ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup 2022: 15 ಸದಸ್ಯರ ತಂಡವನ್ನು ಪ್ರಕಟಿಸಿದ ಏಷ್ಯಾಕಪ್‌ ವಿಜೇತ ಶ್ರೀಲಂಕಾ ತಂಡ

ಏಷ್ಯಾಕಪ್‌ 2022 ಗೆದ್ದಿರುವ ಸಂಭ್ರಮದಲ್ಲಿರುವ ಶ್ರೀಲಂಕಾ ಶುಕ್ರವಾರ ಟಿ20 ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಏಷ್ಯಾಕಪ್‌ ತಂಡದಲ್ಲಿ ಸ್ಥಾನ ಪಡೆದಿದ್ದ, ದುಷ್ಮಂತ ಚಮೀರ ಮತ್ತು ಲಹಿರು ಕುಮಾರ ಆಯ್ಕೆಯಾಗಿದ್ದು, ಆದರೆ ಇಬ್ಬರೂ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಿದೆ.

ಅಶೆನ್ ಬಂಡಾರ, ಪ್ರವೀಣ್ ಜಯವಿಕ್ರಮ, ದಿನೇಶ್ ಚಾಂಡಿಮಲ್, ಬಿನೂರ ಫೆರ್ನಾಂಡೋ ಮತ್ತು ನುವಾನಿಡು ಫೆರ್ನಾಂಡೋ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರಾಗಿ ಹೆಸರಿಸಲಾಗಿದ್ದು, ಬಂಡಾರ ಮತ್ತು ಜಯವಿಕ್ರಮ ಮಾತ್ರ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

ಏಷ್ಯಾ ಕಪ್‌ನಲ್ಲಿ ಸಿಕ್ಸರ್ ಸಿಡಿಸಿದ ಬ್ಯಾಟ್ ಹರಾಜಿಗಿಡಲು ಮುಂದಾದ ನಸೀಮ್ ಶಾಏಷ್ಯಾ ಕಪ್‌ನಲ್ಲಿ ಸಿಕ್ಸರ್ ಸಿಡಿಸಿದ ಬ್ಯಾಟ್ ಹರಾಜಿಗಿಡಲು ಮುಂದಾದ ನಸೀಮ್ ಶಾ

ಏಷ್ಯಾ ಕಪ್ 2022 ರ ಹೆಚ್ಚಿನ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಏಷ್ಯಾಕಪ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಮಥೀಶ ಪತಿರಾನ, ನುವಾನ್ ತುಷಾರ ಮತ್ತು ಅಸಿತ ಫೆರ್ನಾಂಡೋ ಮುಖ್ಯ ತಂಡ ಮತ್ತು ಸ್ಟಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

Recent Asia Cup Champion Sri Lanka Announced Squad For The ICC Mens T20 World Cup

ಏಷ್ಯಾಕಪ್‌ನಲ್ಲಿ ಟಿ20ಐ ತಂಡಕ್ಕೆ ಮರಳಿದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್ ದಿನೇಶ್ ಚಾಂಡಿಮಾಲ್ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಪ್ರಭಾವಿ ಎಡಗೈ ವೇಗಿ ದಿಲ್ಶಾನ್ ಮಧುಶಂಕ ಯುಎಇಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಏಷ್ಯಾಕಪ್‌ಗೆ ಬಂದ ನಂತರ ಧನಂಜಯ ಡಿ ಸಿಲ್ವಾ ಮತ್ತು ಜೆಫ್ರಿ ವಾಂಡರ್ಸೆ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಟಿ20 ವಿಶ್ವಕಪ್ ತಂಡಲ್ಲಿ ಶೋಯೆಬ್ ಮಲಿಕ್ ಆಯ್ಕೆಯಾಗದಿರಲು ಆ ಒಂದು ಟ್ವೀಟ್ ಕಾರಣಟಿ20 ವಿಶ್ವಕಪ್ ತಂಡಲ್ಲಿ ಶೋಯೆಬ್ ಮಲಿಕ್ ಆಯ್ಕೆಯಾಗದಿರಲು ಆ ಒಂದು ಟ್ವೀಟ್ ಕಾರಣ

ಪ್ರಮುಖ ವೇಗದ ಬೌಲರ್ ಚಮೀರಾ ಪಾದದ ಗಾಯವು ಸಂಪೂರ್ಣವಾಗಿ ವಾಸಿಯಾಗಿಲ್ಲ ಮತ್ತು ಅವರ ಮರಳುವಿಕೆಯು ಒಂದು ತಿಂಗಳ ಅವಧಿಯಲ್ಲಿ ಅವರ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. ಚಮೀರಾ ಮತ್ತು ಲಹಿರು ಕುಮಾರ ಅವರ ಭಾಗವಹಿಸುವಿಕೆಯ ಅನುಮಾನದ ಹೊರತಾಗಿಯೂ, ತಂಡವು ಹಲವಾರು ವೇಗದ ಬೌಲರ್ ಗಳನ್ನು ಹೊಂದಿದೆ, ಮಧುಶಂಕ, ಪ್ರಮೋದ್ ಮದುಶನ್ ಮತ್ತು ಚಾಮಿಕ ಕರುಣಾರತ್ನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾ ಟಿ20 ವಿಶ್ವಕಪ್ ತಂಡ

ದಸುನ್ ಶಾನಕ (ಸಿ), ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಚಮಿಕಾ ಕರುಣಾರತ್ನೆ, ಫಿಟ್ನೆಸ್ ಕರುಣಾರತ್ನೆ ಲಹಿರು ಕುಮಾರ (ಫಿಟ್‌ನೆಸ್‌ಗೆ ಒಳಪಟ್ಟವರು), ದಿಲ್ಶನ್ ಮಧುಶಂಕ, ಪ್ರಮೋದ್ ಮದುಶನ್

ಸ್ಟ್ಯಾಂಡ್‌ಬೈ ಆಟಗಾರರು: ಅಶೆನ್ ಬಂಡಾರ, ಪ್ರವೀಣ್ ಜಯವಿಕ್ರಮ, ದಿನೇಶ್ ಚಾಂಡಿಮಲ್, ಬಿನೂರ ಫೆರ್ನಾಂಡೊ, ನುವಾನಿಡು ಫೆರ್ನಾಂಡೊ

Story first published: Saturday, September 17, 2022, 10:59 [IST]
Other articles published on Sep 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X