ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಜಕ್ಕೂ ಶ್ರೇಷ್ಠವಾದ ಜೋಡಿ: ಭಾರತದ ತಾರೆಯರ ಬಗ್ಗೆ ಆಸ್ಟ್ರೇಲಿಯಾ ಕೋಚ್ ಪ್ರಶಂಸೆ

Real good combination; australian coach justin Langer indian stars

ಆಸ್ಟ್ರೇಲಿಯಾ ವಿರುದ್ಧದ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸರಣಿ ಎಂದರೆ ಅದು ವೇಗಿಗಳಿಗೆ ಸ್ವರ್ಗ ಎಂದೇ ಬಣ್ಣಿಸಲಾಗುತ್ತದೆ. ಪಿಚ್‌ನ ಕಾರಣದಿಂದಾಗಿ ಆಸ್ಟ್ರೇಲಿಯಾ ವೇಗಿಗಳಿಗೆ ಹೆಚ್ಚೇ ಅನುಕೂಗಳು ದೊರೆಯಲಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿದೆ. ಆದರೆ ಈಗ ಭಾರತ ತಂಡದ ವೇಗದ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿರುವ ಕಾರಣ ಟೀಮ್ ಇಂಡಿಯಾ ಕೂಡ ಅತ್ಯುತ್ತಮ ತಿರುಗೇಟು ನೀಡುವ ನಿರೀಕ್ಷೆಯಿದೆ.

ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದ ಬಗ್ಗೆ ಹೆಚ್ಚಿನ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ವೇಗಿಗಳ ಬೌಲಿಂಗ್ ದಾಳಿಗೆ ಪ್ರತ್ಯುತ್ತರವನ್ನು ನೀಡಲು ಬ್ಯಾಟ್ಸ್‌ಮನ್‌ಗಳ ಮೂಲಕ ಸಿದ್ದರಾಗಿರುವುದಾಗಿಯೂ ಈ ಸಂದರ್ಭದಲ್ಲಿ ಲ್ಯಾಂಗರ್ ಹೇಳಿಕೊಂಡಿದ್ದಾರೆ.

ಕೋವಿಡ್ ಪರೀಕ್ಷೆಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಆಟಗಾರರು ಪಾಸ್ಕೋವಿಡ್ ಪರೀಕ್ಷೆಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಆಟಗಾರರು ಪಾಸ್

"ನಮಗೆ ಜಸ್ಪ್ರೀತ್ ಬೂಮ್ರಾ ಬಗ್ಗೆ ತಿಳಿದಿದೆ. ಆತನೋರ್ವ ವಿಶ್ವದರ್ಜೆಯ ಬೌಲರ್. ಮೊಹಮದ್ ಶಮಿ ಕೂಡ ಅತ್ಯುತ್ತಮ ಬೌಲರ್. ಈ ಜೋಡಿ ಶ್ರೇಷ್ಠವಾದ ಆರಂಭಿಕ ಜೋಡಿಯಾಗಿದೆ. ಈ ಆಟಗಾರರ ಬಗ್ಗೆ ನಾವು ಗೌರವವನ್ನು ಹೊಂದಿದ್ದೇವೆ. ಐಪಿಎಲ್ ಸೇರಿದಂತೆ ಕೆಲ ವರ್ಷಗಳಿಂದ ಈ ಆಟಗಾರರನ್ನು ಎದುರಿಸುತ್ತಿದ್ದೇವೆ. ಎಂದು ಲ್ಯಾಂಗರ್ ಹೇಳಿಕೆಯನ್ನು ನೀಡಿದ್ದಾರೆ.

"ನಮ್ಮ ಹುಡುಗರು ಸಾಕಷ್ಟು ಮುಖಾಮುಖಿಯನ್ನು ಕಂಡಿದ್ದಾರೆ. ಹಾಗಾಗಿ ಈ ಮುಖಾಮುಖಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಯಾವ ತಂಡ ಬೆಳವಣಿಗೆಯನ್ನು ಕಾಣುತ್ತದೆ. ಯಾವ ಆಟಗಾರರು ಬೆಳೆಯುತ್ತಾರೆ ಎಂಬುದನ್ನು ನೀವು ಕಾಣಲಿದ್ದೀರಿ. ಪರಸ್ಪರ ಎರಡು ದೇಶಗಳು ಹಲವು ಸಂದರ್ಭಗಳಲ್ಲಿ ಮುಖಾಮುಖಿಯಾಗಿದೆ ಎಂದು ಲ್ಯಾಂಗರ್ ಹೇಳಿದ್ದಾರೆ.

India vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯIndia vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯ

ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲುಯಾದ ಕೋಚ್ ಟೀಮ್ ಇಂಡಿಯಾ ಸ್ಪಿನ್ ವಿಭಾಗದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು. ಸ್ಮಿನ್ ವಿಭಾಗದಲ್ಲಿ ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ.

Story first published: Wednesday, November 25, 2020, 15:01 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X