ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ-ಶಾಸ್ತ್ರಿ ಜೋಡಿ ಬೇರ್ಪಟ್ಟರೆ ಟೀಮ್‌ ಇಂಡಿಯಾಗೆ ಅಪಾಯವಂತೆ!

ರವಿಶಾಸ್ತ್ರಿ ಬದಲಾವಣೆ ಮಾಡಿದ್ರೆ ಟೀಂ ಇಂಡಿಯಾಗೆ ಉಳಿಗಾಲವಿಲ್ಲ..? | Oneindia Kannada
Kohli and Shastri

ಬೆಂಗಳೂರು, ಜುಲೈ 26: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂತ್ಯಗೊಂದಿಗೆ ಭಾರತ ತಂಡದ ಮುಖ್ಯ ಕೋಚ್‌ ಮತ್ತು ಸಹಾಯಕ ಸಿಬ್ಬಂದಿ ಜೊತೆಗಿನ ಬಿಸಿಸಿಐ ಒಪ್ಪಂದ ಅಂತ್ಯಗೊಂಡಿದ್ದು, ಈಗಾಗಲೇ ಬಿಸಿಸಿಐ ತನನ್ ಮುಖ್ಯ ಕೋಚ್‌ ಮತ್ತು ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಯೂ ಆಗಿದೆ.

ಭಾರತ ತಂಡ ಇದೀಗ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಕೋಚ್‌ ರವಿ ಶಾಸ್ತ್ರಿ ಮತ್ತು ತರಬೇತಿ ಬಳಗದ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 45 ದಿನಗಳಿಗೆ ವಿಸ್ತರಿಸಿದೆ. ಹೀಗಾಗಿ ಈ ಸರಣಿ ಬಳಿಕ ಟೀಮ್‌ ಇಂಡಿಯಾದ ನೂತನ ಕೋಚ್‌ ನೇಮಕದ ಕಾರ್ಯ ಚುರುಕಾಗಲಿದೆ.

ಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜ

ಆದರೆ, ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೋಚ್‌ ರವಿ ಶಾಸ್ತ್ರಿ ನಡುವೆ ಉತ್ತಮ ಬಾಂಧವ್ಯವಿದ್ದು, ಕಳೆದ 3-4 ವರ್ಷಗಳಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನವನ್ನೇ ನೀಡಿದೆ. ವಿಶ್ವಕಪ್‌ ಸೆಮಿಫೈನಲ್ಸ್‌ ಸೋಲಿನ ಹೊರತಾಗಿ ಟೀಮ್‌ ಇಂಡಿಯಾ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ದೈತ್ಯ ತಂಡವಾಗಿ ಬೆಳೆದುನಿಂತಿದೆ. ಹೀಗಿರುವಾ ಕೊಹ್ಲಿ ಮತ್ತು ಶಾಸ್ತ್ರಿ ನಡುವಣ ಜೊತೆಯಾಟವನ್ನು ಮುರಿದರೆ ಅದು ಭಾರತ ತಂಡದ ಮೇಲೆ ಅಪಾಯಕಾರಿ ಪ್ರಭಾವ ಬೀರುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜ

ಸದ್ಯ ರವಿ ಶಾಸ್ತ್ರಿ ಭಾರತ ತಂಡದ ಪ್ರಧಾನ ಕೋಚ್‌ ಆಗಿದ್ದು, ಸಂಜಯ್‌ ಬಾಂಗರ್‌ ಸಹಾಯಕ ಕೋಚ್‌, ಆರ್‌ ಶ್ರೀಧರ್‌ ಫೀಲ್ಡಿಂಗ್‌ ಕೋಚ್‌ ಹಾಗೂ ಭರತ್‌ ಅರುಣ್‌ ಬೌಲಿಂಗ್‌ ಕೋಚ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ನೂತನ ಕೋಚ್‌ ಆಯ್ಕೆ ವಿಚಾರದಲ್ಲಿ ಸಲಹೆ ನೀಡುವಂತೆ ಬಿಸಿಸಿಐನ ಆಡಳಿತ ಸಮಿತಿಯು (ಸಿಒಎ) ಮಾಜಿ ನಾಯಕ ಕಪಿಲ್‌ ದೇವ್‌ ಅವರ ಸಾರಥ್ಯದ ಕ್ರಿಕೆಟ್‌ ಸಲಹಾ ಸಮಿತಿಗೆ ಜವಾಬ್ದಾರಿ ವಹಿಸಿದೆ.

