ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬಳಿಕ ಮತ್ತೊಂದು ಟೂರ್ನಿಗೆ ಸಚಿನ್ ತೆಂಡೂಲ್ಕರ್ ಕೋಚ್

Sachin Tendulkar, Courtney Walsh To Coach Australia Bushfire Relief Match | Sachin Tendulkar |
Right team, Right Cause: Sachin Tendulkar On Bushfire Cricket Game

ವಿಶ್ವ ಕ್ರಿಕೆಟ್‌ನ ದಂತಕತೆ ಸಚಿನ್ ತೆಂಡುಲ್ಕರ್ ಆಸ್ಟ್ರೇಲಿಯಾದ ಬುಷ್‌ಫೈರ್‌ ಕ್ರಿಕೆಟ್‌ ಲೀಗ್‌ನಲ್ಲಿ ಭಾಗಿಯಾಗಲಿದ್ದಾರೆ. ಇದನ್ನು ಸ್ವತಃ ಸಚಿನ್ ತೆಂಡೂಲ್ಕರ್ ಖಚಿತ ಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ನೇತೃತ್ವದ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಚ್ ಆದ ಬಳಿಕ ಮತ್ತೊಂದು ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ವಿಚಾರವನ್ನು ಖಚಿತ ಪಡಿಸಿದ ಬಳಿಕ ಸ್ವತಃ ಸಚಿನ್ ತೆಂಡೂಲ್ಕರ್ ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದರ ಬಗ್ಗೆ ಕಾರಣವನ್ನು ನೀಡಿದ್ದಾರೆ. ಉತ್ತಮ ಕಾರಣಕ್ಕಾಗಿ ಮತ್ತು ಸರಿಯಾದ ತಂಡಕ್ಕಾಗಿ ಈ ಟೂರ್ನಿಯಲ್ಲಿ ಕೈ ಜೋಡಿಸುತ್ತಿದ್ದೇನೆ ಎಂಬ ಮಾತನ್ನು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್

ಸಚಿನ್ ತೆಂಡೂಲ್ಕರ್ ಜೊತೆಗೆ ಇನ್ನೋರ್ವ ಲೆಜೆಂಡರಿ ಆಟಗಾರ ಕೂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವೆಸ್ಟ್‌ಇಂಡೀಸ್ ಕ್ರಿಕೆಟ್‌ನ ಮಾಜಿ ಆಟಗಾರ ಕಾರ್ಟ್ನಿ ವಾಲ್ಶ್ ಕೂಡ ಈ ಟೂರ್ನಿಯ ಭಾಗವಾಗಲಿದ್ದಾರೆ. ಬುಷ್‌ಫೈರ್‌ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ರಿಕಿ ಪಾಂಟಿಂಗ್ ಅವರ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದರೆ, ಕಾರ್ಟ್ನಿ ವಾಲ್ಶ್ ಶೇನ್ ವಾರ್ನ್ ನೇತೃತ್ವದ ತಂಡಕ್ಕೆ ಕೋಚ್ ಆಗಲಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ರಿಕಿ ಪಾಂಟಿಂಗ್ ಟ್ವಿಟರ್‌ನಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಬುಷ್‌ಫೈರ್‌ ಟೂರ್ನಿಯ ಭಾಗವಾಗುತ್ತಿರುವುದಕ್ಕೆ, ತಮ್ಮ ಅಮೂಲ್ಯ ಸಮಯವನ್ನು ಉತ್ತಮ ಕಾರಣಕ್ಕಾಗಿ ನೀಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಕೋಚ್‌ ಆಗಲು ಸರಿಯಾದ ತಂಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ.

ಭಾರತ vs ಕೀವಿಸ್: ಟಿ20 ಸರಣಿಯಲ್ಲಿ ದಾಖಲಾಗಬಹುದಾದ 4 ರೆಕಾರ್ಡ್‌ಗಳುಭಾರತ vs ಕೀವಿಸ್: ಟಿ20 ಸರಣಿಯಲ್ಲಿ ದಾಖಲಾಗಬಹುದಾದ 4 ರೆಕಾರ್ಡ್‌ಗಳು

ಬುಷ್‌ಫೈರ್‌ನಿಂದಾಗಿ ಆಸ್ಟ್ರೇಲಿಯಾದಲ್ಲಿ ಲಕ್ಷಾಂತರ ಮಂದಿ ವಸತಿಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಪುನರ್ವಸತಿಯನ್ನು ನೀಡಲು ಈ ಟೂರ್ನಿಯ ಮೂಲಕ ಹಣಸಂಗ್ರಹ ಮಾಡಿ ಆ ಮೂಲಕ ಸಹಾಯವಾಗಲು ಈ ಟೂರ್ನಿಯನ್ನು ಆಯೋಜನೆ ಮಾಡಲಾಗುತ್ತಿದೆ.

Story first published: Wednesday, January 22, 2020, 18:09 [IST]
Other articles published on Jan 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X