ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023 auction : ಡಿಸೆಂಬರ್‌ನಲ್ಲಿ ನಡೆಯಲಿದೆ ಐಪಿಎಲ್ ಮಿನಿ ಹರಾಜು: ಸಂಭಾವ್ಯ ದಿನಾಂಕ ಬಹಿರಂಗ

Report says BCCI set to conduct this years IPL auction in December

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೂ ಮುನ್ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಡಿಸೆಂಬರ್‌ನಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ. ಈಬಾರಿ ಮಿನಿ ಹರಾಜು ಯಾವ ತಾಣದಲ್ಲಿ ನಡೆಯಲಿದೆ ಎಂಬ ವಿಚಾರವಾಗಿ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಡಿಸೆಂಬರ್ 16ರಂದು ಈ ಮಿನಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

ಕ್ರಿಕ್‌ಬಜ್ ವರದಿ ಮಾಡಿರುವ ಪ್ರಕಾರ ಮುಂಬರುವ ಹರಾಜಿನ ವೇಳಾಪಟ್ಟಿಯನ್ನು ಈಗಾಗಲೇ ಭಾಗವಹಿಸುವ ಫ್ರಾಂಚೈಸಿಗಳು ಮತ್ತು ಅಧಿಕಾರಿಗಳ ಜೊತೆಗೆ ಚರ್ಚಿಸಲಾಗಿದೆ. ಈ ಬಾರಿಯ ಹರಾಜಿನ ಸಂದರ್ಭದಲ್ಲಿ ಪ್ರತಿ ತಂಡವು ತಮ್ಮ ಪರ್ಸ್‌ನಲ್ಲಿ ಹೆಚ್ಚುವರಿ ₹ 5 ಕೋಟಿಯನ್ನು ಹೊಂದಿರಲಿದ್ದು ಒಟ್ಟಾರೆ ಮೊತ್ತ ಪ್ರತಿ ಫ್ರಾಂಚೈಸಿಗೆ ₹ 95 ಕೋಟಿಗೆ ಏರಿಕೆಯಾಗಲಿದೆ ಎನ್ನಲಾಗಿದೆ.

T20 ಕ್ರಿಕೆಟ್‌ನ ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟ: 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದವರು!T20 ಕ್ರಿಕೆಟ್‌ನ ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟ: 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದವರು!

ಕೆಲವೇ ದಿನಗಳಲ್ಲಿ ದೊರೆಯಲಿದೆ ಸ್ಪಷ್ಟ ಉತ್ತರ

ಕೆಲವೇ ದಿನಗಳಲ್ಲಿ ದೊರೆಯಲಿದೆ ಸ್ಪಷ್ಟ ಉತ್ತರ

ಇನ್ನು ಎಲ್ಲಾ ತಂಡಗಳು ಈ ಹರಾಜಿನಲ್ಲಿ ಅಂತಿಮವಾಗಿ ತಮ್ಮ ಪರ್ಸ್‌ನಲ್ಲಿ ಎಷ್ಟು ಮೊತ್ತವನ್ನು ಹೊಂದಿರಲಿದೆ ಎಂಬುದು ಹರಾಜಿಗೂ ಮುನ್ನ ವ್ಯಾಪಾರ ಮಾಡುವ ಅಥವಾ ಬಿಡುಗಡೆ ಮಾಡುವ ಆಟಗಾರರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಹರಾಜಿನ ಒಂದು ವಾರದ ಮೊದಲು ವರ್ಗಾವಣೆ ವಿಂಡೋ ತೆರೆದಿರುತ್ತದೆ ಮತ್ತು ಹರಾಜಿನ ನಂತರವೂ ಅವಕಾಶ ದೊರೆಯುವ ಸಾಧ್ಯತಯಿದೆ.

ಹೋಮ್ ಹಾಗೂ ಅವೇ ಮಾದರಿಯಲ್ಲಿ ಟೂರ್ನಿ

ಹೋಮ್ ಹಾಗೂ ಅವೇ ಮಾದರಿಯಲ್ಲಿ ಟೂರ್ನಿ

ಇನ್ನು ಕಳೆದ ವರ್ಷದ ಐಪಿಎಲ್ ಟೂರ್ನಿಯನ್ನು ಕೇವಲ ನಾಲ್ಕು ತಾಣಗಳಲ್ಲಿ ಮಾತ್ರವೇ ಆಯೋಜನೆ ಮಾಡಲಾಗಿತ್ತು. ಕೊರೊನಾವೈರೆಸ್‌ನ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರವನ್ನು ಮಾಡಲಾಗಿತ್ತು. ಆದರೆ ಮುಂಬರುವ ಐಪಿಎಲ್ ಆವೃತ್ತಿ ಈ ಹಿಂದಿನಂತೆ ಹೋಮ್ ಹಾಗೂ ಅವೇ ಮಾದರಿಯಲ್ಲಿ ನಡೆಯುಲಿದೆ. ಈ ವಿಚಾರವನ್ನು ಬಿಸಿಸಿಐ ಖಚಿತಪಡಿಸಿದ್ದು ತವರು ಹಾಗೂ ಹೊರಗಿನ ತಾಣಗಳಲ್ಲಿ ಪಂದ್ಯಗಳನ್ನು ಪ್ರತಿ ತಂಡಗಳು ಕೂಡ ಆಡುವ ಅವಕಾಶ ದೊರೆಯಲಿದೆ.

ಮುಂದಿನ ವರ್ಷದಿಂದ ಮಹಿಳಾ ಐಪಿಎಲ್

ಮುಂದಿನ ವರ್ಷದಿಂದ ಮಹಿಳಾ ಐಪಿಎಲ್

ಇನ್ನು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿರುವ ಬೇಡಿಕೆಯಾದ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್‌ಗೆ ಕೊನೆಗೂ ಚಾಲನೆ ದೊರೆಯುವ ಕಾಲ ಸನ್ನಿಹಿತವಾಗಿದೆ. ಮುಂದಿನ ವರ್ಷದಿಂದ ಮಹಿಳಾ ಐಪಿಎಲ್ ಟೂರ್ನಿ ನಡೆಯಲಿದ್ದು ಚೊಚ್ಚಲ ಆವೃತ್ತಿ ಮುಂದಿನ ವರ್ಷದ ಮಾರ್ಚ್ ವೇಳೆಗೆ ನಡೆಯುವ ಸಾಧ್ಯತೆಯಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಮಾತನಾಡಿದ್ದು ಮಹಿಳಾ ಐಪಿಎಲ್‌ಗೆ ಪೂರ್ವ ಸಿದ್ಧತೆಗಳು ಈಗಾಗಲೇ ನಡೆಯುತ್ತಿದೆ ಎಂದಿದ್ದಾರೆ.

Story first published: Saturday, September 24, 2022, 9:50 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X