ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಂಪು ಸೇನೆ ಕೆಣಕೋರಿಗೆಲ್ಲ ಹಬ್ಬ ಕಾದಿದೆ: ಆರ್‌ಸಿಬಿ ಫ್ಯಾನ್ಸ್ ಗೀತೆ ಬಿಡುಗಡೆ

RCB Special Anthem released by fans ahead of IPL 2021

ಬೆಂಗಳೂರು: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಚಾಲನೆಗೊಳ್ಳುವುದರಲ್ಲಿದೆ. ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಆ್ಯಂಥಮ್ ಬಿಡುಗಡೆಯಾಗಿದೆ. ಅಭಿಮಾನಿಗಳೇ ರಚಿಸಿದ ವಿಶೇಷ ಗೀತೆಯಿದು.

ಕೋಲ್ಕತ್ತಾ ಅಭ್ಯಾಸ ಪಂದ್ಯ: ಟೀಮ್ ಪರ್ಪಲ್ ವಿರುದ್ಧ ರಾಣಾ XIಗೆ ಜಯಕೋಲ್ಕತ್ತಾ ಅಭ್ಯಾಸ ಪಂದ್ಯ: ಟೀಮ್ ಪರ್ಪಲ್ ವಿರುದ್ಧ ರಾಣಾ XIಗೆ ಜಯ

ಐಪಿಎಲ್ ಇತಿಹಾಸದಲ್ಲಿ ಒಂದು ಸಾರಿಯೂ ಟ್ರೋಫಿ ಗೆಲ್ಲದ ತಂಡಗಳ ಸಾಲಿನಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೆ. ಈ ಸೀಸನ್‌ನಲ್ಲಿ ಆರ್‌ಸಿಬಿ ಚೊಚ್ಚಲ ಕಪ್‌ ಗೆಲ್ಲಲಿ ಎಂಬ ಆಶಯದಡಿಯಲ್ಲಿ ಆರ್‌ಸಿಬಿ ಅಭಿಮಾನಿಗಳು ವಿಶೇಷ ಗೀತೆ ಬಿಡುಗಡೆಗೊಳಿಸಿದ್ದಾರೆ. ಹರೀಶ್ ಅರಸು, ಅಲ್ವಿನ್, ಶ್ರೀಧರ್ ನಾರಾಯಣ್ ಸೇರಿ ಈ ವಿಡಿಯೋ ರೂಪಿಸಿದ್ದಾರೆ.

ಐಪಿಎಲ್ : ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಐಪಿಎಲ್ : ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ

ಪ್ರಮೋದ್ ಮರವಂತೆ ಸಾಹಿತ್ಯಕ್ಕೆ ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ ನೀಡಿದ್ದಾರೆ. ಚೇತನ್ ನಾಯ್ಕ್ ಅವರ ಸೊಗಸಾದ ಕಂಠದಲ್ಲಿ ಆ್ಯಂಥಮ್ ಮೂಡಿಬಂದಿದೆ. ಗೀತೆಯುದ್ದಕ್ಕೂ ಆರ್‌ಸಿಬಿ ತಂಡ, ಅಭಿಮಾನಿಗಳಿಗೆ ಹುರುಪು ತುಂಬುವಂಥ ಸಾಲುಗಳು ಮೆರಗು ನೀಡಿವೆ. 'ಅದು ಏನೇ ಬರಲಿ ಈ ಸರ್ತಿ ಮಾತ್ರ ಕಪ್ಪು ನಮ್ಮದೇ' ಎಂಬ ಸಾಲು ಹೆಚ್ಚು ಸೆಳೆಯುತ್ತಿದೆ.

ಈ ಬಾರಿ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.



ಏಪ್ರಿಲ್ 9ರಂದು ಈ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 7.30 PMಗೆ ಆರಂಭಗೊಳ್ಳಲಿದೆ. ಈ ಸಾರಿಯಾದರೂ ವಿರಾಟ್ ಕೊಹ್ಲಿ ಪಡೆ ಕಪ್‌ ಗೆಲ್ಲಲಿ ಎಂದು ಹಾರೈಸೋಣ..

Story first published: Friday, April 9, 2021, 9:57 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X