ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ಗೆ ಮುನ್ನ ಮತ್ತೆ 2 ಸರಣಿಗೆ ಬಿಸಿಸಿಐ ಯೋಜನೆ: ಆಸಿಸ್, ದ. ಆಪ್ರಿಕಾ ವಿರುದ್ಧ ಸರಣಿ ಸಾಧ್ಯತೆ!

Reports says ahead of t20 world cup India set to play T20I series against Australia and S. Africa

ಭಾರತ ಕ್ರಿಕೆಟ್ ತಂಡ ಈಗಾಗಲೇ ಒಂದಾದ ಬಳಿಕ ಒಂದರಂತೆ ಸರಣಿಗಳಲ್ಲಿ ತೊಡಗಿಸಿಕೊಂಡಿದ್ದು ಮುಂದಿನ ಕೆಲ ತಿಂಗಳ ಕಾಲ ಭಾರತ ಕ್ರಿಕೆಟ್ ತಂಡದ ವೇಳಾಪಟ್ಟಿ ಒತ್ತಡದಿಂದ ಕೂಡಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೆ ಎರಡು ಸರಣಿಯನ್ನು ಆಡಿಸಲು ಯೋಜನೆ ಸಿದ್ಧಪಡಿಸಿದೆ. ಏಷ್ಯಾ ಕಪ್ ಟೂರ್ನಿ ಹಾಗೂ ಟಿ20 ವಿಶ್ವಕಪ್‌ಗೆ ಮುನ್ನ ಈ ಎರಡು ತಂಡಗಳ ವಿರುದ್ಧ ವೈಟ್‌ಬಾಲ್ ಸರಣಿಯಲ್ಲಿ ಭಾರತ ಮುಖಾಮುಖಿಯಾಗಲಿದೆ.

ಎಲ್ಲಾ ತಂಡಗಳು ಕೂಡ ಮುಂಬರುವ ಟಿ20 ವಿಶ್ವಕಪ್‌ಗೆ ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಭಾರತ ತಂಡದ ಸಿದ್ಧತೆ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಅದರಲ್ಲೂ ಈ ಸರಣಿಯಲ್ಲಿ ಕಣಕ್ಕಿಳಿಸಬಹುದಾದ ಆಟಗಾರರನ್ನು ಅಂತಿಮಗೊಳಿಸುವ ಪ್ರಯತ್ನವನ್ನು ಆಯ್ಕೆ ಸಮಿತಿ ನಡೆಸುತ್ತಿದೆ. ಇದೀಗ ಆಟಗಾರರಿಗೆ ಮಹತ್ವದ ಟೂರ್ನಿಯಲ್ಲಿ ಹೆಚ್ಚಿನ ಅಭ್ಯಾಸ ದೊರೆಯುವ ನಿಟ್ಟಿನಲ್ಲಿ ಎರಡು ಸರಣಿಗಳ ಆಯೋಜನೆಗೆ ಬಿಸಿಸಿಐ ಸಜ್ಜಾಗಿದೆ.

ಮೊದಲ ಎಸೆತದಲ್ಲೇ 88.39 ಮೀ. ಎಸೆದ ನೀರಜ್ ಚೋಪ್ರ: WAC ಫೈನಲ್‌ಗೆ ನೇರ ಪ್ರವೇಶಮೊದಲ ಎಸೆತದಲ್ಲೇ 88.39 ಮೀ. ಎಸೆದ ನೀರಜ್ ಚೋಪ್ರ: WAC ಫೈನಲ್‌ಗೆ ನೇರ ಪ್ರವೇಶ

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ

ಏಷ್ಯಾ ಕಪ್ ಮುಕ್ತಾಯದ ಬಳಿಕ ಭಾರತ ಕ್ರಿಕೆಟ್ ತಂಡ ತವರಿನಲ್ಲಿಯೇ ಈ ಎರಡು ಸರಣಿಗಳನ್ನು ಆಡಲಿದೆ. ಮೊದಲಿಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ಚುಟುಕು ಂಆದರಿಯ ಸರಣಿಯಲ್ಲಿ ಭಾರತ ಆಡಿದರೆ ಬಳಿಕ ದಕ್ಷಿಣ ಆಪ್ರಿಕಾ ವಿರುದ್ಧವೂ ಭಾರತದಲ್ಲಿಯೇ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಸಂದರ್ಭದಲ್ಲಿ ಟಿ20 ಮಾತ್ರವಲ್ಲದೆ ಏಕದಿನ ಸರಣಿಯಲ್ಲಿಯೂ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಣೆಸಾಡಲಿದೆ

ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಸರಣಿ

ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಸರಣಿ

ಈ ಸರಣಿಯ ಬಗ್ಗೆ ಬಿಸಿಸಿಐ ಇನ್ನು ಕೂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಬಿಸಿಸಿಐ ಮೂಲಗಳಿಂದ ಈ ಸರಣಿಯ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೆಪ್ಟೆಂಬರ್ 20ರಿಂದ ನಡೆಯಲಿದ್ದು 2ರಂದು ಅಂತಿಮ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 20ರಂದು ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದ್ದು ನಾಗ್ಪುರದಲ್ಲಿ ಎರಡನೇ ಪಂದ್ಯ ಸೆಪ್ಟಂಬರ್ 23ರಂದು ನಡೆಯಲಿದೆ. ಸೆಪ್ಟೆಂಬರ್ 25ರಂದು ಹೈದರಾಬಾದ್‌ನಲ್ಲಿ ಈ ಸರಣಿಯ ಅಂತಿಮ ಪಂದ್ಯ ಆಯೋಜನೆಯಾಗಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ

ಇನ್ನು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಟಿ20 ಸರಣಿಯ ಜೊತೆಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಮುಖಾಮುಖಿಯಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರೇ ದಿನದ ಅಂತರದಲ್ಲಿ ಟಿ20 ಸರಣಿಯ ಮೂಲಕ ಆರಂಭವಾಗಲಿದೆ. ಸೆಪ್ಟೆಂಬರ್ 28ರಂದು ತಿರುವಂನಂತಪುರಂನಲ್ಲಿ ಮೊದಲ ಪಂದ್ಯ ನಡೆದರೆ ಅಕ್ಟೋಬರ್ 1ರಂದು ಗುವಾಹಟಿಯಲ್ಲಿ ಎರಡನೇ ಪಂದ್ಯ ನಡೆಯಲಿದೆ. ಮೂರನೇ ಪಂದ್ಯ ಗುವಾಹಟಿಯಲ್ಲಿ ಅಕ್ಟೋಬರ್ 3ರಂದು ಆಯೋಜನೆಯಾಗಲಿದೆ.

ಏಕದಿನ ಸರಣಿ

ಏಕದಿನ ಸರಣಿ

ಇನ್ನು ಟಿ20 ಸರಣಿಯ ಮುಕ್ತಾಯದ ಬಳಿಕ ದಕ್ಷಿಣ ಆಪ್ರಿಕಾ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ಆಯೋಜನೆಯಾಗಲಿದೆ. ಅಕ್ಟೋಬರ್ 6ರಂದು ಮೊದಲ ಏಕದಿನ ಪಂದ್ಯ ರಾಂಚಿಯಲ್ಲಿ ಆಯೋಜನೆಯಾಗಲಿದೆ. ಅದಾದ ಬಳಿಕ ಅಕ್ಟೋಬರ್ 9ರಂದು ಎರಡನೇ ಪಂದ್ಯ ಲಕ್ನೋದಲ್ಲಿ ನಡೆದರೆ ಅಕ್ಟೋಬರ್ 11ರಂದು ಮೂರನೇ ಪಂದ್ಯ ದೆಹಲಿಯಲ್ಲಿ ಆಯೋಜನೆಯಾಗುವ ಸಾಧ್ಯತೆಯಿದೆ. ಇನ್ನು ಈ ಏಕದಿನ ಸರಣಿಯಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾಗುಯಾಗಲಿರುವ ಆಟಗಾರರನ್ನು ಹೊರತುಪಡಿಸಿದ ತಂಡ ದಕ್ಷಿಣ ಆಪ್ರಿಕಾ ತಂಡವನ್ನು ಎದುರಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ವಿಶ್ವಕಪ್‌ನಲ್ಲಿ ಭಾಗುಯಾಗಲು ಟಿ20 ಬಳಗ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ ಎನ್ನಲಾಗಿದೆ.

Story first published: Friday, July 22, 2022, 16:21 [IST]
Other articles published on Jul 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X