ಸಿಎಸ್‌ಕೆಯ ಈ ಆಟಗಾರನನ್ನು ಖರೀದಿಸಲೇಬೇಕೆಂದು ದೊಡ್ಡ ಮೊತ್ತ ತೆಗೆದಿಟ್ಟಿತ್ತು ಆರ್‌ಸಿಬಿ ಫ್ರಾಂಚೈಸಿ!

ಮುಂಬರುವ ಮಾರ್ಚ್ 27ರಿಂದ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕುರಿತಾಗಿ ದಿನದಿಂದ ದಿನಕ್ಕೆ ಕುತೂಹಲ ಹಾಗೂ ಚರ್ಚೆಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಇದೇ ತಿಂಗಳ 12 ಹಾಗೂ 13ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ಈ ಕುತೂಹಲ ಹಾಗೂ ಚರ್ಚೆಗಳನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ವೃದ್ದಿಮಾನ್ ಸಾಹಾ ಹೇಳಿಕೆಯಿಂದ ನನಗೆ ಬೇಸರವಾಗಿಲ್ಲ ಎಂದ ರಾಹುಲ್ ದ್ರಾವಿಡ್ವೃದ್ದಿಮಾನ್ ಸಾಹಾ ಹೇಳಿಕೆಯಿಂದ ನನಗೆ ಬೇಸರವಾಗಿಲ್ಲ ಎಂದ ರಾಹುಲ್ ದ್ರಾವಿಡ್

ಹೌದು, 2 ದಿನಗಳ ಕಾಲ ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಈ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ಖರ್ಚು ಮಾಡಿರುವ ಒಟ್ಟು ಮೊತ್ತ 551.7 ಕೋಟಿ ರೂಪಾಯಿಗಳು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು 33 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು 324.2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದವು. ಹೀಗೆ ದೊಡ್ಡ ಮಟ್ಟದಲ್ಲಿ ನಡೆದ ಈ ಮೆಗಾ ಹರಾಜು ಪ್ರಕ್ರಿಯೆ ಸದ್ಯ ಸಾಕಷ್ಟು ಚರ್ಚೆಗಳಿಗೆ ಕಾರಣವಾಗುತ್ತಿದ್ದು, ಆಟಗಾರರ ಖರೀದಿಯ ನಂತರ ಯಾವ ಫ್ರಾಂಚೈಸಿ ಬಲಿಷ್ಠವಾಗಿದೆ ಎಂಬುದರ ಕುರಿತು ಹಲವಾರು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ತಂಡದಿಂದ ಹೊರಬಿದ್ದ ಕೊಹ್ಲಿ, ಪಂತ್ ಮತ್ತು ರಾಹುಲ್ ಮತ್ತೆ ತಂಡ ಸೇರುವುದು ಯಾವಾಗ? ಈತನದ್ದೇ ಅನುಮಾನ!ತಂಡದಿಂದ ಹೊರಬಿದ್ದ ಕೊಹ್ಲಿ, ಪಂತ್ ಮತ್ತು ರಾಹುಲ್ ಮತ್ತೆ ತಂಡ ಸೇರುವುದು ಯಾವಾಗ? ಈತನದ್ದೇ ಅನುಮಾನ!

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ ವಿವಿಧ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆ ಶುರುವಾಗುವುದಕ್ಕೂ ಮುನ್ನ ಯಾವ ಆಟಗಾರರನ್ನು ಖರೀದಿಸಬೇಕು ಎಂಬುದರ ಕುರಿತು ತಾವು ಹಾಕಿಕೊಂಡಿದ್ದ ಯೋಜನೆಗಳನ್ನು ಇದೀಗ ಬಹಿರಂಗಪಡಿಸಿವೆ. ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಮೆಗಾ ಹರಾಜಿನ ಕುರಿತು ನಡೆದಿದ್ದ ಚರ್ಚೆಯ ವಿಡಿಯೋಗಳನ್ನು ಇದೀಗ ಹರಿಬಿಡುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಆಟಗಾರನನ್ನು ಖರೀದಿಸಲು ಹೆಣೆದಿದ್ದ ಯೋಜನೆ ಬಹಿರಂಗವಾಗಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ..

