ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೃಥ್ವಿ ಶಾ ವೀಕ್‌ನೆಸ್ ಕಾಮೆಂಟರಿಯಲ್ಲಿ ವಿವರಿಸಿದ ಪಾಂಟಿಂಗ್, ಮರುಕ್ಷಣವೇ ಶಾ ಬೌಲ್ಡ್!

Ricky Pontings Prediction of Prithvi Shaws Wicket in Live Commentary.

ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್‌ನಲ್ಲೂ ತಮ್ಮ ನೀರಸ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಆರಂಭವಾದ ಎರಡನೇ ಎಸೆತಕ್ಕೇ ಪೃಥ್ವಿ ಶಾ ಬೌಲ್ಡ್ ಆಗಿದ್ದು ಶಾ ಬ್ಯಾಟಿಂಗ್ ಟೀಕೆಗೆ ಗುರಿಯಾಗಿದೆ. ಆದರೆ ಪೃಥ್ವಿ ಶಾ ವಿಕೆಟ್ ಕಳೆದುಕೊಳ್ಳುವುದಕ್ಕೇ ಕೆಲವೇ ಸೆಕೆಂಡ್‌ಗಳ ಮುನ್ನ ರಿಕಿ ಪಾಂಟಿಂಗ್ ಕಾಮೆಂಟರಿಯಲ್ಲಿ ಹೇಳಿದ ಮಾತು ಈಗ ಸಾಕಷ್ಟು ವೈರಲ್ ಆಗುತ್ತಿದೆ.

ಟೀಮ್ ಇಂಡಿಯಾದ ಬ್ಯಾಟಿಂಗ್‌ನ ಆರಂಭದ ಸಂರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಪಂದ್ಯವನ್ನು ನೇರಪ್ರಸಾರ ಮಾಡುವ ಚಾನೆಲ್ 7 ಸ್ಪೋರ್ಟ್‌ಗಾಗಿ ರಿಕಿ ಪಾಂಟಿಂಗ್ ವೀಕ್ಷಕ ವಿವರಣೆಯನ್ನು ನೀಡುತ್ತಿದ್ದರು. ಪೃಥ್ವಿ ಶಾ ಸ್ಟ್ರೈಕ್‌ನಲ್ಲಿ ಮೊದಲ ಎಸೆತವನ್ನು ಎದುರಿಸಿದ ಬಳಿಕ ಪಾಂಟಿಂಗ್ ಪೃಥ್ವಿ ಶಾ ಅವರ ಬ್ಯಾಟಿಂಗ್‌ನ ದೌರ್ಬಲ್ಯದ ಬಗ್ಗೆ ವಿವರಿಸಲು ಆರಂಭಿಸಿದರು.

ಭಾರತ vs ಆಸ್ಟ್ರೇಲಿಯಾ ಮೊದಲ ಟೆಸ್ಟ್ : Live ಸ್ಕೋರ್ಭಾರತ vs ಆಸ್ಟ್ರೇಲಿಯಾ ಮೊದಲ ಟೆಸ್ಟ್ : Live ಸ್ಕೋರ್

ಐಪಿಎಲ್‌ನಲ್ಲಿ ಡೆಲ್ಲಿ ತಂಡದ ಮುಖ್ಯ ಕೋಚ್ ಆಗಿರುವ ರಿಕಿ ಪಾಂಟಿಂಗ್ ವೀಕ್ಷಕ ವಿವರಣೆಯಲ್ಲಿ "ಪೃಥ್ವಿ ಶಾ ತಮ್ಮ ರಕ್ಷಣಾತ್ಮ ಆಟದಲ್ಲಿ ಬಿರುಕೊಂದನ್ನು ಹೊಂದಿದ್ದಾರೆ. ಆತನ ಬ್ಯಾಟ್ ಹಾಗೂ ಪ್ಯಾಡ್‌ನ ಮಧ್ಯೆ ದೊಡ್ಡ ಅಂತರವಿದೆ. ಆಸಿಸ್ ಬೌಲರ್‌ಗಳು ಅದಕ್ಕೆ ಗುರಿಯಿಡಲಿದ್ದಾರೆ" ಎಂದು ರಿಕಿ ಪಾಂಟಿಂಗ್ ಪೃಥ್ವಿ ಶಾ ಬ್ಯಾಟಿಂಗ್‌ ಬಗ್ಗೆ ವಿವರಿಸುತ್ತಿದ್ದರು.

ಈ ಮಾತನ್ನು ಹೇಳಿ ಮುಗಿಸಿದ ಮರು ಕ್ಷಣದಲ್ಲೇ ಪೃಥ್ವಿ ಶಾ ಸ್ಟಾರ್ಕ್ ಎಸೆತಕ್ಕೆ ಬೌಲ್ಡ್ ಆಗಿದ್ದರು. ಅದು ಕೂಡ ರಿಕಿ ಪಾಂಟಿಂಗ್ ಹೇಳಿದ ಮಾದರಿಯಲ್ಲೇ ಪೃಥ್ವಿ ಶಾ ವಿಕೆಟ್ ಒಪ್ಪಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಸ್ಟಾರ್ಕ್ ಎಸೆತವನ್ನು ತಕ್ಷಣಾತ್ಮಕವಾಗಿ ಆಡಲು ಮುಂದಾದ ಶಾ ಬ್ಯಾಟ್‌ನ ಒಳಭಾಗ ತಗುಲಿ ವಿಕೆಟ್‌ಗೆ ಬಡಿದಿತ್ತು.

ಭಾರತ vs ಆಸ್ಟ್ರೇಲಿಯಾ, ಪಿಂಕ್ ಬಾಲ್ ಟೆಸ್ಟ್: ಟ್ರೋಫಿ ಉಳಿಸಿಕೊಳ್ಳಲು ಭಾರತ ಪ್ರಯತ್ನ ಆರಂಭಭಾರತ vs ಆಸ್ಟ್ರೇಲಿಯಾ, ಪಿಂಕ್ ಬಾಲ್ ಟೆಸ್ಟ್: ಟ್ರೋಫಿ ಉಳಿಸಿಕೊಳ್ಳಲು ಭಾರತ ಪ್ರಯತ್ನ ಆರಂಭ

ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿದ್ದರೂ ಶಾ ಆಡುವ ಬಳಗದಲ್ಲಿ ಕಾಣಿಸಿಕೊಂಡಿರುವುದು ಪ್ರಶ್ನಿಸುವಂತೆ ಮಾಡಿದೆ. 21ರ ಹರೆಯದ ಮುಂಬೈ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 0, 19, 43 ಹಾಗೂ 3 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುವ ಪೃಥ್ವಿ ಶಾ ಅಲ್ಲೂ ಕಳಪೆ ಆಟವನ್ನು ಪ್ರದರ್ಶಿಸಿದ್ದರು.

Story first published: Thursday, December 17, 2020, 13:47 [IST]
Other articles published on Dec 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X