ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs LSG: ಆರ್‌ಸಿಬಿ ವಿರುದ್ಧದ ಪಂದ್ಯ ಕೆಎಲ್ ರಾಹುಲ್‌ಗೆ ನಿಜವಾದ ಅಗ್ನಿ ಪರೀಕ್ಷೆ: ಕೈಫ್

RCB vs LSG: Mohammed Kaif said Real test of KL Rahuls form will be against RCB

ಐಪಿಎಲ್ 15ನೇ ಆವರತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಕ್ವಾಲಿಫೈಯರ್ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದುಕೊಂಡರೆ ಸೋಲು ಅನುಭವಿಸಿದ ತಂಡ ಟೂರ್ನಿಯಿಂದ ಹೊರಬೀಳಲಿದ್ದಾರೆ. ಹೀಗಾಗಿ ಈ ಪಂದ್ಯ ಎರಡು ತಂಡಗಳಿಗೂ ಅತ್ಯಂತ ನಿರ್ಣಾಯಕವಾಗಿದೆ.

ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೈಫ್ ಈ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರ ಫಾರ್ಮ್‌ಗೆ ನಿಜವಾದ ಅಗ್ನಿ ಪರೀಕ್ಷೆಯಾಗಿದೆ ಎಂದಿದ್ದಾರೆ.

ನಮ್ಮೂರ ಪ್ರತಿಭೆ: ಪ್ರೋ ಕಬಡ್ಡಿ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ರೈನಮ್ಮೂರ ಪ್ರತಿಭೆ: ಪ್ರೋ ಕಬಡ್ಡಿ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರಶಾಂತ್ ಕುಮಾರ್ ರೈ

"ಕಡೆ ತನಕ ಆಡುವ ಗುರಿಯಿಟ್ಟುಕೊಳ್ಳಬೇಕು"

"ನನ್ನ ಪ್ರಕಾರ ಈ ಪಂದ್ಯದಲ್ಲಿ ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ನಾಯಕನ ಆಟವನ್ನು ಪ್ರದರ್ಶಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಒತ್ತಡವನ್ನು ತಮ್ಮ ಮೇಲೆ ಹೇರಿಕೊಳ್ಳುತ್ತಾರೆ. ನೀವು ಫಾರ್ಮ್‌ನಲ್ಲಿರುವ ಕಾರಣ ಚೇಸಿಂಗ್‌ನಲ್ಲಿ ಬ್ಯಾಟಿಂಗ್ ಮಾಡುವ ರೀತಿಯಲ್ಲಿಯೇ ಮೊದಲಿಗೆ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿಯೂ ಮಾಡಬೇಕಿದೆ. ನಿಮ್ಮೊಂದಿಗೆ ಡಿ ಕಾಕ್ ನಿಮ್ಮೊಂದಿಗೆ ಆಡುತ್ತಿದ್ದು ಅವರು ಆಕ್ರಮಣಕಾರಿ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನೀವು ಕೊನೆಯ ಓವರ್‌ಗಳವರೆಗೆ ಆಡುವ ಯೋಜನೆ ಹೊಂದಿರಬೇಕು" ಎಂದಿದ್ದಾರೆ ಮೊಹಮ್ಮದ್ ಕೈಫ್.

ಇನ್ನು ಕ್ವಿಂಟನ್ ಡಿಕಾಕ್ ಚೇಸಿಂಗ್ ಸಂದರ್ಭದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ ಎಂದಿರುವ ಕೈಫ್ ಈ ಒತ್ತಡದಲ್ಲಿ ಚೇಸಿಂಗ್‌ನ ಸಂದರ್ಭದಲ್ಲಿ ಕೈಫ್ ಹಲವು ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ ಎಂದು ಬೊಟ್ಟು ಮಾಡಿದ್ದಾರೆ. ಕ್ವಿಂಟನ್ ಡಿಕಾಕ್ ಕೂಡ ಓರ್ವ ಕ್ಲಾಸ್ ಬ್ಯಾಟ್ಸ್‌ಮನ್ ಎಂದಿದ್ದಾರೆ ಮೊಹಮ್ಮದ್ ಕೈಫ್.

ರಾಹುಲ್‌ಗೆ ನಿಜವಾದ ಅಗ್ನಿ ಪರೀಕ್ಷೆ

ರಾಹುಲ್‌ಗೆ ನಿಜವಾದ ಅಗ್ನಿ ಪರೀಕ್ಷೆ

ಇನ್ನು ಈ ಬಾರಿಯ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂದಿನ ಹಂತಕ್ಕೆ ಅವಕಾಶವನ್ನು ಗಿಟ್ಟಿಸಿಕೊಳ್ಳಬೇಕಿದ್ದರೆ ನಾಯಕ ಕೆಎಲ್ ರಾಹುಲ್ ಮೇಲೆ ಬಹಳಷ್ಟು ಅಂಶಗಳು ಅವಲಂಬಿತವಾಗಿರುತ್ತದೆ ಎಂದಿದ್ದಾರೆ ಕೈಫ್. "ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ಪಂದ್ಯವನ್ನು ಗಮನದಲ್ಲಿಟ್ಟುಕೊಂಡರೆ ಎಲ್‌ಎಸ್‌ಜಿ ಸಾಕಷ್ಟು ಏರಿಳಿತಗಳೊಂದಿಗೆ ಈ ಹಂತವನ್ನು ತಲುಪಿದೆ. ಅವರು ಮೊದಲ ಬಾರಿಗೆ ಐಪಿಎಲ್ ಟೂರ್ನಿಯನ್ನು ಆಡುತ್ತಿದ್ದಾರೆ. ರಾಹುಲ್ ತಮ್ಮ ಅದ್ಭುತ ನಾಯಕತ್ವ ಹಾಗೂ ಬ್ಯಾಟಿಂಗ್‌ನ ಮೂಲಕ ತಂಡವನ್ನು ಪ್ಲೇಆಫ್ ಹಂತಕ್ಕೆ ತಲುಪಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್‌ಗೆ ನಿಜವಾದ ಪರೀಕ್ಷೆ ಯಾಕೆ ಆಗಿರುತ್ತದೆ ಎಂದರೆ ಈ ಪಂದ್ಯದಲ್ಲಿ ಯಾವ ತಪ್ಪನ್ನು ಕೂಡ ಮಾಡಬಾರದು" ಎಂದಿದ್ದಾರೆ ಮೊಹಮ್ಮದ್ ಕೈಫ್.

Hasaranga LSG ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದು ಹೀಗೆ | Oneindia Kannada
ಆಡುವ ಬಳಗ ಹೀಗಿದೆ

ಆಡುವ ಬಳಗ ಹೀಗಿದೆ

ಇನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿ ಗುರಿ ನಿಗದಿಪಡಿಸುವ ಸವಾಲು ಸ್ವೀಕರಿಸಿದೆ.

ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ನಾಯಕ), ಎವಿನ್ ಲೂಯಿಸ್, ದೀಪಕ್ ಹೂಡಾ, ಮನನ್ ವೋಹ್ರಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

Story first published: Thursday, May 26, 2022, 10:36 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X