ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಸರಿಗಟ್ಟಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರಿಷಬ್ ಪಂತ್

ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ರಿಷಬ್ ಪಂತ್..?| Rishabh Pant | Oneindia Kannada
Rishabh Pant beats MS Dhoni to script new Test milestone

ಕಿಂಗ್‌ಸ್ಟನ್, ಸೆಪ್ಟೆಂಬರ್ 2: ಟೆಸ್ಟ್‌ ಕ್ರಿಕೆಟ್‌ನಲ್ಲಿ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್, ಮಾಜಿ ನಾಯಕ ಎಂಎಸ್‌ ಧೋನಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೀಪರ್‌ ಆಗಿದ್ದುಕೊಂಡು ವೇಗವಾಗಿ 50 ವಿಕೆಟ್‌ ಪಡೆದ ಭಾರತೀಯನಾಗಿ ಪಂತ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಟಿ20 ಸರಣಿಗೆ ಭಾರತ ತಂಡ ಮುಂಚಿತವಾಗಿ ಪ್ರಕಟಗೊಳ್ಳಲು ಜೆರ್ಸಿ ಕಾರಣ!ಟಿ20 ಸರಣಿಗೆ ಭಾರತ ತಂಡ ಮುಂಚಿತವಾಗಿ ಪ್ರಕಟಗೊಳ್ಳಲು ಜೆರ್ಸಿ ಕಾರಣ!

ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್‌ ಮೂಲಕ ತನ್ನ 11 ಟೆಸ್ಟ್ ಪಂದ್ಯವನ್ನಾಡುತ್ತಿರುವ ರಿಷಬ್ ಪಂತ್, ಭಾನುವಾರ (ಸೆಪ್ಟೆಂಬರ್ 1) ಇಶಾಂತ್‌ ಶರ್ಮಾ ಓವರ್‌ನಲ್ಲಿ ಕ್ರೇಗ್ ಬ್ರಾಥ್‌ವೈಟ್ ಕ್ಯಾಚ್‌ ಪಡೆಯುವ ಮೂಲಕ 50ನೇ ಟೆಸ್ಟ್‌ ವಿಕೆಟ್‌ ಉರುಳಿಸಿದ ಸಾಧನೆಗೆ ಕಾರಣರಾದರು.

ಭಾರತ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್, 4ನೇ ದಿನ, Live ಸ್ಕೋರ್‌ಕಾರ್ಡ್

1
46251

ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಸಬೀನಾ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಭಾರತ ಗೆದ್ದುಕೊಳ್ಳುವುದರಲ್ಲಿದೆ.

ಧೋನಿ ದಾಖಲೆ ಬದಿಗೆ

ಧೋನಿ ದಾಖಲೆ ಬದಿಗೆ

ಕೇವಲ 11 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಕೆಡವಲು ಕಾರಣರಾಗುವ ಮೂಲಕ ಪಂತ್, ಧೋನಿ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. ಧೋನಿ, 15 ಟೆಸ್ಟ್‌ ಪಂದ್ಯಗಳಲ್ಲಿ 50 ಕೀಪಿಂಗ್ ವಿಕೆಟ್‌ ಪಡೆದು ವೇಗವಾಗಿ 50 ವಿಕೆಟ್‌ ಸಾಧನೆ ತೋರಿದ ಭಾರತೀಯ ವಿಕೆಟ್ ಕೀಪರ್‌ ದಾಖಲೆ ನಿರ್ಮಿಸಿದ್ದರು.

ಭರ್ಜರಿ ಮುನ್ನಡೆ

ಭರ್ಜರಿ ಮುನ್ನಡೆ

ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 140.1 ಓವರ್‌ನಲ್ಲಿ 416 ರನ್ ಪೇರಿಸಿತ್ತು. ವೆಸ್ಟ್ ಇಂಡೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 47.1 ಓವರ್‌ನಲ್ಲಿ 117 ರನ್‌ ಗಳಿಸಿ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 54.4 ಓವರ್‌ಗೆ 4 ವಿಕೆಟ್‌ ಕಳೆದು 168 ರನ್‌ಗೆ ಡಿಕ್ಲೇರ್ ಘೋಷಿಸಿದೆ. ವಿಂಡೀಸ್ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.

ವಿಶ್ವದಾಖಲೆ ಸರಿಸಮ

ವಿಶ್ವದಾಖಲೆ ಸರಿಸಮ

ಇಂಗ್ಲೆಂಡ್‌ ವಿಕೆಟ್‌ ಕೀಪರ್ ಜ್ಯಾಕ್‌ ರಸೆಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಹೆಸರಿನಲ್ಲಿ ಟೆಸ್ಟ್‌ ಒಂದರಲ್ಲಿ ಅತೀ ಹೆಚ್ಚು ಕ್ಯಾಚ್‌ ಪಡೆದ (11 ಕ್ಯಾಚ್‌ಗಳು) ವಿಶ್ವದಾಖಲೆಯಿದೆ. 2018ರ ಡಿಸೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೀಪರ್ ರಿಷಬ್ ಪಂತ್ 11 ಕ್ಯಾಚ್‌ಗಳನ್ನು ಪಡೆದು ಈ ದಾಖಲೆ ಸರಿದೂಗಿಸಿಕೊಂಡಿದ್ದರು.

ವಿಹಾರಿ, ಬೂಮ್ರಾ ಆಟ

ವಿಹಾರಿ, ಬೂಮ್ರಾ ಆಟ

ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಲು ಕಾರಣ ಹನುಮ ವಿಹಾರಿ ಮತ್ತು ವೇಗಿ ಜಸ್‌ಪ್ರೀತ್‌ ಬೂಮ್ರಾ. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ವಿಹಾರಿ 111 ರನ್‌ ಕೊಡಗೆ ಮೂಲಕ ಬ್ಯಾಟಿಂಗ್ ವಿಭಾಗವನ್ನು ಬೆಂಬಲಿಸಿದರೆ, ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಬೂಮ್ರಾ 27 ರನ್‌ಗೆ 6 ವಿಕೆಟ್‌ ಪಡೆದು ಬೌಲಿಂಗ್ ಪಾರಮ್ಯ ಮೆರೆದಿದ್ದರು.

Story first published: Monday, September 2, 2019, 15:50 [IST]
Other articles published on Sep 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X