ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಆರ್‌ಸಿಬಿ ರೀಟೆನ್ಶನ್ ಚರ್ಚೆಯಲ್ಲಿ ಮುನ್ನೆಲೆಗೆ ಬಂದ ಅನಿರೀಕ್ಷಿತ ಹೆಸರು!

RCB Retention news: Virat and Maxwell retained, big discussion on KS Bharat’s name

ಐಪಿಎಲ್ 2022ರ ಆವೃತ್ತಿಗೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಪೂರಕ ಬೆಳವಣಿಗೆಗಳು ಚುರುಕಾಗಿ ನಡೆಯುತ್ತಿದೆ. ಈ ಮಹಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಕೂಡ ತಮ್ಮ ತಂಡದಲ್ಲಿದ್ದ ಆಟಗಾರರ ಪೈಕಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿದೆ. ಕೆಲ ಷರತ್ತುಗಳೊಂದಿಗೆ ಫ್ರಾಂಚೈಸಿಗಳಿಗೆ ಈ ಅವಕಾಶವನ್ನು ನೀಡಲಾಗಿದ್ದು ಇದನ್ನು ಯಾವ ಫ್ರಾಂಚೈಸಿ ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕೊಹ್ಲಿ, ಮ್ಯಾಕ್ಸ್‌ವೆಲ್ ರಿಟೈನ್ ಪಕ್ಕಾ: ಮುಂದಿನ ಆವೃತ್ತಿಯ ಐಪಿಎಲ್‌ಗೂ ಮುನ್ನ ಆರ್‌ಸಿಬಿ ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರೀಟೈನ್ ಮಾಡಿಕೊಳ್ಳುವುದು ಖಚಿತವಾಗಿದೆ. ತಂಡದ ಪ್ರಮುಖ ಆಟಗಾರನಾಗಿರುವ ವಿರಾಟ್ ಕೊಹ್ಲಿ ಮೊದಲ ಆಯ್ಕೆಯ ಆಟಗಾರನಾಗಿ ತಂಡದಲ್ಲಿ ಉಳಿದುಕೊಂಡರೆ ಗ್ಲೆನ್ ಮ್ಯಾಕ್ಸ್‌ವೆಲ್ ಎರಡನೇ ಆಯ್ಕೆಯ ಆಟಗಾರನಾಗಿ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ. ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಿಸಿರುವ ಕಾರಣದಿಂದಾಗಿ ಆರ್‌ಸಿಬಿ ಫ್ರಾಂಚೈಸಿ ಈ ನಿರ್ಧಾರ ಮಾಡಿಕೊಂಡಿದೆ.

80 ಟೆಸ್ಟ್ ಪಂದ್ಯಗಳಲ್ಲಿ ಹರ್ಭಜನ್ ಸಿಂಗ್‌ ದಾಖಲೆ ಮೀರಿಸುವುದು ನಿಜಕ್ಕೂ ಅದ್ಭುತ: ರಾಹುಲ್‌ ದ್ರಾವಿಡ್‌80 ಟೆಸ್ಟ್ ಪಂದ್ಯಗಳಲ್ಲಿ ಹರ್ಭಜನ್ ಸಿಂಗ್‌ ದಾಖಲೆ ಮೀರಿಸುವುದು ನಿಜಕ್ಕೂ ಅದ್ಭುತ: ರಾಹುಲ್‌ ದ್ರಾವಿಡ್‌

ಪ್ರಮುಖ ಆಟಗಾರರ ಹೆಸರು: ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಅವಕಾಶವಿದ್ದರೂ ಉಳಿದ ಇಬ್ಬರು ಆಟಗಾರರು ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ. ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್, ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಮಿಂಚಿದ ಹರ್ಷಲ್ ಪಟೇಲ್, ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಯುವ ಆಟಗಾರ ದೇವದತ್ ಪಡಿಕ್ಕಲ್ ಹೆಸರುಗಳು ಚರ್ಚೆಗೆ ಸಹಜವಾಗಿಯೇ ಬಂದಿದೆ. ಇದರಲ್ಲಿ ರೀಟೆನ್ಶನ್ ಷರತ್ತುಗಳಿಗೆ ಪೂರಕವಾಗುವಂತೆ ಯಾವ ಆಟಗಾರರನ್ನು ತಂಡಕ್ಕೆ ಉಳಿಸಿಕೊಳ್ಳುವುದು ಎಂಬುದು ಆರ್‌ಸಿಬಿ ಸಹಜವಾಗಿಯೇ ಸವಾಲಿನ ಸಂಗತಿಯಾಗಿದೆ.

