ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಎಂಎಸ್ ಧೋನಿ ದಾಖಲೆ ಮುರಿದ ರಿಷಬ್ ಪಂತ್

Rishabh Pant breaks MS Dhoni’s long-standing T20I record

ಗಯಾನಾ, ಆಗಸ್ಟ್ 7: ವೆಸ್ಟ್ ಇಂಡೀಸ್‌ ಪ್ರವಾಸದಲ್ಲಿ ಮೊದಲೆರಡು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ (0, 4 ರನ್) ಭಾರತದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್, 3ನೇ ಮತ್ತು ಕೊನೆಯ ಟಿ20ಯಲ್ಲಿ ಉತ್ತಮ ಬ್ಯಾಟಿಂಗ್ ತೋರಿಸಿದ್ದಷ್ಟೇ ಅಲ್ಲ, ಎಂಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆಯೊಂದನ್ನೂ ಸರಿಗಟ್ಟಿದ್ದಾರೆ.

1948ರ ಆ್ಯಷಸ್ ಟೆಸ್ಟ್‌ನಲ್ಲಿ ಬ್ರಾಡ್‌ಮನ್ ಬ್ಯಾಟಿಂಗ್: ಅಪರೂಪದ ವಿಡಿಯೋ1948ರ ಆ್ಯಷಸ್ ಟೆಸ್ಟ್‌ನಲ್ಲಿ ಬ್ರಾಡ್‌ಮನ್ ಬ್ಯಾಟಿಂಗ್: ಅಪರೂಪದ ವಿಡಿಯೋ

ಮಂಗಳವಾರ (ಆಗಸ್ಟ್ 6) ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ-ವೆಸ್ಟ್ ಇಂಡೀಸ್ 3ನೇ ಟಿ20ಯಲ್ಲಿ 4ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದಿದ್ದ ಪಂತ್, 42 ಎಸೆತಗಳಿಗೆ 65 ರನ್ ಬಾರಿಸಿದ್ದರು. ಕೊಹ್ಲಿ 59 ರನ್ ಕೊಡುಗೆಯೊಂದಿಗೆ ಟೀಮ್ ಇಂಡಿಯಾ, ಪಂದ್ಯವನ್ನು 7 ವಿಕೆಟ್‌ಗಳಿಂದ ಜಯಿಸಿತ್ತು.

ವಿಕೆಟ್ ಕೀಪರ್ ರಿಷಬ್ ಪಂತ್ ಗಳಿಸಿದ ಅಜೇಯ 65 ರನ್ ಸಾಧನೆ, ಮಾಜಿ ನಾಯಕ, ಕೀಪರ್ ಎಂಎಸ್ ಧೋನಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಬಾರಿಸಿದ್ದ ಎಲ್ಲಾ ರನ್ ಸಾಧನೆಯನ್ನು ಮೀರಿಸಿದೆ. ಧೋನಿ, ಇಂಗ್ಲೆಂಡ್ ವಿರುದ್ಧ 1 ಫೆಬ್ರವರಿ 2017ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಟಿ20ಯಲ್ಲಿ 36 ಎಸೆತಗಳಿಗೆ 56 ರನ್ ಬಾರಿಸಿದ್ದರು. ಇದು ಭಾರತದ ವಿಕೆಟ್ ಕೀಪರ್ ಒಬ್ಬ ಟಿ20ಐ ಇನ್ನಿಂಗ್ಸ್ ಒಂದರಲ್ಲಿ ಬಾರಿಸಿದ್ದ ಅತೀ ಹೆಚ್ಚಿನ ರನ್ ಆಗಿತ್ತು.

ಭಾರತ vs ವೆಸ್ಟ್ ಇಂಡೀಸ್: ಟಿ20ಐ ದಾಖಲೆ ಬರೆದ ದೀಪಕ್ ಚಹಾರ್ಭಾರತ vs ವೆಸ್ಟ್ ಇಂಡೀಸ್: ಟಿ20ಐ ದಾಖಲೆ ಬರೆದ ದೀಪಕ್ ಚಹಾರ್

ಅದಕ್ಕೂ ಹಿಂದೆ ಫೆಬ್ರವರಿ 2018ರಲ್ಲಿ ಸೆಂಚುರಿಯನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 28 ಎಸೆತಗಳಿಗೆ ಅಜೇಯ 52 ರನ್ ಬಾರಿಸಿದ್ದರು. ಮಂಗಳವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ 146 ರನ್ ಮಾಡಿತ್ತು. ಭಾರತ 19.1 ಓವರ್‌ಗೆ 150 ರನ್ ಬಾರಿಸಿ ಗೆಲುವನ್ನಾಚರಿಸಿತು.

Story first published: Wednesday, August 7, 2019, 17:36 [IST]
Other articles published on Aug 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X