ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ODI ನಾಯಕತ್ವ ಕಳೆದುಕೊಳ್ಳಲು ಪ್ರಮುಖ ಕಾರಣಗಳೇನು?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒತ್ತಡಕ್ಕೆ ಮಣಿದು ಏಕದಿನ ನಾಯಕತ್ವವನ್ನು ಒಲ್ಲದ ಮನಸ್ಸಿನಲ್ಲಿ ವಿರಾಟ್ ಬಿಟ್ಟುಕೊಟ್ಟಿದ್ದಾರೆ. ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್ ಸೀಟ್ ಬಿಟ್ಟುಕೊಟ್ಟಿದ್ದ ಕೊಹ್ಲಿಗೆ, ಬಲವಂತವಾಗಿ ಏಕದಿನ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಸಿದಂತಿದೆ.

ಬಿಸಿಸಿಐ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ರೋಹಿತ್ ಶರ್ಮಾರನ್ನ ಮುಂದಿನ ಟಿ20 ಹಾಗೂ ಏಕದಿನ ಕ್ರಿಕೆಟ್ ನಾಯಕನಾಗಿ ಮುಂದುವರಿಸಿರುವುದಾಗಿ ಘೋಷಿಸಿದೆ. ಹಾಗಿದ್ರೆ ವಿರಾಟ್ ಕೊಹ್ಲಿಯಿಂದ ನಾಯಕತ್ವ ಕಿತ್ತುಕೊಳ್ಳಲು ಕಾರಣ ಏನಿರಬಹುದು ಎಂಬುದನ್ನ ತಿಳಿದುಕೊಳ್ಳಲು ಈ ಕೆಳಗೆ ಓದಿ

ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ

ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ

ಒಡಿಐ ನಾಯಕನಾಗಿ ವಿರಾಟ್ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ರಾಷ್ಟ್ರಗಳ ಎದುರು ಸರಣಿ ಗೆಲುವು ತಂದುಕೊಟ್ಟಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಟೀಂ ಇಂಡಿಯಾ 19 ಏಕದಿನ ದ್ವಿಪಕ್ಷೀಯ ಸರಣಿಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ತವರು ನೆಲದಲ್ಲಿ, ಅವರು 9 ದ್ವಿಪಕ್ಷೀಯ ಸರಣಿಗಳಲ್ಲಿ 8 ಅನ್ನು ಗೆದ್ದರು ಆದರೆ ವಿರಾಟ್ ICC ಟ್ರೋಫಿ ಗೆಲ್ಲಲು ವಿಫಲರಾದರು.

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್ ತಲುಪಿದ್ದರೂ ಕಪ್ ಗೆಲ್ಲಲಿಲ್ಲ, 50 ಓವರ್‌ಗಳ 2019 ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಸೆಮಿಫೈನಲ್‌ನಲ್ಲಿ ಮಳೆಯ ಕಾರಣದಿಂದಾಗಿ ಫಲಿತಾಂಶವೇ ಬದಲಾಯಿತು. ಇನ್ನು 2021 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿತ್ತು.

ಅಂತೂ ವಿರಾಟ್ ಕೊಹ್ಲಿ ಕೈ ಜಾರಿತು ODI ನಾಯಕತ್ವ: ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದ BCCI

ಸೀಮಿತ ಓವರ್‌ಗಳಿಗೆ ಒಬ್ಬನೇ ನಾಯಕ

ಸೀಮಿತ ಓವರ್‌ಗಳಿಗೆ ಒಬ್ಬನೇ ನಾಯಕ

ಸಂಪೂರ್ಣ ವೈಟ್ ಬಾಲ್ ಕ್ರಿಕೆಟ್‌ಗೆ ಒಬ್ಬನೇ ನಾಯಕನನ್ನ ನಿಯೋಜಿಸುವ ಸಲುವಾಗಿ ರೋಹಿತ್ ಶರ್ಮಾಗೆ ಬಿಸಿಸಿಐ ಪಟ್ಟ ಕಟ್ಟಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳಲ್ಲಿ ಲಿಮಿಟೆಡ್ ಓವರ್ ಕ್ರಿಕೆಟ್‌ಗೂ , ಟೆಸ್ಟ್ ಕ್ರಿಕೆಟ್‌ಗೂ ವಿಭಿನ್ನ ನಾಯಕರನ್ನ ಕಾಣಬಹುದು. ಇದೇ ರೀತಿಯಲ್ಲಿ ಈಗಾಗಲೇ ಟಿ20 ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಏಕದಿಕ ಕ್ರಿಕೆಟ್ ನಾಯಕತ್ವ ನೀಡುವ ಮೂಲಕ, ನಿಗದಿತ ಓವರ್‌ಗಳಿಗೆ ಒಬ್ಬನೇ ನಾಯಕನನ್ನ ಮಾಡುವ ಗುರಿಯನ್ನ ಕಾಣಬಹುದು. ಇದರ ಜೊತೆಗೆ ವಿರಾಟ್ ಕೊಹ್ಲಿಯನ್ನು ಟೆಸ್ಟ್ ನಾಯಕನಾಗಿ ಉಳಿಸಿಕೊಳ್ಳುವುದು ಸರಿ ಎಂದು ಭಾವಿಸಿದೆ.

ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್‌ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!

ಮೂರು ಫಾರ್ಮೆಟ್‌ಗೆ ಒಬ್ಬನೇ ನಾಯಕನಾದ್ರೆ ಹೆಚ್ಚು ಹೊರೆ!

ಮೂರು ಫಾರ್ಮೆಟ್‌ಗೆ ಒಬ್ಬನೇ ನಾಯಕನಾದ್ರೆ ಹೆಚ್ಚು ಹೊರೆ!

ಕೋವಿಡ್-19 ಕಾರಣಗಳಿಂದಾಗಿ ಟೀಂ ಇಂಡಿಯಾ ಆಟಗಾರರು ಎಲ್ಲೇ ಸರಣಿಗೆ ಹೋದ್ರು ಬಯೋ ಬಬಲ್‌ನಲ್ಲಿ ಕಳೆಯಬೇಕಾಗುತ್ತದೆ. ಹೀಗಾಗಿ ಎಲ್ಲಾ ಮೂರು ಸ್ವರೂಪಗಳ ನಾಯಕತ್ವ ಮಾಡುವುದು ಸುಲಭವಲ್ಲ. ಮೂರು ಮಾದರಿಯಲ್ಲಿ ಆಡುವುದರ ಜೊತೆಗೆ ತಂಡದ ನಾಯಕತ್ವವು ಸವಾಲಾಗಿದ್ದರ ಪರಿಣಾಮವೇ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಳೆಗುಂದಿರುವುದನ್ನ ಕಾಣಬಹುದು. 70 ಅಂತರಾಷ್ಟ್ರೀಯ ಶತಕ ಸಿಡಿಸಿರುವ ಕೊಹ್ಲಿಗೆ ಕಳೆದ 2 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಏಕದಿನ ಹಾಗೂ ಟಿ20 ನಾಯಕತ್ವದಿಂದ ಬಿಡುಗಡೆಗೊಂಡ ಬಳಿಕ ಇದೀಗ ವಿರಾಟ್ ಕೊಹ್ಲಿ ಹೆಚ್ಚಿನ ರಿಲೀಫ್ ಪಡೆಯಲಿದ್ದಾರೆ.

ವಿರಾಟ್ ಕೊಹ್ಲಿಗೆ ನಾಯಕತ್ವ ಬಿಟ್ಟುಕೊಡಲು ಸ್ವಲ್ಪವೂ ಇಷ್ಟವಿಲ್ಲ | Oneindia Kannada
ರೋಹಿತ್‌ಗೆ ನಾಯಕತ್ವ ಹಸ್ತಾಂತರಕ್ಕೆ ದ್ರಾವಿಡ್ ಬೆಂಬಲ?

ರೋಹಿತ್‌ಗೆ ನಾಯಕತ್ವ ಹಸ್ತಾಂತರಕ್ಕೆ ದ್ರಾವಿಡ್ ಬೆಂಬಲ?

ವಾಸ್ತವವಾಗಿ, ಭಾರತದ ಹೊಸ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನ್ಯೂಜಿಲೆಂಡ್ ವಿರುದ್ಧದ ಟಿ20 ಅಂತರಾಷ್ಟ್ರೀಯ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರಿಗೆ ಸಂಪೂರ್ಣ ವೈಟ್ ಬಾಲ್ ನಾಯಕತ್ವವನ್ನು ಹಸ್ತಾಂತರಿಸಲು ಬಯಸಿದ್ದರು ಎಂಬ ಮಾತುಗಳು ಹರಿದಾಡಿವೆ. ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಸೆಲೆಕ್ಟ್ ಆದ ಮೇಲೆ ಹೊಸ ನಾಯಕನೊಂದಿಗೆ ತಂಡವನ್ನು ಮುನ್ನಡೆಸಲು ರಾಹುಲ್ ದ್ರಾವಿಡ್ ಯೋಜಿಸಿದ್ದಾರೆ ಎನ್ನಲಾಗಿದೆ.

Story first published: Thursday, December 9, 2021, 9:29 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X