ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!

Real challenge would be when ball wont swing: Boult

ಲಂಡನ್‌, ಮೇ 26: ಭಾರತ ವಿರುದ್ಧದ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಗೆಲುವಿನ ರೂವಾರಿ ಎಡಗೈ ವೇಗಿ ಟ್ರೆಂಟ್‌ ಬೌಲ್ಟ್, ವಿಶ್ವಕಪ್‌ನಲ್ಲಿ ಎದುರಾಗುವ ನೈಜ ಸವಾಲಿನ ಕುರಿತಾಗಿ ಬೆಳಕು ಚೆಲ್ಲಿದ್ದಾರೆ.

ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದುವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು

ಬೌಲ್ಟ್‌, 33ಕ್ಕೆ 4 ವಿಕೆಟ್‌ಗಳನ್ನು ಪಡೆದು ಮಿಂಚಿನ ಬೌಲಿಂಗ್‌ ದಾಳಿ ಸಂಘಟಿಸಿದ ಫಲವಾಗಿ ನ್ಯೂಜಿಲೆಂಡ್‌ ತಂಡ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡವನ್ನು 40 ಓವರ್‌ಗಳಲ್ಲಿ 179 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಮಾಡುವಲ್ಲಿ ಯಶಸ್ವಿಯಾಯಿತು.

ತಮ್ಮ ಈ ಅದ್ಭುತ ಬೌಲಿಂಗ್‌ ಪ್ರದರ್ಶನದ ಕುರಿತಾಗಿ ಮಾತನಾಡಿದ ಬೌಲ್ಟ್‌, ವಿಶ್ವಕಪ್‌ ಟೂರ್ನಿ ವೇಳೆ ಚೆಂಡು ಸ್ವಿಂಗ್‌ ಆಗದೇ ಇದ್ದರೆ ಹೇಗೆ ಬೌಲ್‌ ಮಾಡಬೇಕೆಂಬುದೇ ತಮ್ಮೆದುರು ಇರುವ ಬಹುದೊಡ್ಡ ಸವಾಲು ಎಂದು ಹೇಳಿದ್ದಾರೆ.

ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!

"ಕೊಂಚ ಸ್ವಿಂಗ್‌ ಪಡೆದದ್ದು ಉತ್ತಮ ಅನುಭವ ನೀಡಿದೆ. ಆದರೆ, ಬಹುದೊಡ್ಡ ಸವಾಲು ಇರುವುದು ಚೆಂಡು ಸ್ವಿಂಗ್‌ ಆಗದೇ ಇರುವಾಗ. ಸ್ವಿಂಗ್‌ ಆಗದೇ ಇದ್ದರೆ ವಿಕೆಟ್‌ ಪಡೆಯುವುದು ಹೇಗೆ? ಹೀಗಾಗಿ ಈ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ಆರಂಭಿಕ ವಿಕೆಟ್‌ಗಳನ್ನು ಪಡೆದರೆ ಎದುರಾಳಿ ತಂಡವನ್ನು ಒತ್ತಡಕ್ಕೆ ತಳ್ಳಲು ಸಾಧ್ಯವಾಗುತ್ತದೆ,'' ಎಂದು ಬೌಲ್ಟ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

"ಚೆಂಡನ್ನು ಸಾಧ್ಯವಾದಷ್ಟು ಮುಂದೆ ಪಿಚ್‌ ಮಾಡಿ ಸ್ವಿಂಗ್‌ ಆಗುವಂತೆ ಮಾಡುವುದು ನಮ್ಮ ಮೊದಲ ಪ್ರಯತ್ನ. ಆದರೂ ನಿರೀಕ್ಷೆಗೆ ತಕ್ಕಷ್ಟು ಸ್ವಿಂಗ್‌ ಆಗುತ್ತಿಲ್ಲ,'' ಎಂದು ಕಳೆದ ಬಾರಿಯ ವಿಶ್ವಕಪ್‌ನಲ್ಲಿ 22 ವಿಕೆಟ್‌ಗಳನ್ನು ಪಡೆಯುವ ಮೂಲಕ ನ್ಯೂಜಿಲೆಂಡ್‌ ತಂಡವನ್ನು ಫೈನಲ್‌ ವರೆಗೆ ಕೊಂಡೊಯ್ದಿದ್ದ ಬೌಲ್ಟ್‌ ವಿಶ್ವಕಪ್‌ನಲ್ಲಿ ಎದುರಾಗುವ ನೈಜ ಸವಾಲಿನ ಕುರಿತಾಗಿ ಮಾತನಾಡಿದ್ದಾರೆ.

Story first published: Sunday, May 26, 2019, 17:49 [IST]
Other articles published on May 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X