ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ರಿಷಭ್ ಪಂತ್ ಪ್ರಬುದ್ಧತೆಯ ಬಗ್ಗೆ ಹಾಡಿ ಹೊಗಳಿದ ಕೋಚ್ ಪಾಂಟಿಂಗ್

Ricky Ponting says Rishabh Pants maturity has Gone Through The Roof
ಟೀಮ್ ಇಂಡಿಯಾದಲ್ಲಿ ರಿಷಬ್ ಪಂತ್ ಜವಾಬ್ದಾರಿ ಬಗ್ಗೆ ಹೇಳಿದ ರಿಕಿ ಪಾಂಟಿಂಗ್ | Oneindia Kannada

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್‌ಸೈಸರ್ಸ್ ಹೈದರಾಬಾದ್ ವಿರುದ್ಧ ದುಬೈನಲ್ಲಿ ಬುಧವಾರ ಕಣಕ್ಕಿಳಿದಿದೆ. ಈ ಬಾರಿಯ ಆವೃತ್ತಿ ಮೊದಲ ಭಾಗದಲ್ಲಿ ಖಾಯಂ ನಾಯಕ ಶ್ರೇಯಸ್ ಐಯ್ಯರ್ ಗಾಯಗೊಂಡಿದ್ದ ಕಾರಣ ತಂಡದ ನಾಯಕತ್ವದ ಜವಾಬ್ಧಾರಿ ಯುವ ಆಟಗಾರ ಪಂತ್ ಹೆಗಲಿಗೆ ಬಿದ್ದಿತ್ತು. ಮೊದಲಾರ್ದದಲ್ಲಿ ನಾಯಕನಾಗಿ ಪಂತ್ ಹಾಗೂ ಡೆಲ್ಲಿ ತಂಡ ಅದ್ಭುತ ಪ್ರದರ್ಶನ ನೀಡಿದ ಕಾರಣದಿಂದಾಗಿ ಎರಡನೇ ಚರಣದಲ್ಲಿ ಶ್ರೇಯಸ್ ಐಯ್ಯರ್ ಲಭ್ಯವಿದ್ದರೂ ನಾಯಕನಾಗಿ ಪಂತ್‌ಗೆ ಮುಂದುವರಿಯಲು ಡೆಲ್ಲಿ ಮ್ಯಾನೇಜ್‌ಮೆಂಟ್ ಅವಕಾಶ ನೀಡಿದೆ.

ತಂಡದಲ್ಲಿ ಬೇರೆ ಒಳ್ಳೊಳ್ಳೆ ಆಟಗಾರರಿದ್ದಾರೆ; ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಬಗ್ಗೆ ಸುದೀಪ್ ಮಾತುತಂಡದಲ್ಲಿ ಬೇರೆ ಒಳ್ಳೊಳ್ಳೆ ಆಟಗಾರರಿದ್ದಾರೆ; ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಬಗ್ಗೆ ಸುದೀಪ್ ಮಾತು

ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ನಾಯಕ ರಿಷಭ್ ಪಂತ್ ವಿಚಾರವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪಂತ್ ಪ್ರಬುದ್ಧತೆಯ ಬಗ್ಗೆ ವಿಶೇಷ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ನಾಯಕನಾಗಿ ರಿಷಭ್ ಪಂತ್ ಊಹಿಸದಷ್ಟು ಉನ್ನತ ಮಟ್ಟದ ಪ್ರಬುದ್ಧತೆಯನ್ನು ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್

"ನಾನು ಮೊದಲಿಗೆ ಡೆಲ್ಲಿಗೆ ಸೇರಿಕೊಂಡಾಗ ಆತ ಮೊದಲ ಬಾರಿಗೆ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದ್ದ. ಆಗಲೇ ನಾನು ಭಾರತ ತಂಡಕ್ಕೆ ಸುದೀರ್ಘ ಕಾಲ ಆಡುವ ಓರ್ವ ಆಟಗಾರ ದೊರೆತಿದ್ದಾನೆ ಎಂದು ಹೇಳಿದ್ದೆ. ಈಗ ಆತ ಸಿಕ್ಕಿರುವುದನ್ನು ನಾವು ನೋಡುತ್ತಿದ್ದೇವೆ. ಪ್ರತಿ ತಂಡದಲ್ಲಿಯೂ ಆತನಂತಾ ಆಟಗಾರರನ್ನು ನೋಡಲು ಬಯಸುತ್ತಾರೆ" ಎಂದಿದ್ದಾರೆ ರಿಕಿ ಪಾಂಟಿಂಗ್.

