ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್‌ ಲಿನ್ ಸ್ಫೋಟಕ ಬ್ಯಾಟಿಂಗ್, ಕೆಕೆಆರ್‌ನತ್ತ ಸಿಕ್ಸರ್ ಬೀಸಿದ ಯುವರಾಜ್!

Yuvraj had termed KKR's decision to release Lynn a 'bad call | Oneinida Kannada
Releasing Chris Lynn Bad Call By KKR, Says Yuvraj Singh

ಅಬು ಧಾಬಿ, ನವೆಂಬರ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಚಾಂಪಿಯನ್ ತಂಡವಾದ ಕೋಲ್ಕತ್ತ ನೈಟ್ ರೈಡರ್ಸ್‌(ಕೆಕೆಆರ್‌) ತನ್ನ ತಂಡದಿಂದ ಹೊರಗಿಟ್ಟಿದ್ದಕ್ಕೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಸ್ಫೋಟಕ ಬ್ಯಾಟಿಂಗ್‌ ಮೂಲಕ ಸಂದೇಶವಿತ್ತಿದ್ದಾರೆ.

ಅಜಿಂಕ್ಯಾ ರಹಾನೆ ಕನಸಿನಲ್ಲಿ ಕಾಡುತ್ತಿರೋದು ಯಾರು?ಅಜಿಂಕ್ಯಾ ರಹಾನೆ ಕನಸಿನಲ್ಲಿ ಕಾಡುತ್ತಿರೋದು ಯಾರು?

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅಬು ಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್ ಟೂರ್ನಿಯ ಮರಾಟ ಅರೇಬಿಯನ್ಸ್ ಮತ್ತು ಟೀಮ್ ಅಬುಧಾಬಿ ನಡುವಣ ಪಂದ್ಯದಲ್ಲಿ ಮರಾಟ ಅರೇಬಿಯನ್ಸ್ ನಾಯಕ ಕ್ರಿಸ್‌ ಲಿನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋ

ಸೋಮವಾರ (ನವೆಂಬರ್ 18) ನಡೆದಿದ್ದ ಈ ಪಂದ್ಯದಲ್ಲಿ ಲಿನ್ ಕೇವಲ 30 ಎಸೆತಗಳಿಗೆ 91 ರನ್ ಸಿಡಿಸಿದ್ದರು.

ಅರೇಬಿಯನ್ಸ್‌ಗೆ ಗೆಲುವು

ಅರೇಬಿಯನ್ಸ್‌ಗೆ ಗೆಲುವು

ಲಿನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮರಾಟ ಅರೇಬಿಯನ್ಸ್ ತಂಡ ಪಂದ್ಯದಲ್ಲಿ 24 ರನ್ ಗೆಲುವನ್ನಾಚರಿಸಿತ್ತು. ಕ್ರಿಸ್ ಬ್ಯಾಟಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್, ಅರೇಬಿಯನ್ಸ್‌ ಸಹ ಆಟಗಾರ ಯುವರಾಜ್ ಸಿಂಗ್‌, ಲಿನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಕ್ಕೆ ಕೆಕೆಆರ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಕೆಆರ್‌ಗೆ ಸಂದೇಶ ರವಾನೆ

ಕೆಕೆಆರ್‌ಗೆ ಸಂದೇಶ ರವಾನೆ

'ಐಪಿಎಲ್‌ನಲ್ಲಿ ನಾನು ಕ್ರಿಸ್‌ ಲಿನ್ ಅವರನ್ನು ನೋಡಿದ್ದೇನೆ. ಕೆಕೆಆರ್‌ಗೆ ಉತ್ತಮ ಆರಂಭಿ ನೀಡಿದ್ದವನು ಆತ. ಆತನನ್ನು ಕೆಕೆಆರ್ ಯಾಕೆ ಉಳಿಸಿಕೊಳ್ಳಲಿಲ್ಲ ಎಂಬುದು ನನಗೆ ಅರ್ಥವಾಗಲಿಲ್ಲ. ನನಗನ್ನಿಸುವಂತೆ ಕೆಕೆಆರ್‌ಗೆ ಇದು ಕೆಟ್ಟ ಕರೆಯಾಗಿದೆ. ಈ ಮೂಲಕ ಲಿನ್ ಕೆಕೆಆರ್‌ಗೆ ಒಂದು ಸಂದೇಶ ರವಾನಿಸಿದ್ದಾರೆ,' ಎಂದು ಯುವಿ ಹೇಳಿದ್ದಾರೆ.

ಕೆಕೆಆರ್‌ನಲ್ಲಿ ಉಳಿದವರು

ಕೆಕೆಆರ್‌ನಲ್ಲಿ ಉಳಿದವರು

ಐಪಿಎಲ್ ಹರಾಜಿಗೂ ಮುನ್ನ ಕೆಕೆಆರ್ ತಂಡ, ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ಕುಲದೀಪ್ ಯಾದವ್, ಶುಬ್‌ಮಾನ್ ಗಿಲ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಸಂದೀಪ್ ವಾರಿಯರ್, ಹ್ಯಾರಿ ಗರ್ನಿ, ಕಮಲೇಶ್ ನಾಗರ್ಕೋಟಿ, ಶಿವಂ ಮಾವಿ, ಸಿದ್ಧೇಶ್ ಲಾಡ್ (ಟಿ) ಇವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು.

ಕೋಲ್ಕತ್ತಾ ತಂಡ ಹೊರಗಿಟ್ಟವರು

ಕೋಲ್ಕತ್ತಾ ತಂಡ ಹೊರಗಿಟ್ಟವರು

ಇನ್ನು ರಾಬಿನ್ ಉತ್ತಪ್ಪ, ಕ್ರಿಸ್ ಲಿನ್, ಪಿಯೂಷ್ ಚಾವ್ಲಾ, ಜೋ ಡೆನ್ಲಿ, ಯರ್ರಾ ಪೃಥ್ವಿರಾಜ್, ನಿಖಿಲ್ ನಾಯಕ್, ಕೆ.ಸಿ.ಕರಿಯಪ್ಪ, ಮ್ಯಾಥ್ಯೂ ಕೆಲ್ಲಿ, ಅನ್ರಿಚ್ ನಾರ್ತ್ಜೆ, ಶ್ರೀಕಾಂತ್ ಮುಂಧೆ, ಕಾರ್ಲೋಸ್ ಬ್ರಾಥ್‌ವೈಟ್ ಇವರನ್ನು ಕೆಕೆಆರ್ ತಂಡದಿಂದ ಬಿಟ್ಟುಕೊಡಲಾಗಿತ್ತು. ಅಂದ್ಹಾಗೆ ಐಪಿಎಲ್ ಆಟಗಾರ ಹರಾಜು ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.

Story first published: Tuesday, November 19, 2019, 19:54 [IST]
Other articles published on Nov 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X