ಐಪಿಎಲ್ 2020ರಲ್ಲಿ ಮೊದಲ ಶತಕ ಸಿಡಿಸಿ, ರಾಹುಲ್ ಮುರಿದ ದಾಖಲೆಗಳ ಪಟ್ಟಿ

ಭಾರಿ ಕುತೂಹಲ ಕೆರಳಿಸಿದ್ದ ಐಪಿಎಲ್ 2020ರ ಪಂದ್ಯದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ನಾಯಕ್ ಲೋಕೇಶ್ ರಾಹುಲ್ ಸಕತ್ತಾಗಿ ಮಿಂಚಿದ್ದಾರೆ.

ಟೀಂ ಇಂಡಿಯಾ ನಾಯಕ, ಆತ್ಮೀಯ ಗೆಳೆಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಎದುರು ನಾಯಕನಾಗಿ, ಬ್ಯಾಟ್ಸ್ ಮನ್ ಆಗಿ ಫುಲ್ ಮಾರ್ಕ್ಸ್ ಗಳಿಸಿದ್ದಾರೆ. ಹೆಚ್ಚು ಕರ್ನಾಟಕ ಆಟಗಾರರು ಹಾಗೂ ಕನ್ನಡಿಗ ಕೋಚ್(ಅನಿಲ್ ಕುಂಬ್ಳೆ) ಹೊಂದಿರುವ ಪಂಜಾಬ್ ತಂಡದ ನಾಯಕತ್ವವನ್ನು ಇದೇ ಮೊದಲ ಬಾರಿಗೆ ವಹಿಸಿಕೊಂಡಿರುವ ರಾಹುಲ್ ಅವರು ಇಂದು ಆಕರ್ಷಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಐಪಿಎಲ್: ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಕನ್ನಡಿಗ ಕೆಎಲ್ ರಾಹುಲ್

ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕಿಂಗ್ಸ್‌ ಇಲೆವೆನ್ ಪಂಜಾಬ್‌ ಪರ ನಾಯಕ ಕೆ.ಎಲ್ ರಾಹುಲ್ ಭರ್ಜರಿ ಆಟ ಪ್ರದರ್ಶಿಸಿದರು. ಐಪಿಎಲ್ ನಲ್ಲಿ ತ್ವರಿತಗತಿಯಲ್ಲಿ 60 ಇನ್ನಿಂಗ್ಸ್ ನಲ್ಲೇ 2000ರನ್ ಗಳಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಬದಿಗೊತ್ತಿದರು.

ಟಿ 20ಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದವರ ಕ್ಲಬಿಗೆ ಎಬಿ ಡಿ ಎಂಟ್ರಿ

ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಕೆ.ಎಲ್ ರಾಹುಲ್ ಇನ್ನಿಂಗ್ಸ್‌ನಲ್ಲಿ 7 ಭರ್ಜರಿ ಸಿಕ್ಸರ್ ಮತ್ತು 13 ಆಕರ್ಷಕ ಬೌಂಡರಿಗಳಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ಅವರು ಅಜೇಯರಾಗಿ ಇನ್ನಿಂಗ್ಸ್ ಮುಗಿಸಿ ಪೆವಿಲಿಯನ್ ಕಡೆಗೆ ಹೊರ ಬರುವಾಗ ಎದುರಾಳಿ ತಂಡದವರು ಕೈ ತಟ್ಟಿ ಅಭಿನಂದಿಸಿದರು. ರಾಹುಲ್ ಶತಕದ ನೆರವಿನಿಂದ ಆರ್ ಸಿಬಿಯನ್ನು 97ರನ್ ಗಳಿಂದ ಸೋಲಿಸಲು ಸಾಧ್ಯವಾಯಿತು.

 ಕೊನೆ ಓವರ್ ಗಳಲ್ಲಿ ಅತಿ ಹೆಚ್ಚು ರನ್ ಗಳಿಕೆ

ಕೊನೆ ಓವರ್ ಗಳಲ್ಲಿ ಅತಿ ಹೆಚ್ಚು ರನ್ ಗಳಿಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಕೊನೆ ಓವರ್ ಗಳಲ್ಲಿ ಬ್ಯಾಟ್ಸ್ ಮನ್ ಕೈಯಲ್ಲಿ ಚೆಚ್ಚಿಸಿಕೊಳ್ಳುವುದು ಮಾಮೂಲಿ ಸಂಗತಿ. ಕೊನೆ 12 ಎಸೆತಗಳನ್ನು ಎದುರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ;

44 (10 ಎಸೆತ): 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ವಿರಾಟ್ ಕೊಹ್ಲಿ

42 (9 ಎಸೆತ): 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಎಲ್ ರಾಹುಲ್

39 (11 ಎಸೆತ): 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ರೆಂಡನ್ ಮೆಕಲಮ್

44 (10 ಎಸೆತ): 2017ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕ್ರಿಸ್ ಮೋರಿಸ್

44 (10 ಎಸೆತ): 2020ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ಮಾರ್ಕಸ್ ಸ್ಟೋಯಿನಿಸ್

 ಐಪಿಎಲ್ ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಕೆ

ಐಪಿಎಲ್ ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ನಾಯಕನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ವಿವರ ಇಲ್ಲಿದೆ. ಕೆಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಸಿಡಿಸಿದ ಶತಕದಿಂದ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ 2017ರಲ್ಲಿ ವಾರ್ನರ್ ಹೆಸರಿನಲ್ಲಿದ್ದ ದಾಖಲೆ ಅಳಿಸಿದ್ದಾರೆ.

