ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್ ಗೇಲ್ ಬಿಟ್ಟುಕೊಟ್ಟಿದ್ದಕ್ಕೆ ಕಾರಣ ಬಿಚ್ಚಿಟ್ಟ ಜಮೈಕಾ ತಲೈವಾಸ್

Releasing Chris Gayle was based purely on cricketing reasoning says Tallawahs

ಪೋರ್ಟ್ ಆಫ್‌ ಸ್ಪೇನ್, ಏಪ್ರಿಲ್ 30: ತಂಡದಿಂದ ಕ್ರಿಸ್‌ ಗೇಲ್ ಅವರನ್ನು ತೆಗೆದುಹಾಕಿದ್ದಕ್ಕೆ ಮಾಜಿ ಬ್ಯಾಟ್ಸ್‌ಮನ್ ರಾಮ್‌ನರೇಶ್ ಸರವಣ್ ಯಾವ ರೀತಿಯಲ್ಲೂ ಕಾರಣವಲ್ಲ, ಗೇಲ್ ಅವರನ್ನು ನಾವು ಬಿಟ್ಟುಕೊಟ್ಟಿದ್ದು ಬ್ಯುಸಿನೆಸ್ ಮತ್ತು ಕ್ರಿಕೆಟ್‌ನ ಕಾರಣದಿಂದ ಎಂದು ಕೆರಿಬಿಯನ್ ಪ್ರೀಮಿಯರ್ ಲೀಗ್‌ (ಸಿಪಿಎಲ್) ಫ್ರಾಂಚೈಸಿ ಜಮೈಕಾ ತಲೈವಾಸ್ ಹೇಳಿದೆ.

'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!

ಇತ್ತೀಚೆಗೆ ಕ್ರಿಸ್‌ ಗೇಲ್, ತನ್ನ ಯೂಟ್ಯೂಬ್ ಚಾನೆಲ್‌ ಮೂಲಕ ವಿಂಡೀಸ್ ಮಾಜಿ ಆಟಗಾರ, ಈಗ ಜಮೈಕಾ ತಲೈವಾಸ್ ತಂಡದ ಸಹ ಕೋಚ್ ರಾಮ್‌ನರೇಶ್ ಸರವಣ್ ಅವರ ವಿರುದ್ಧ ಕಿಡಿಕಾರಿದ್ದರು. ನಾನು ಜಮೈಕಾ ತಲೈವಾಸ್ ತ್ಯಜಿಸಲು ರಾಮ್‌ನರೇಶ್ ಕಾರಣ. ಆತ ಕೆಟ್ಟ ವ್ಯಕ್ತಿ ಎಂದು ಗೇಲ್ ಹೇಳಿದ್ದರು.

ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್

'ತಲೈವಾಸ್ ತಂಡದಲ್ಲಿ ಉಳಿಸಿಕೊಳ್ಳದಿರುವುದಕ್ಕೆ ಗೇಲ್ ಅನೇಕ ರೀತಿಯಲ್ಲಿ ಕಾರಣರಾಗಿದ್ದರು. ಸತ್ಯವೆಂದರೆ, ಗೇಲ್ ಅವರನ್ನು ಬಿಟ್ಟುಕೊಟ್ಟಿದ್ದರಲ್ಲಿ ಸಂಪೂರ್ಣವಾಗಿ ತಂಡದ ಮಾಲಕರು ಮತ್ತು ನಿರ್ವಾಹಕರ ನಿರ್ಧಾರ ಮಾತ್ರ ಇತ್ತು. ಇಲ್ಲಿ ಸರವಣ್ ಯಾವುದೇ ರೀತಿಯಲ್ಲಿ ಪ್ರಭಾವ ಬೀರಿರಲಿಲ್ಲ. ಗೇಲ್ ತೆಗೆಯಲು ಕ್ರಿಕೆಟ್‌ ಮತ್ತು ವ್ಯವಹಾರವೇ ಪ್ರಮುಖ ಕಾರಣವಾಗಿತ್ತು,' ಎಂದು ತಲೈವಾಸ್ ಹೇಳಿಕೆಯ ಮೂಲಕ ತಿಳಿಸಿದೆ.

ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!

'ಮತ್ತೂ ಹೇಳಬೇಕೆಂದರೆ ಜಮೈಕಾ ತಲೈವಾಸ್‌ ತಂಡದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ಕೆರಿಬಿಯನ್ ದೇಶದ ಯಾವುದೇ ರಾಜಕೀಯ ವ್ಯಕ್ತಿಯೂ ಇಲ್ಲಿ ಪ್ರಭಾವ ಬೀರಲಾರರು. ತಲೈವಾಸ್ ನಿರ್ಧಾರಗಳು ಬರೀ ಮಾಲಕರು ಮತ್ತು ನಿರ್ವಾಹಕರನ್ನು ಅವಲಂಬಿಸಿದೆ,' ಎಂದು ತಲೈವಾಸ್ ಹೇಳಿದೆ.

Story first published: Thursday, April 30, 2020, 17:49 [IST]
Other articles published on Apr 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X