ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಟ್ಟಿಂಗ್ ಕಂಪನಿ ಪರವಾಗಿ ಪ್ರಚಾರ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡ ಸ್ಟಾರ್ ಕ್ರಿಕೆಟಿಗ!

Reports says Bangladesh all rounder Shakib Al Hasan under investigation for promoting betting company

ಬಾಂಗ್ಲಾದೇಶದ ಅನುಭವಿ ಕ್ರಿಕೆಟಿಗ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಟ್ಟಿಂಗ್ ಕಂಪನಿ ಬೆಟ್‌ವಿನ್ನರ್ ನ್ಯೂಸ್ ಪರವಾಗಿ ಪ್ರಚಾರ ನಡೆಸಿದ ಕಾರಣಕ್ಕೆ ಶಕೀಬ್ ಅಲ್ ಹಸನ್ ಸಂಕಷ್ಟಕ್ಕೆ ಸಿಲುಕಿದ್ದು ತನಿಖೆ ನಡೆಸುವ ಸಾಧ್ಯತೆಯಿದೆ. ಬಾಂಗ್ಲಾದೆಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಈ ಬಗ್ಗೆ ಪ್ರತಿಕ್ಕ್ರಿಯಿಸಿದ್ದು ಈ ವಿಚಾರವಾಗಿ ಕ್ರಿಕೆಟಿಗ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ ಎಂದಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಈಗಾಗಲೇ ಸಾಕಷ್ಟು ಸಂಬಂದ ಹಳಸಿರುವ ಶಕೀಬ್ ಅಲ್ ಹಸನ್ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ಬಗ್ಗೆ ಈಗ ಶೋಕಾಸ್ ನೋಟೀಸ್ ನೀಡಲಾಗಿದೆ. ಬಾಂಗ್ಲಾದೇಶದಲ್ಲಿ ಬೆಟ್ಟಿಂಗ್ ವಿರುದ್ಧ ಕಠಿಣ ಕಾನೂನು ಹಾಗೂ ನಿಶೇಧವಿದ್ದರೂ ಬೆಟ್‌ವಿನ್ನರ್ ನ್ಯೂಸ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಶಕೀಬ್ ಅಲ್ ಹಸ್ನ್ ಸಾಮಾಜಿಕ ಜಾಲತಾಣಗಲ್ಲಿ ಘೋಷಿಸಿಕೊಂಡಿದ್ದರು.

ಸಂಕಷ್ಟಕ್ಕೆ ಸಿಲುಕಿಕೊಂಡ ಸ್ಟಾರ್ ಕ್ರಿಕೆಟಿಗ!
ಕಠಿಣ ಕ್ರಮದ ಭರವಸೆ
ಈ ವಿಚಾರವಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಪ್ರತಿಕ್ರಿಯಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಶಕೀಬ್ ಅಲ್ ಹಸನ್ ನಮ್ಮೊಂದಿಗೆ ಚರ್ಚೆಯನ್ನು ನಡೆಸಿಲ್ಲ. ಆತನ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಮಾತನಾಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿಕೊಂಡ ಸ್ಟಾರ್ ಕ್ರಿಕೆಟಿಗ!
ವಿಚಾರಣೆ ನಡೆಸಬೇಕಿದೆ
"ಇಲ್ಲಿ ಎರಡು ಅಂಶಗಳಿದೆ. ಅವರು ನಮ್ಮಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯಲು ಸಾಧ್ಯವಿಲ್ಲ ಯಾಕೆಂದರೆ ಇಂಥಾ ವಿಚಾರಗಳಿಗೆ ನಾವು ಅನುಮತಿಯನ್ನು ನೀಡುವುದಿಲ್ಲ. ಬೆಟ್ಟಿಂಗ್‌ಗೆ ಸಂಬಂಧಿಸಿಒದ ಯಾವುದೇ ಅಂಶವಾಗಿದ್ದರೂ ಅದಕ್ಕೆ ನಾವು ಅನುಮತಿ ನೀಡಲಾರೆವು. ಹೀಗಾಗಿ ಅವರು ನಮ್ಮಿಂದ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ. ಮತ್ತೊಂದು ಅಂಶವೆಂದರೆ ಅವರು ನಿಜವಾಗಿಯೂ ಈ ಒಪ್ಪಂದಕ್ಕೆ ಸಹಿ ಮಾಡಿದ್ದಾರೋ ಇಲ್ಲವೋ ಎಂಬುದನ್ನು ನೋಡಬೇಕಿದೆ" ಎಂದು ನಜ್ಮುಲ್ ಹಸನ್ ಹೇಳಿಕೆ ನೀಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿಕೊಂಡ ಸ್ಟಾರ್ ಕ್ರಿಕೆಟಿಗ!
ಬಾಂಗ್ಲಾದೇಶದ ಯಶಸ್ವಿ ಆಟಗಾರ ಶಕೀಬ್
ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಪರವಾಗಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಆಟಗಾರ ಎನಿಸಿದ್ದಾರೆ. ಬಾಂಗ್ಲಾದೇಶದ ಪರವಾಗಿ ಒಟ್ಟು 373 ಪಂದ್ಯಗಳಲ್ಲಿ ಆಡಿರುವ ಶಕೀಬ್ ಅಲ್ ಹಸನ್ 13,000ಕ್ಕೂ ಅಧಿಕ ಅಂತಾರಾಷ್ಟ್ರೀಯ ರನ್ ಬಾರಿಸಿದ್ದಾರೆ. ಎಲ್ಲಾ ಮಾದರಿಯಲ್ಲಿಯೂ ಒಟ್ಟು 631 ರನ್‌ ಬಾರಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿಕೊಂಡ ಸ್ಟಾರ್ ಕ್ರಿಕೆಟಿಗ!
ಒಂದು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದ ಶಕೀಬ್
ಈ ಹಿಂದೆ ಬುಕ್ಕಿಗಳು ಸಂಪರ್ಕಕ್ಕೆ ಬಂದಿದ್ದ ಸಂದರ್ಭದಲ್ಲಿ ಅದನ್ನು ವರದಿ ಮಾಡಲು ವಿಫಲವಾದ ನಂತರ ಮತ್ತು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ತಪ್ಪಿತಸ್ಥರೆಂದು ಕಂಡುಬಂದಿದ್ದರು ಶಕೀಬ್ ಅಲ್ ಹಸನ್. ಹೀಗಾಗಿ 2019ರಲ್ಲಿ ಶಕೀಬ್ ದು ವರ್ಷ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿದ್ದರು. ಇದೀಗ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಸನಿಹದಲ್ಲಿದ್ದು 35ರ ಹರೆಯದ ಆಟಗಾರ ಬಾಂಗ್ಲಾದೇಶ ಪರವಾಗಿ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ. ಇಂಥಾ ಸಂದರ್ಭದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶಕೀಬ್ ಅಲ್ ಹಸನ್ ವಿರುದ್ಧ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Friday, August 5, 2022, 17:32 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X