ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬಗ್ಗೆ ಭವಿಷ್ಯ ನುಡಿದ ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್!

Ricky Ponting said without Babar azam great performance Pakistan cannot win t20 world cup

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಈ ಪ್ರತಿಷ್ಠಿತ ಟೂರ್ನಿ ಆಯೋಜನೆಯಾಗಲಿದ್ದು ಯಾವ ತಂಡ ಗೆಲ್ಲಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲಿರುವ ಎಲ್ಲಾ ಅಗ್ರ ತಂಡಗಳು ಕೂಡ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದ್ದು ಬಲಿಷ್ಠ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯಲಿದೆ.

ಆದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಮಾತನಾಡಿದ್ದು ಕುತೂಹಲಕಾರಿ ಸಂಗತಿಯೊಂದನ್ನು ಹೇಳಿಕೊಂಡಿದ್ದಾರೆ. ಕಳದ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದ ಪಾಕಿಸ್ತಾನ ಅದ್ಭುತ ಪ್ರದರ್ಶನ ನಿಡುವ ಮೂಲಕ ಗಮನಸೆಳೆದಿತ್ತು. ಆದರೆ ಈ ಬಾರಿ ಪಾಕಿಸ್ತಾನ ತಂಡದಲ್ಲಿ ಓರ್ವ ಆಟಗಾರನ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪಾಂಟಿಂಗ್.

ಭಾರತ ಮತ್ತು ವಿಂಡೀಸ್ ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?ಭಾರತ ಮತ್ತು ವಿಂಡೀಸ್ ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?

ಬಾಬರ್ ಅದ್ಭುತವಾಗಿ ಆಡಿದರೆ ಮಾತ್ರ ಯಶಸ್ಸು

ಬಾಬರ್ ಅದ್ಭುತವಾಗಿ ಆಡಿದರೆ ಮಾತ್ರ ಯಶಸ್ಸು

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಬೇಕಾದರೆ ತಂಡದ ನಾಯಕ ಬಾಬರ್ ಅಜಂ ಶ್ರೇಷ್ಠ ಪ್ರದರ್ಶನ ನೀಡಿದರೆ ಮಾತ್ರವೇ ಸಾಧ್ಯ ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ. ಐಸಿಸಿ ರಿವ್ಯೂ ಕಾರ್ಯಕ್ರಮದಲ್ಲಿ ಸಂಜನಾ ಗಣೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಕಿ ಪಾಂಟಿಂಗ್ "ಬಾಬರ್ ಅಜಂ ಈ ಬಾರಿಯ ವಿಶ್ವಕಪ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡದಿದ್ದರೆ ಅವರು ಗೆಲ್ಲು ಸಾಧ್ಯವಿದೆ ಎಂದು ನನಗೆ ಅನಿಸುತ್ತಿಲ್ಲ. ಎಂದಿದ್ದಾರೆ ರಿಕಿ ಪಾಂಟಿಂಗ್

ಕಳೆದ ವಿಶ್ವಕಪ್‌ನಲ್ಲಿ ಬಾಬರ್ ಅಮೋಘ ಪ್ರದರ್ಶನ

ಕಳೆದ ವಿಶ್ವಕಪ್‌ನಲ್ಲಿ ಬಾಬರ್ ಅಮೋಘ ಪ್ರದರ್ಶನ

ಬಾಬರ್ ಅಜಂ ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರವಾಗಿಒ ಅಮೋಘ ಪ್ರದರ್ಶನ ನೀಡಿದ್ದರು. 27ರ ಹರೆಯದ ಬಾಬರ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನಿಡಿದ ಕಾರಣ ಟೂರ್ನಿಯ್ಲಯಲ್ಲಿ ಪಾಕ್ ಯಶಸ್ಸು ಸಾಧಿಸಿತ್ತು. ಟೂರ್ನಿಯ್ಲಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿಯೂ ಬಾಬರ್ ಹೊರಹೊಮ್ಮಿದ್ದರು. ಆಡಿದ ಆರು ಪಂದ್ಯಗಳಲ್ಲಿ ಬಾಬರ್ ಅಜಂ 60.60ರ ಸರಾಸರಿಯಲ್ಲಿ 126.25ತ ಸ್ಟ್ರೈಕ್‌ರೇಟ್‌ನಲ್ಲಿ 303 ರನ್‌ಗಳಿಸಿ ಮಿಂಚಿದ್ದರು. ಮೊದಲ ಹಂತದ ಎಲ್ಲಾ ಐದು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ್ದ ಪಾಕಿಸ್ತಾನ ಬಳಿಕ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.

