ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಾನ್ ಬ್ರಾಡ್ಮನ್, ಸಚಿನ್ ದಾಖಲೆ ಧೂಳಿಪಟ ಮಾಡಿದ ರೋಹಿತ್ ಶರ್ಮಾ

Rohit breaks 71 years old Don Bradman's Record | Oneindia Kannada

ರಾಂಚಿ, ಅಕ್ಟೋಬರ್ 20: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಾವಳಿಯ ಎರಡನೇ ದಿನದಂದು ರೋಹಿತ್ ಶರ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ತಮ್ಮ ಟೆಸ್ಟ್ ವೃತ್ತಿ ಬದುಕಿನ ಮೊದಲ ದ್ವಿಶತಕ ಗಳಿಸುವ ಮೂಲಕ ಅನೇಕ ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

249 ಎಸೆತಗಳಲ್ಲಿ 200ರನ್ ಗಡಿ ದಾಟಿದ ರೋಹಿತ್ ಶರ್ಮಾ ಅವರು ಸಿಕ್ಸರ್ ಸಿಡಿಸಿ ಹೊಸ ಮೈಲಿಗಲ್ಲು ದಾಟಿದರು. 255 ಎಸೆತಗಳಲ್ಲಿ 212ರನ್(28 ಬೌಂಡರಿ, 6 ಸಿಕ್ಸರ್) ಗಳಿಸಿದ ರೋಹಿತ್ ದ್ವಿಶತಕ ಸಿಡಿಸಿದ ಬೆನ್ನಲ್ಲೇ ರೋಹಿತ್ ಶರ್ಮ ಅವರು ರಬಾಡಾ ಬೌಲಿಂಗ್ ನಲ್ಲಿ ಲುಂಗಿ ನಿಗಿಡಿಗೆ ಕ್ಯಾಚಿತ್ತು ಔಟಾದರು.

ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಹಿಟ್ ಮ್ಯಾನ್ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಹಿಟ್ ಮ್ಯಾನ್

ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್ ಅವರ ನಂತರ ದ್ವಿಶತಕ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಸ್ಥಾಪಿಸಿದ್ದಾರೆ. ವಿಶಾಖಪಟ್ಟಣಂ ಹಾಗೂ ಪುಣೆಯಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ, ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಪಡೆದುಕೊಂಡಿದೆ. ದ್ವಿಶತಕ ಸಿಡಿಸಿ ರೋಹಿತ್ ಶರ್ಮ ಸ್ಥಾಪಿಸಿದ ದಾಖಲೆಗಳ ವಿವರ ಮುಂದಿದೆ.

ಏಕದಿನ, ಟೆಸ್ಟ್ ಎರಡರಲ್ಲೂ ದ್ವಿಶತಕ ಗಳಿಕೆ

ಏಕದಿನ, ಟೆಸ್ಟ್ ಎರಡರಲ್ಲೂ ದ್ವಿಶತಕ ಗಳಿಕೆ

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡು ಮಾದರಿಯಲ್ಲೂ ದ್ವಿಶತಕ ಗಳಿಸಿದ ಆಟಗಾರರ ಪೈಕಿ ರೋಹಿತ್ ಶರ್ಮಾ ನಾಲ್ಕನೇ ಆಟಗಾರರ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್ ಅವರು ಈ ಮುಂಚೆ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮ ಅವರು ಏಕದಿನ ಕ್ರಿಕೆಟ್ ನಲ್ಲಿ ಮೂರು ದ್ವಿಶತಕ ಬಾರಿಸಿದ್ದು, 264 ಅತ್ಯಧಿಕ ರನ್ ಗಳಿಕೆ ದಾಖಲೆ ಹೊಂದಿದ್ದಾರೆ.

ಟೆಸ್ಟ್ ಸರಣಿಯಲ್ಲಿ 500 ಪ್ಲಸ್ ರನ್ ಗಳಿಕೆ

ಟೆಸ್ಟ್ ಸರಣಿಯಲ್ಲಿ 500 ಪ್ಲಸ್ ರನ್ ಗಳಿಕೆ

ಟೆಸ್ಟ್ ಸರಣಿಯಲ್ಲಿ 500 ಪ್ಲಸ್ ರನ್ ಗಳಿಸಿದ ಭಾರತೀಯ ಆಟಗಾರರ ಪೈಕಿ ರೋಹಿತ್ ಶರ್ಮ ಐದನೇ ಆಟಗಾರರಾಗಿದ್ದಾರೆ. ವಿನೂ ಮಂಕಡ್, ಬುದಿ ಕುಂದರನ್, ಸುನಿಲ್ ಗವಾಸ್ಕಾರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಈ ಮುಂಚೆ ಈ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 200 ಪ್ಲಸ್ ರನ್ ಗಳಿಸಿದ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನು ಮಾಡಿದ್ದಾರೆ.

ರನ್ ಸರಾಸರಿ ದಾಖಲೆ

ರನ್ ಸರಾಸರಿ ದಾಖಲೆ

ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉತ್ತಮ ರನ್ ಸರಾಸರಿ ಹೊಂದಿರುವ ರೋಹಿತ್ ಶರ್ಮ ಅವರು ತವರು ನೆಲದಲ್ಲಿ ಆಡಿರುವ ಟೆಸ್ಟ್ ಪಂದ್ಯಗಳಲ್ಲಿ ಆಟಗಾರನೊಬ್ಬ ಗಳಿಸಿರುವ ಅತ್ಯಧಿಕ ರನ್ ಸರಾಸರಿ ದಾಖಲೆಯನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ತವರು ನೆಲದಲ್ಲಿ 98.22 ರನ್ ಸರಾಸರಿ ಹೊಂದಿದ್ದರು. ರೋಹಿತ್ ಶರ್ಮ ಸದ್ಯ 99.84ರನ್ ಸರಾಸರಿ ಗಳಿಸಿದ್ದಾರೆ. 2019ರಲ್ಲಿ ರೋಹಿತ್ 132.25 ರನ್ ಸರಾಸರಿ ಹೊಂದಿದ್ದರೆ, ಸ್ಟೀವ್ ಸ್ಮಿತ್ 110.57ರನ್ ಸರಾಸರಿ ಹೊಂದಿದ್ದಾರೆ.

ಹಲವು ದಾಖಲೆಗಳು ಧ್ವಂಸ

ಹಲವು ದಾಖಲೆಗಳು ಧ್ವಂಸ

* ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 500ಪ್ಲಸ್ ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದ ದಾಖಲೆ.
* ಪಂದ್ಯವೊಂದರಲ್ಲಿ ಹಾಗೂ ಸರಣಿಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆ

Story first published: Sunday, October 20, 2019, 13:58 [IST]
Other articles published on Oct 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X