ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಪ್ರವಾಸದಿಂದ ಭುವನೇಶ್ವರ್ ಕೈಬಿಡಲು ಈ ಅಂಶಗಳೇ ಕಾರಣ!

Reason behind Bhuvneshwar Kumar not in India squad for England tour

ನವದೆಹಲಿ: ಭಾರತೀಯ ಕ್ರಿಕೆಟ್ ತಂಡ ಈಗ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ (ಡಬ್ಲ್ಯೂಟಿಸಿ) ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗೆ ಸಿದ್ಧತೆ ನಡೆಸುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತದ ವೇಗಿ ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡಲಾಗಿಲ್ಲ. ಇದು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!

ಜೂನ್‌ನಲ್ಲಿ ಕಿವೀಸ್-ಭಾರತ ಮಧ್ಯೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆದರೆ, ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್-ಭಾರತ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಇದಕ್ಕೆ ಬಿಸಿಸಿಐ ತಂಡ ಪ್ರಕಟಿಸಿದ್ದು, ಪಟ್ಟಿಯಲ್ಲಿ ಬೆಂಚ್ ಪ್ಲೇಯರ್ ಆಗಿಯೂ ಭುವಿ ಕಾಣಸಿಕೊಂಡಿಲ್ಲ.

ಭುವಿಗೆ ಯಾಕೆ ಸ್ಥಾನ ನೀಡುತ್ತಿಲ್ಲ?

ಭುವಿಗೆ ಯಾಕೆ ಸ್ಥಾನ ನೀಡುತ್ತಿಲ್ಲ?

ಭುವನೇಶ್ವರ್ ಕುಮಾರ್‌ಗೆ ಯಾಕೆ ಸ್ಥಾನ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟಾಗ ಸಿಕ್ಕ ಅಂಶವೆಂದರೆ, ಭುವನೇಶ್ವರ್ ಕುಮಾರ್ ಇತ್ತೀಚೆಗೆ ಲಾಂಗೆಸ್ಟ್ ಫಾರ್ಮ್ಯಾಟ್‌ನಲ್ಲಿ ಆಡಿಲ್ಲ. 2020ರಲ್ಲಿ ಐಪಿಎಲ್‌ ವೇಳೆ ಭುವಿ ಗಾಯಗೊಂಡ ಬಳಿಕ ಯಾವುದೇ ಟೆಸ್ಟ್‌ ಪಂದ್ಯಗಳಲ್ಲಿ ಆಡಿಲ್ಲ. ಹೀಗಾಗಿ ಟೆಸ್ಟ್‌ ಕ್ರಿಕೆಟ್‌ ಅದರಲ್ಲೂ ಸುದೀರ್ಘ ಪ್ರವಾಸ ಸರಣಿಗೆ ಭುವಿ ಸೂಕ್ತರಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಂದುಕೊಂಡಿದೆ. ಭುವಿ ಮೂಲೆಗುಂಪಾಗಲು ಇದೊಂದು ಕಾರಣ.

ತಂಡದಲ್ಲಿ ಉತ್ತಮ ಬೌಲರ್‌ಗಳಿದ್ದಾರೆ

ತಂಡದಲ್ಲಿ ಉತ್ತಮ ಬೌಲರ್‌ಗಳಿದ್ದಾರೆ

ಭುವಿಗೆ ಸ್ಥಾನ ಸಿಗದಿರಲು ಮತ್ತೊಂದು ಕಾರಣವೆಂದರೆ ಭಾರತ ತಂಡದಲ್ಲಿ ಈಗಾಗಲೇ ಪ್ರತಿಭಾವಂತ ಬೌಲರ್‌ಗಳಿದ್ದಾರೆ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಇವರೆಲ್ಲ ಸದ್ಯ ಟೆಸ್ಟ್‌ ತಂಡದಲ್ಲಿರುವವರು. ಇವರಲ್ಲಿ ಹೆಚ್ಚಿನವರು ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದವರು. ಹೀಗಾಗಿ ಇವರನ್ನು ತಂಡದಿಂದ ಕೈಬಿಡಲು ಬಿಸಿಸಿಐ ಮನಸು ಮಾಡಿಲ್ಲ.

ಪ್ರಥಮದರ್ಜೆ ಕ್ರಿಕೆಟ್ ಆಡಿ 3 ವರ್ಷ ಕಳೆದಿದೆ

ಪ್ರಥಮದರ್ಜೆ ಕ್ರಿಕೆಟ್ ಆಡಿ 3 ವರ್ಷ ಕಳೆದಿದೆ

ಭುವನೇಶ್ವರ್ ಕುಮಾರ್ ಇತ್ತೀಚೆಗೆ ಪ್ರಥಮದರ್ಜೆ ಕ್ರಿಕೆಟ್ ಕೂಡ ಆಡಿದ್ದಿಲ್ಲ. ಭುವಿ ಕೊನೇ ಪ್ರಥಮದರ್ಜೆ ಕ್ರಿಕೆಟ್ ಆಡಿದ್ದು ಜನವರಿ 2018ರಲ್ಲಿ. ಆವತ್ತು ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಡಿದ್ದರು. ಆವತ್ತಿನಿಂದಲೂ ಭುವಿಯನ್ನು ವೈಟ್‌ಬಾಲ್‌ಗೆ ಹೆಚ್ಚು ಪರಿಗಣಿಸಲಾಗುತ್ತಿತ್ತು. ಅಲ್ಲದೆ 2020ರ ಐಪಿಎಲ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದ ವೇಳೆ ಭುವಿ ಸ್ನಾಯು ಸೆಳೆತಕ್ಕೀಡಾಗಿ ದೀರ್ಘ ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿಸಿದ್ದರು.

Story first published: Saturday, May 15, 2021, 12:05 [IST]
Other articles published on May 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X