ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕತ್ವ ತ್ಯಜಿಸಿದ್ದ ಬಗ್ಗೆ ಆಸಿಸ್ ಮಾಜಿ ನಾಯಕ ಪಾಂಟಿಂಗ್ ಮಾತು

Ricky Ponting Opens Up About Stepping Down As Australia Captain In 2011

ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದ ಅತ್ಯಂತ ಯಶಸ್ವೀ ನಾಯಕ. ವಿಶ್ವ ಕ್ರಿಕೆಟ್‌ ಕಂಡ ಉತ್ತಮ ನಾಯಕರಲ್ಲಿ ಪಾಂಟಿಂಗ್ ಕೂಡ ಒಬ್ಬರು. ಆಸ್ಟ್ರೇಲಿಯಾಗೆ ಸತತ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ರಿಕಿ ಪಾಂಟಿಂಗ್ ಮೂರನೇ ವಿಶ್ವಕಪ್‌ನಲ್ಲಿ 2011ರಲ್ಲಿ ಪುನರಾವರ್ತಿಸಲು ಸಾಧ್ಯವಾಗದೆ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು.

ಈ ಬಗ್ಗೆ 9 ವರ್ಷಗಳ ಬಳಿಕ ರಿಕಿ ಪಾಂಟಿಂಗ್ ತುಟಿ ಬಿಚ್ಚಿದ್ದಾರೆ. ನಾಯಕತ್ವ ತ್ಯಜಿಸುವ ಸಂದರ್ಭದ ತಮ್ಮ ಮನಸ್ಥಿತಿಯನ್ನು ಪಾಂಟಿಂಗ್ ಹೇಳಿಕೊಂಡಿದ್ದಾರೆ. ಆ ನಿರ್ಧಾರ ತುಂಬಾ ಕಠಿಣವಾಗಿತ್ತು. ತನಗೆ ಅದು ನೋವನ್ನೂ ನೀಡಿತ್ತು ಎಂದು ಪಾಂಟಿಂಗ್ ಹೇಳಿದ್ದಾರೆ.

'ಕಣ್ಣು ಕಣ್ಣು ಕಲೆತಾಗ...': ಸಚಿನ್-ಅಂಜಲಿ ರೋಮ್ಯಾಂಟಿಕ್ ಲವ್ ಸ್ಟೋರಿ!'ಕಣ್ಣು ಕಣ್ಣು ಕಲೆತಾಗ...': ಸಚಿನ್-ಅಂಜಲಿ ರೋಮ್ಯಾಂಟಿಕ್ ಲವ್ ಸ್ಟೋರಿ!

ಆಸ್ಟ್ರೇಲಿಯಾ 2011ರ ವಿಶ್ವಕಪ್‌ನಲ್ಲೂ ಕಪ್ ಗೆಲ್ಲುವ ಫೆವರೀಟ್ ತಂಡವಾಗಿಯೇ ಕೂಟಕ್ಕೆ ಆಗಮಿಸಿತ್ತು. ಆದರೆ ಈ ವಿಶ್ವಕಪ್‌ನಲ್ಲಿ ಆಸಿಸ್ ತಂಡ ಸೆಮಿಫೈನಲ್ ತಲುಪಲೂ ಆಸಿಸ್‌ಗೆ ಸಾಧ್ಯವಾಗಲಿಲ್ಲ. ಕ್ವಾರ್ಟರ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ಈ ಸಂದರ್ಭದಲ್ಲಿ ಯಾರೂ ಕೂಡ ನಾಯಕತ್ವವನ್ನು ತ್ಯಜಿಸುವಂತೆ ನನ್ನನ್ನು ಕೇಳಿಕೊಂಡಿರಲಿಲ್ಲ. ತಾನೇ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ಪಾಂಟಿಂಗ್ ಹೇಳಿದ್ದಾರೆ. ನನಗೆ ಆ ಸಂದರ್ಭದಲ್ಲಿ ಈ ನಿರ್ಧಾರ ಕಠಿಣವಾಗಿದ್ದರೂ ಆಸ್ಟ್ರೇಲಿಯಾದ ಕ್ರಿಕೆಟ್ ದೃಷ್ಟಿಯಿಂದ ಅದು ಉತ್ತಮ ನಿರ್ಧಾರ ಎನಿಸಿತ್ತು. ಮೈಕಲ್ ಕ್ಲಾರ್ಕ್‌ಗೆ ನಾಯಕತ್ವದ ಜವಾಬ್ಧಾರಿ ತೆಗೆದುಕೊಳ್ಳಲು ಅದು ಸೂಕ್ತ ಸಂದರ್ಭವಾಗಿತ್ತು ಎಂದು ಪಾಂಟಿಂಗ್ ಹೇಳಿದ್ದಾರೆ.

ಐಪಿಎಲ್ ರದ್ದಾದರೆ ವಿಶ್ವಕಪ್‌ಗೆ ಸ್ಥಾನವನ್ನು ಗಳಿಸೋದೇ ಇಲ್ಲ ಈ 4 ಆಟಗಾರರುಐಪಿಎಲ್ ರದ್ದಾದರೆ ವಿಶ್ವಕಪ್‌ಗೆ ಸ್ಥಾನವನ್ನು ಗಳಿಸೋದೇ ಇಲ್ಲ ಈ 4 ಆಟಗಾರರು

ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಶತಕವನ್ನು ಸಿಡಿಸಿ ಮಿಂಚಿದ್ದರು. ಐವತ್ತು ಓವರ್‌ಗಳಲ್ಲಿ ಆಸ್ಟ್ರೇಲಿಯಾ ತಂಡ 260 ರನ್‌ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೊತ್ತವನ್ನು ಟೀಮ್ ಇಂಡಿಯಾ 47.4 ಓವರ್‌ಗಳಲ್ಲಿ ತಲುಪಿ ಸೆಮಿಫೈನಲ್‌ಗೆ ಟಿಕೆಟ್ ಪಡೆದುಕೊಂಡಿತ್ತು. ಯುವರಾಜ್ ಸಿಂಗ್ ಈ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನವನ್ನು ನೀಡಿ ಟೀಮ್ ಇಂಡಿಯಾ ಗೆಲುವಿಗೆ ಕಾರಣರಾಗಿದ್ದರು.

Story first published: Tuesday, March 24, 2020, 18:41 [IST]
Other articles published on Mar 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X