ಐಪಿಎಲ್ ನಾಯಕರ ಅತ್ಯಧಿಕ ವೈಯಕ್ತಿಕ ರನ್ ಗಳಿಕೆ

132(ಅಜೇಯ): ಕೆಎಲ್ ರಾಹುಲ್ 2020

126: ಡೇವಿಡ್ ವಾರ್ನರ್, 2017

119: ವಿರೇಂದ್ರ ಸೆಹ್ವಾಗ್, 2011

113: ವಿರಾಟ್ ಕೊಹ್ಲಿ, 2016

109: ವಿರಾಟ್ ಕೊಹ್ಲಿ, 2016

108(ಅಜೇಯ): ವಿರಾಟ್ ಕೊಹ್ಲಿ, 2016

 ಭಾರತೀಯ ಬ್ಯಾಟ್ಸ್ ಮನ್ ಅತ್ಯಧಿಕ ವೈಯಕ್ತಿಕ ರನ್

ಭಾರತೀಯ ಬ್ಯಾಟ್ಸ್ ಮನ್ ಅತ್ಯಧಿಕ ವೈಯಕ್ತಿಕ ರನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲೂ ಕೆಎಲ್ ರಾಹುಲ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ 2018ರಲ್ಲಿ ಈ ದಾಖಲೆ ಬರೆದಿದ್ದ ರಿಷಬ್ ಪಂತ್ ಹಿಂದಿಕ್ಕಿದ್ದಾರೆ.

ಭಾರತೀಯ ಬ್ಯಾಟ್ಸ್ ಮನ್ ಅತ್ಯಧಿಕ ವೈಯಕ್ತಿಕ ರನ್ ಗಳಿಕೆ ಪಟ್ಟಿ

132 (ಅಜೇಯ): ಕೆಎಲ್ ರಾಹುಲ್, 2020

128 (ಅಜೇಯ): ರಿಷಬ್ ಪಂತ್, 2018

127: ಮುರಳಿ ವಿಜಯ್, 2010

122: ವೀರೇಂದ್ರ ಸೆಹ್ವಾಗ್, 2014

120 (ಅಜೇಯ): ಪಾಲ್ ವಲ್ತಾಟಿ, 2011

 ಎದುರಾಳಿ ತಂಡದ ಸ್ಕೋರ್ ಗಿಂತ ಅಧಿಕ ರನ್ ಗಳಿಕೆ

ಎದುರಾಳಿ ತಂಡದ ಸ್ಕೋರ್ ಗಿಂತ ಅಧಿಕ ರನ್ ಗಳಿಕೆ

ಎದುರಾಳಿ ತಂಡದ ಸ್ಕೋರ್ ಗಿಂತ ಬ್ಯಾಟ್ಸ್ ಮನ್ ರೊಬ್ಬರು ಅಧಿಕ ರನ್ ಗಳಿಸಿದ ಪ್ರಸಂಗಗಳು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಈ ಹಿಂದೆ ಕೂಡಾ ಘಟಿಸಿದೆ. ಕೆಎಲ್ ರಾಹುಲ್ ಇಂದು 132 ರನ್ ಗಳಿಸಿದರು. ಎದುರಾಳಿ ತಂಡ 109ಕ್ಕೆ ಆಲೌಟ್ ಆಯಿತು. ಇದೇ ರೀತಿ ಈ ಹಿಂದೆ ಯಾವಾಗ ಸಂಭವಿಸಿದ್ದು ,ಯಾವ ಆಟಗಾರ ಈ ರೀತಿ ಮಿಂಚಿದ್ದರು ಪಟ್ಟಿ ನೋಡಿ:

* 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (82) ವಿರುದ್ಧ ಮೆಕಲಮ್ (158ರನ್ )

* 2009ರಲ್ಲಿ ರಾಜಸ್ಥಾನ ರಾಯಲ್ಸ್ (55) ವಿರುದ್ಧ ದ್ರಾವಿಡ್ (66 ರನ್)

* 2013ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ (133) ವಿರುದ್ಧ ಕ್ರಿಸ್ ಗೇಲ್ (117)

* 2015ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ (88) ವಿರುದ್ಧ ಕ್ರಿಸ್ ಗೇಲ್ (117)

* 2016ರಲ್ಲಿ ಗುಜರಾತ್ ಲಯನ್ಸ್ (104) ವಿರುದ್ಧ ಎಬಿ ಡಿ (129) ಹಾಗೂ ಕೊಹ್ಲಿ 109)

* 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (109) ವಿರುದ್ಧ ರಾಹುಲ್ (132 ರನ್ )

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, September 24, 2020, 23:12 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X