ಈ ಬಾರಿಯ ಐಪಿಎಲ್‌ ಟೂರ್ನಿಯ ಮಧ್ಯದಲ್ಲೇ ಕೊಹ್ಲಿ ಕೈಬಿಟ್ಟು ಹೊಸ ನಾಯಕನನ್ನು ಆರಿಸಲಿದೆ ಆರ್‌ಸಿಬಿ!?ಈ ಬಾರಿಯ ಐಪಿಎಲ್‌ ಟೂರ್ನಿಯ ಮಧ್ಯದಲ್ಲೇ ಕೊಹ್ಲಿ ಕೈಬಿಟ್ಟು ಹೊಸ ನಾಯಕನನ್ನು ಆರಿಸಲಿದೆ ಆರ್‌ಸಿಬಿ!?

"ಈಗ ರಿಷಭ್ ಪಂತ್‌ ತಂಡದಿಂದ ಹೊರಹೋಗಬೇಕಾದರೆ ಅತ್ಯುತ್ತಮವಾದ ಆಟಗಾರನೇ ಬೇಕಾಗುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿಯೂ ಪಂತ್ ಈವರೆಗೆ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ನಾವೆಲ್ಲರೂ ಈ ಬಾರಿ ವಿಶೇಷವಾದ್ದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ ಬಾರಿಯ ಸಾಧನೆಗಿಂತ ಒಂದು ಹೆಜ್ಜೆ ಮುಂದೆಯಿಡಲು ನಾವು ಬಯಸುತ್ತೇವೆ. ಇದಕ್ಕಾಗಿ ರಿಷಭ್ ಪಂತ್ ಪಾತ್ರ ಅತ್ಯಂತ ಮಹತ್ವದ್ದಾಗಿರಲಿದೆ" ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

2020ರ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಫೈನಲ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಆದರೆ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಟ್ರೋಫಿಯನ್ನು ಗೆಲ್ಲೇಬೇಕು ಎಂಬ ಉತ್ಸಾಹದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುನ್ನುಗ್ಗುತ್ತಿದೆ.

ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್

ಕಳೆದ ವರ್ಷಕ್ಕಿಂತ ಈ ವರ್ಷ ನಾವು ಉತ್ತಮವಾಗಿದ್ದೇವೆ. ನಾವು ಎರಡು-ಮೂರು ವರ್ಷಗಳಿಂದ ಉತ್ತಮವಾಗಿ ಬೆಳವಣಿಗೆ ಕಾಣುತ್ತಿದ್ದೇವೆ. ಕಳೆದ ವರ್ಷಕ್ಕಿಂತ ವಿಭಿನ್ನವಾಗಿ ನಾವು ಹೆಚ್ಚಿನದೇನೂ ಕೆಲಸಗಳನ್ನು ಮಾಡಬೇಕಾಗಿಲ್ಲ. ನಾವು ಅದೇ ಕಾರ್ಯವನ್ನು ಮಾಡಬೇಕಿದ್ದು 10-15 ಶೇಕಡಾದಷ್ಟು ಹೆಚ್ಚಿನ ಪರಿಶ್ರಮವಹಿಸಬೇಕು" ಎಂದಿದ್ದಾರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ತಮಡದ ನಾಯಕ ರಿಷಭ್ ಪಂತ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಸ್ಕ್ವಾಡ್

ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್ / ನಾಯಕ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೀರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್, , ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಅನ್ರಿಚ್ ನಾರ್ಕಿಯಾ ಸ್ಟೀವನ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಲುಕ್ಮನ್ ಮೇರಿವಾಲಾ, ಟಾಮ್ ಕರನ್, ಬೆನ್ ದ್ವಾರಶುಯಿಸ್, ಪ್ರವೀಣ್ ದುಬೆ, ವಿಷ್ಣು ವಿನೋದ್, ಕುಲ್ವಂತ್ ಖೆಜ್ರೋಲಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್

Story first published: Thursday, September 23, 2021, 9:55 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X