"ಈ ಹಂತದಲ್ಲಿ ಬದಲಾವಣೆ ತಂದರೆ ಅದು ದೀರ್ಘ ಕಾಲದ ಪರಿಣಾಮ ಬೀರಬಲ್ಲದು. ಕೊಹ್ಲಿ ಮತ್ತು ಶಾಸ್ತ್ರಿ ನಡುವೆ ಉತ್ತಮ ಬಾಂಧವ್ಯವಿದೆ. ಯಶಸ್ಸು ತಂದುಕೊಟ್ಟಿರುವ ತಂಡವನ್ನು ಬೇರ್ಪಡಿಸುವುದು ಸರಿಯಲ್ಲ," ಎಂದು ಬಿಸಿಸಿಐನ ಅಧಿಕಾರಿಗಳು ಹೇಳಿರುವುದಾಗಿ ಟೈಮ್ಸ್‌ ನಾವ್‌ ವರದಿ ಮಾಡಿದೆ.

ಪಾಕಿಸ್ತಾನ ಕ್ರಿಕೆಟಿಗನ ರಾಸಲೀಲೆಗಳು ಟ್ವಿಟರ್‌ನಲ್ಲಿ ಹರಾಜು!ಪಾಕಿಸ್ತಾನ ಕ್ರಿಕೆಟಿಗನ ರಾಸಲೀಲೆಗಳು ಟ್ವಿಟರ್‌ನಲ್ಲಿ ಹರಾಜು!

"ಕೋಚ್‌ ಬದಲಾವಣೆಯಿಂದಾಗಿ ಸದ್ಯ ಈಗಿರುವ ಎಲ್ಲಾ ತಂತ್ರಗಾರಿಕೆಯ ಬದಲಾವಣೆಯಾಗುತ್ತದೆ. ಆಟಗಾರರು ಹೊಸದಾಗಿ ಎಲ್ಲದಕ್ಕೂ ಹೊಂದಿಕೊಳ್ಳಲು ಪ್ರಯತ್ನಿಸುವಂತಾಗುತ್ತದೆ. ಮುಂದಿನ 5 ವರ್ಷಗಳಿಗೆ ಹಾಕಲಾಗಿರುವ ಎಲ್ಲಾ ಯೋಜನೆಗಳಿಗೆ ಇದರಿಂದ ತೊಂದರೆಯಾಗುತ್ತದೆ. ಹೀಗಾಗಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡರೆ ಅದು ನ್ಯಾಯಯುತವಾದುದ್ದಲ್ಲ," ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಹಲವು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅಂದಹಾಗೆ ಶಾಸ್ತ್ರಿ ಮತ್ತು ಬಳಗವೂ ಕೂಡ ಮರಳಿ ಕೋಚ್‌ ಹುದ್ದೆಗೆ ನೇರವಾಗಿ ಸ್ಪರ್ಧಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಮಹೇಲಾ ಜಯವರ್ಧನೆ, ಟಾಮ್‌ ಮೂಡಿ, ಗ್ಯಾರಿ ಕರ್ಸ್ಟನ್‌ ಸೇರಿದಂತೆ ಮೊದಲಾದ ದಿಗ್ಗಜರು ಭಾರತ ತಂಡದ ಮುಖ್ಯ ಕೋಚ್‌ ಹುದ್ದೆ ಹಿಡಿಯಲು ಅರ್ಜಿ ಸಲ್ಲಿಸಿದ್ದಾರೆ.

Story first published: Friday, July 26, 2019, 15:32 [IST]
Other articles published on Jul 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X