ಬಾಬರ್ ಬಗ್ಗೆ ಪಾಂಟಿಂಗ್ ಮೆಚ್ಚುಗೆ ಮಾತು

ಬಾಬರ್ ಬಗ್ಗೆ ಪಾಂಟಿಂಗ್ ಮೆಚ್ಚುಗೆ ಮಾತು

ಪಾಕಿಸ್ತಾನದ ನಾಯಕ ಬಾಬರ್ ಅಜಂ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಎಲ್ಲಾ ಮಾದರಿಯಲ್ಲಿಯೂ ಸಾಕಷ್ಟು ಯಶಸ್ಸು ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪಾಂಟಿಂಗ್ "ಕಳೆದ ಒಂದೆರಡು ವರ್ಷಗಳ ಹಿಂದೆ ಅವರು ಆಸ್ಟ್ರೇಲಿಯಾಗೆ ಟೆಸ್ಟ್ ಆಡಲು ಬಂದಿದ್ದಾಗ ಆತನನ್ನು ನಾನು ಹತ್ತಿರದಿಂದ ಕಂಡಿದ್ದೆ. ಈತನಿಗೆ ಆಗಸವೇ ಸೀಮಿತ ಎಂದು ನಾನು ಭಾವಿಸಿದ್ದೆ. ಈವರೆಗೆ ಆತನ ಟೆಸ್ಟ್ ಪ್ರದರ್ಶನ ಮಾತ್ರವೇ ಕಳವಳಕಾರಿಯಾಗಿದೆ. ಅದೇನೆ ಇದ್ದರೂ ಆತ ವರ್ಷದಿಂದ ವರ್ಷಕ್ಕೆ ಉತ್ತಮವಾಗಿ ಬೆಳವಣಿಗೆ ಸಾಧಿಸುತ್ತಿದ್ದಾರೆ" ಎಂದಿದ್ದಾರೆ ರಿಕಿ ಪಾಂಟಿಂಗ್.

ಆರಂಭಿಕರ ಪಾತ್ರ ನಿರ್ಣಾಯಕ ಎಂದ ಪಾಂಟಿಂಗ್

ಆರಂಭಿಕರ ಪಾತ್ರ ನಿರ್ಣಾಯಕ ಎಂದ ಪಾಂಟಿಂಗ್

ಮುಂದುವರಿದು ಮಾತನಾಡಿದ ರಿಕಿ ಪಾಂಟಿಂಗ್ ಪಾಕಿಸ್ತಾನ ಮುಂಬರುವ ವಿಶ್ವಕಪ್‌ನಲ್ಲಿ ಯಶಸ್ಸು ಸಾಧಿಸಬೇಕಾದರೆ ಆ ತಂಡದ ಆರಂಭಿಕ ಆಟಗಾರರ ಪ್ರದರ್ಶನ ಬಹಳ ಮುಖ್ಯವಾಗಲಿದೆ ಎಂದಿದ್ದಾರೆ. "ಅವರ ಆರಂಭಿಕ ಆಟಗಾರರು ಬಹಳ ಪ್ರಮುಖ ಪಾತ್ರವಹಿಸುತ್ತಾರೆ ಹಾಗೂ ಅವರ ಆರಂಬಿಕ ಬೌಲರ್‌ಗಳು ನಿರ್ಣಾಯಕವಾಗಲಿದ್ದಾರೆ. ಆದರೆ ಅವರ ಸ್ಪಿನ್ ಬೌಲರ್‌ಗಳ ಪಾತ್ರ ಆಸ್ಟ್ರೇಲಿಯಾದ ಪಿಚ್‌ನಲ್ಲಿ ಸವಾಲನ್ನು ಎದುರಸಿಬೇಕಾಗಬಹುದು" ಎಂದಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Tuesday, July 26, 2022, 19:44 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X