ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR: ಮೈದಾನದಲ್ಲೇ ಮಾತಿನ ಚಕಮಕಿ: ಹರ್ಷಲ್ ಹಾಗೂ ಪರಾಗ್ ವಾಗ್ವಾದಕ್ಕೆ ಕಾರಣವೇನು?

RCB vs RR: Riyan Parag and Harshal Patel involved in heated argument between the match

ಮಂಗಳವಾರ ರಾತ್ರಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಸೆಣೆಸಾಟದಲ್ಲಿ ರಾಜಸ್ಥಾನ್ ಗೆದ್ದು ಬೀಗಿದೆ. ಬ್ಯಾಟಿಂಗ್‌ನಲ್ಲಿ ಅನುಭವಿಸಿದ ಆಘಾತಕಾರಿ ಹಿನ್ನಡೆಯಿಂದಾಗಿ ಸುಲಭ ಗುರಿ ಮುಂದಿದ್ದರೂ ಫಾಫ್ ಡು ಪ್ಲೆಸಿಸ್ ಬಳಗಕ್ಕೆ ಈ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ 29 ರನ್‌ಗಳ ಅಂತರದ ಸೋಲು ಅನುಭವಿಸಿದೆ ಆರ್‌ಸಿಬಿ. ಆದರೆ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್‌ನ ಮುಕ್ತಾಯದ ಸಂದರ್ಭದಲ್ಲಿ ಆರ್‌ಆರ್ ತಂಡದ ರಿಯಾನ್ ಪರಾಗ್ ಹಾಗೂ ಆರ್‌ಸಿಬು ಬೌಲರ್ ಹರ್ಷಲ್ ಪಟೇಲ್ ಮಧ್ಯೆ ನಡೆದ ಮಾತಿನ ಚಕಮಕಿ ಪಂದ್ಯದ ಕಾವು ಹೆಚ್ಚಿಸಿತ್ತು.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಆರ್‌ಸಿಬಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟರ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅದ್ಭುತ ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್, ಡೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ ಅವರಂತಾ ಆಟಗಾರರನ್ನು ಶೀಘ್ರವಾಗಿ ಔಟಾಗುವಂತೆ ನೋಡಿಕೊಂಡ ಆರ್‌ಸಿಬಿ ಬೌಲರ್‌ಗಳು ಆರ್‌ಆರ್ ಪಡೆಯನ್ನು ಒಂದು ಹಂತದಲ್ಲಿ ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಂಡಿದ್ದರು. ಆದರೆ ರಿಯಾನ್ ಪರಾಗ್ ಅದ್ಭುತ ಬ್ಯಾಟಿಂಗ್ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಮೊತ್ತ 144 ರನ್‌ಗಳಿಗೆ ಏರುವಂತೆ ಮಾಡಿದರು.

PBKS VS CSK: ಐಪಿಎಲ್‌ನಲ್ಲಿ ಅಮೋಘ ಸಾಧನೆ ಮಾಡಿದ ಗಬ್ಬರ್, ಕೊಹ್ಲಿ ಬಿಟ್ರೆ ಈತನೇ ಟಾಪರ್!PBKS VS CSK: ಐಪಿಎಲ್‌ನಲ್ಲಿ ಅಮೋಘ ಸಾಧನೆ ಮಾಡಿದ ಗಬ್ಬರ್, ಕೊಹ್ಲಿ ಬಿಟ್ರೆ ಈತನೇ ಟಾಪರ್!