ಅಚ್ಚರಿಯ ಹೆಸರು ಮುನ್ನೆಲೆಗೆ: ಈ ಸಂದರ್ಭದಲ್ಲಿ ಈ ಎಲ್ಲಾ ಪ್ರಮುಖ ಆಟಗಾರರ ಜೊತೆಗೆ ಅಚ್ಚರಿಯ ಹೆಸರು ಕೂಡ ಈ ರೀಟೆನ್ಶನ್ ಮಾಡಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅನುಭವಿ ಆಟಗಾರರನ್ನು ಹಿಂದಿಕ್ಕಿ ಈ ಚರ್ಚೆಯಲ್ಲಿ ಅಚ್ಚರಿಯ ಹೆಸರು ಚರ್ಚೆಗೆ ಬಂದಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಅದು ಬೇರೆ ಯಾರೂ ಅಲ್ಲ ಕೆಎಸ್ ಭರತ್. ಈ ಬಾರಿ ಅಂತ್ಯವಾದ ಐಪಿಎಲ್ ಆವೃತ್ತಿ ಕೆಲ ಅವಕಾಶ ಪಡೆದು ಮಿಂಚಿರುವ ಕೆಎಸ್ ಭರತ್ ರೀಟೈನ್ ಮಾಡಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಸಾಕಷ್ಟು ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ನಿರೀಕ್ಷಿತ ಹೆಸರುಗಳನ್ನು ಹಿಂದಿಕ್ಕಿ ಕೆಎಸ್ ಭರತ್ ರೀಟೈನ್ ಮಾಡಿಕೊಳ್ಳುವ ಆಟಗಾರರ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಐಪಿಎಲ್: ಆಟಗಾರರ ಹರಾಜಿಗೆ ಬ್ರೇಕ್; ಇನ್ನುಮುಂದೆ ಇರುವುದಿಲ್ಲ ಮೆಗಾ ಹರಾಜು?ಐಪಿಎಲ್: ಆಟಗಾರರ ಹರಾಜಿಗೆ ಬ್ರೇಕ್; ಇನ್ನುಮುಂದೆ ಇರುವುದಿಲ್ಲ ಮೆಗಾ ಹರಾಜು?

ಆರ್‌ಸಿಬಿ ಥೀಂಕ್‌ಡ್ಯಾಂಕ್‌ಗೆ ಭರತ್ ಮೇಲೆ ಭರವಸೆ: ಆರ್‌ಸಿಬಿ ತಂಡದ ಥಿಂಕ್‌ಟ್ಯಾಂಕ್ ಈ ಬಗ್ಗೆ ಸಾಕಷ್ಟು ಗಂಭೀರವಾಗಿದೆ ಎನ್ನಲಾಗಿದೆ. 28ರ ಹರೆಯದ ಕೆಎಸ್ ಭರತ್ ತಂಡಕ್ಕೆ ಹೆಚ್ಚಿನ ಸಾಮರ್ಥ್ಯವನ್ನು ನೀಡುವ ನಿರೀಕ್ಷೆಯಿದೆ. ಅಲ್ಲದೆ ವಿಕೆಟ್ ಕೀಪಿಂಗ್ ಸಾಮರ್ಥ್ಯ ಕೂಡ ತಂಡಕ್ಕೆ ನೆರವಾಗಲಿದೆ. ಅಲ್ಲದೆ ದೊಡ್ಡ ಹೊಡೆತಗಳನ್ನು ಬಾರಿಸುವ ಸಮರ್ಥ್ಯ ಕೂಡ ಆರ್‌ಸಿಬಿ ಕೆಎಸ್ ಭರತ್ ಕಡೆಗೆ ಗಂಭೀರವಾಗಿ ಚಿತ್ತ ನೆಡಲು ಇರುವ ಮತ್ತೊಂದು ಪ್ರಮುಖ ಕಾರಣವಾಗಿದೆ. ಆದರೆ ಈ ನಿರ್ಧಾರವನ್ನು ತೆಗೆದುಕೊಂಡಲ್ಲಿ ಆರ್‌ಸಿಬಿ ಯುಜುವೇಂದ್ರ ಚಾಹಲ್ ಅಥವಾ ದೇವದತ್ ಪಡಿಕ್ಕಲ್ ಈ ಇಬ್ಬರಲ್ಲಿ ಒಬ್ಬರನ್ನು ಬಿಡುಗಡೆಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಲಿದೆ.

ಹರಾಜಿಗಿದೆ ಷರತ್ತುಗಳು: ಇನ್ನು ಎಲ್ಲಾ ತಂಡಗಳು ಪ್ರಮುಖ ನಾಲ್ವರು ಆಟರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶವಿದ್ದರೂ ಅದಕ್ಕೆ ಕೆಲ ಷರತ್ತುಗಳು ಇದೆ. ಈ ಬಾರಿಯ ಕರಾಜಿಗೆ ಫ್ರಾಂಚೈಸಿಗಳು 90 ಕೋಟಿ ರೂಪಾಯಿ ಮೊತ್ತವನ್ನು ಪರ್ಸ್‌ನಲ್ಲಿ ಹೊಂದಿರಲಿದೆ. ಅದರಲ್ಲಿ ನಾಲ್ವರು ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಳ್ಳಳು ನಿರ್ಧರಿಸಿದರೆ 42, ಕೋಟಿಯನ್ನು ಈ ಆಟಗಾರರಿಗೆ ಸಂಬಳವಾಗಿ ನೀಡಬೇಕಿದೆ. ಮೂವರು ಆಟಗಾರರಿಗಾದರೆ 33 ಕೋಟಿ ಇಬ್ಬರು ಆಟಗಾರರಿಗೆ 24 ಕೋಟಿ ಹಾಗೂ ಓರ್ವ ಆಟಗಾರನಿಗೆ 14 ಕೋಟಿ ರೂಪಾಯಿ ಮೊತ್ತ ನೀಡಬೇಕಾಗುತ್ತದೆ. ಇದು ಆಟಗಾರರು ಹಾಗೂ ಫ್ರಾಂಚೈಸಿಗಳಿಗೆ ಒಪ್ಪಿಗೆಯಾದರೆ ಮಾತ್ರವೇ ಈ ರೀಟೆನ್ಶನ್ ಪಟ್ಟಿಯಲ್ಲಿ ಆ ಆಟಗಾರರ ಹೆಸರು ಅಂತಿಮವಾಗಲಿದೆ.

Story first published: Tuesday, November 30, 2021, 17:10 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X