ಚೆನ್ನೈ ಸೂಪರ್ ಕಿಂಗ್ಸ್‌ನ ಈ ಆಟಗಾರನ ಮೇಲೆ ಮುಂಚೆಯೇ ಕಣ್ಣಿಟ್ಟಿತ್ತು ಆರ್‌ಸಿಬಿ

ಚೆನ್ನೈ ಸೂಪರ್ ಕಿಂಗ್ಸ್‌ನ ಈ ಆಟಗಾರನ ಮೇಲೆ ಮುಂಚೆಯೇ ಕಣ್ಣಿಟ್ಟಿತ್ತು ಆರ್‌ಸಿಬಿ

ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದಕ್ಷಿಣ ಆಫ್ರಿಕಾ ಮೂಲದ ಸ್ಫೋಟಕ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿಗೆ ಖರೀದಿಸಿದೆ. ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿರುವ ಫಾಫ್ ಡು ಪ್ಲೆಸಿಸ್ ಅವರನ್ನು ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆಸಿದ್ದ ಚರ್ಚೆಯ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಮಾತನಾಡಿದ್ದು, ಫಾಫ್ ಡು ಪ್ಲೆಸಿಸ್ ಪ್ರಾಮುಖ್ಯತೆಯನ್ನು ವಿವರಿಸಿ ಖರೀದಿಸಲೇಬೇಕಾದ ಅಗತ್ಯವಿದೆ ಎಂಬುದನ್ನು ತಿಳಿಸಿದ್ದರು.

ಆತನಿಗೋಸ್ಕರ ದೊಡ್ಡ ಮೊತ್ತ ತೆಗೆದಿಟ್ಟಿತ್ತು ಆರ್‌ಸಿಬಿ ಫ್ರಾಂಚೈಸಿ

ಆತನಿಗೋಸ್ಕರ ದೊಡ್ಡ ಮೊತ್ತ ತೆಗೆದಿಟ್ಟಿತ್ತು ಆರ್‌ಸಿಬಿ ಫ್ರಾಂಚೈಸಿ

ಇನ್ನು ಇದೇ ವಿಡಿಯೋದಲ್ಲಿ ಮೈಕ್ ಹೆಸನ್ ಫಾಫ್ ಡು ಪ್ಲೆಸಿಸ್ ಅವರಿಗಾಗಿ ತಮ್ಮ ಫ್ರಾಂಚೈಸಿ ಒಂದಷ್ಟು ಮೊತ್ತವನ್ನು ತೆಗೆದಿಡಬೇಕಾದ ಅನಿವಾರ್ಯತೆ ಇದೆ ಎಂದಿದ್ದರು. ಸಾಮಾನ್ಯವಾಗಿ ತನ್ನ ತಂಡದ ಪ್ರಮುಖ ಆಟಗಾರನಾಗಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಆತನನ್ನು ಮತ್ತೆ ತಂಡಕ್ಕೆ ಕರೆತರುವ ಯತ್ನವನ್ನು ಮಾಡಲಿದೆ ಹಾಗೂ ಆತ ಪ್ರಮುಖ ಆಟಗಾರನಾಗಿರುವುದರಿಂದ ಇತರೆ ಫ್ರಾಂಚೈಸಿಗಳು ಕೂಡ ಮೆಗಾ ಹರಾಜಿನಲ್ಲಿ ಆತನ ಮೇಲೆ ಕಣ್ಣಿಡಲಿವೆ, ಹೀಗಾಗಿ ನಾವು ಆತನನ್ನು ಖರೀದಿಸಬೇಕೆಂದರೆ ಒಂದಿಷ್ಟು ದೊಡ್ಡ ಮೊತ್ತವನ್ನು ತೆಗೆದಿಡಬೇಕಿದೆ ಎಂದು ಮೈಕ್ ಹೆಸ್ಸನ್ ತಿಳಿಸಿದ್ದರು. ಹೀಗೆ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಲೇಬೇಕೆಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮುಂಚೆಯೇ ಹಣವನ್ನು ಮೀಸಲಿಟ್ಟಿತ್ತು.

ಪಂದ್ಯದ ದಿಕ್ಕನ್ನೇ ಬದಲಿಸಿ ಇಶಾನ್ ಕಿಶನ್! | Oneindia kannada
ಮೆಗಾ ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮೆಗಾ ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮಾ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಮಾಹಿ ಶೆಪಾಲ್ ಅಹ್ಮದ್ ರುದರ್‌ಫೋರ್ಡ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್

For Quick Alerts
ALLOW NOTIFICATIONS
For Daily Alerts
Story first published: Monday, February 21, 2022, 14:45 [IST]
Other articles published on Feb 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X