ಈ ಪಂದ್ಯದಲ್ಲಿ ರಿಯಾನ್ ಪರಾಗ್ 31 ಎಸೆತಗಳನ್ನು ಎದುರಿಸಿದ್ದು 4 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 56 ರನ್ ಸಿಡಿಸಿ ಮಿಂಚಿದ್ದಾರೆ. ಅದರಲ್ಲೂ ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್‌ನಲ್ಲಿ ಪರಾಗ್ 2 ಸಿಕ್ಸರ್‌ಗಳ ಸಹಿರ 18 ರನ್‌ಗಳನ್ನು ಕಸಿಯುವಲ್ಲಿ ಯಶಸ್ವಿಯಾಗಿದ್ದರು. ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಪರಾಗ್ ನಂತರ ಫೆವಿಲಿಯನ್ ಕಡೆಗೆ ಹೆಜ್ಜೆ ಹಾಕುವುದು ಕಾಣಿಸಿತ್ತು. ಆದರೆ ನಂತರ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಹಾಗೂ ರಿಯಾಬ್ ಪರಾಗ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಪ್ರೇಕ್ಷಕರಿಗೂ ಅಚ್ಚರಿ ಮೂಡಿಸಿತ್ತು.

ಈ ಮಾತಿನ ಚಕಮಕಿಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಆದರೆ ಕೆಲ ಸೆಕೆಂಡ್‌ಗಳ ಕಾಲ ವಾಗ್ವಾದ ತೀವ್ರ ಮಟ್ಟದಲ್ಲಿ ನಡೆದಿರುವುದು ಸ್ಪಷ್ಟವಾಗಿತ್ತು. ಈ ನೇರಪ್ರಸಾರದಲ್ಲಿಯೂ ಈ ಮಾತಿನ ಚಕಮಕಿ ನಡೆದಿರುವ ದೃಶ್ಯಗಳು ಪ್ರಸಾರವಾಗಿದೆ. ತಾಳ್ಮೆಯಿಂದ ಬೌಲಿಂಗ್ ನಡೆಸುವ ಹರ್ಷಲ್ ಪಟೇಲ್ ತಾಳ್ಮೆ ಕಳೆದುಕೊಳ್ಳಲು ಕಾರಣವಾದ ಅಂಶ ಯಾವುದು ಎಂಬುದು ಕೂಡ ಕುತೂಹಲ ಮೂಡಿಸಿದೆ.

ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 8 ವಿಕೆಟ್ ಕಳೆದುಕೊಂಡು 144 ರನ್‌ಗಳನ್ನು ಗಳಿಸಿತು. ಜೋಶ್ ಹೇಜಲ್‌ವುಡ್, ವನಿಂದು ಹಸರಂಗ ಹಘಾಊ ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲಿ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಇತ್ತ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರರು ವೈಫಲ್ಉ ಅನುಭವಿಸಿದರೂ ಏಕಾಂಗಿ ಹೋರಾಟ ನಡೆಸಿ 150ರ ಸನಿಹಕ್ಕೆ ತಲುಪಲು ಕಾರಣವಾದರು. ಈ ಮೂಲಕ ಆರ್‌ಆರ್ ಪರವಾಗಿ ಅದ್ಭುತ ಪ್ರದರ್ಶನ ನೀಡಿ ರಿಯಾನ್ ಪರಾಗ್ ಮಿಂಚಿದ್ದಾರೆ.

ಆರ್‌ಸಿಬಿ ಪ್ಲೇಯಿಂಗ್ XI: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
ಬೆಂಚ್: ಅನುಜ್ ರಾವತ್, ಜೇಸನ್ ಬೆಹ್ರೆಂಡಾರ್ಫ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್ಫೋರ್ಡ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಚಾಮ ವಿ ಮಿಲಿಂದ್, ಆಕಾಶ್ ದೀಪ್, ಅನೀಶ್ವರ್ ಗೌತಮ್

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಡೇರಿಲ್ ಮಿಚೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್
ಬೆಂಚ್: ಕರುಣ್ ನಾಯರ್, ಒಬೆದ್ ಮೆಕಾಯ್, ಜೇಮ್ಸ್ ನೀಶಮ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ನವದೀಪ್ ಸೈನಿ, ಕೆಸಿ ಕಾರಿಯಪ್ಪ, ತೇಜಸ್ ಬರೋಕಾ, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಅನುನಯ್ ಸಿಂಗ್, ಧ್ರುವ ಜುರೆಲ್, ಶುಭಂ ಗರ್ವಾಲ್

Story first published: Wednesday, April 27, 2022, 13:27 [IST]
Other articles published on Apr 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X