂಡಿತು. ಚಹಾಲ್ ಕಾರ್ತಿಕ್ ವಿಕೆಟ್ ಎಗರಿಸುವಲ್ಲಿ ಯಶಸ್ವಿಯಾದ್ರು. ಇನ್ನೂ ಸ್ಫೋಟಕ ಆಟಗಾರ ಆ್ಯಂಡ್ರೆ ರಸೆಲ್‌ ಹಾಗೂ ರಾಹುಲ್ ತ್ರಿಪಾಠಿ ತಲಾ 16ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ಪರಿಣಾಮ ಕೆಕೆಆರ್‌ನ ಸಂಪೂರ್ಣ ಬ್ಯಾಟಿಂಗ್‌ ಶಕ್ತಿ ಆರ್‌ಸಿಬಿ ಬೌಲಿಂಗ್ ಮ್ಯಾಜಿಕ್ ಎದುರು ಮಂಕಾಯಿತು.

ಅಂತಿಮವಾಗಿ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕಲೆಹಾಕಿದ್ದು 112ರನ್‌ ಕಲೆಹಾಕಲು ಶಕ್ತವಾಯ್ತು. ಇದರಿಂದಾಗಿ ಆರ್‌ಸಿಬಿ ಬರೋಬ್ಬರಿ 82ರನ್‌ಗಳ ಜಯ ದಾಖಲಿಸಿದೆ. ಅಲ್ಲದೆ ಪಾಯಿಂಟ್ಸ್ ಟೇಬಲ್‌ನಲ್ಲಿ 10 ಪಾಯಿಂಟ್‌ ಕಲೆಹಾಕುವ ಮೂಲಕ ಮೂರನೇ ಸ್ಥಾನಕ್ಕೇರಿದೆ.

Story first published: Tuesday, October 13, 2020, 9:55 [IST]
Other articles published on Oct 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X