ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ರಿಷಬ್ ಪಂತ್ ಮ್ಯಾಚ್ ಫಿಕ್ಸ್‌ ಮಾಡಿದ್ರಾ? ಏನಿದು ಗುಸುಗುಸು?!

Rishabh Pant Caught On Stump Mic Making Bizarre Prediction

ನವದೆಹಲಿ, ಮಾರ್ಚ್ 31: ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಂದಿನಿಂದಲೂ ಭಾರತದ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಸ್ಟಂಪ್ ಹಿಂದಿನ ಕಸರತ್ತಿಗಾಗಿ ಆಗಾಗ ಗಮನ ಸೆಳೆಯುತ್ತಲೇ ಇದ್ದಾರೆ. ಇಂಥದ್ದೇ ವಿಚಾರಕ್ಕಾಗಿ ಈಗ ಪಂತ್ ಫಿಕ್ಸಿಂಗ್ ಗಾಳಿಸುದ್ದಿಗೂ ಗುರಿಯಾಗಿದ್ದಾರೆ.

ಸಿಕ್ಸ್‌ಗಾಗಿ ಐಪಿಎಲ್‌ನಲ್ಲಿ ಇತಿಹಾಸ ಬರೆದ ಯುನಿವರ್ಸ್ ಬಾಸ್ ಕ್ರಿಸ್‌ಗೇಲ್ಸಿಕ್ಸ್‌ಗಾಗಿ ಐಪಿಎಲ್‌ನಲ್ಲಿ ಇತಿಹಾಸ ಬರೆದ ಯುನಿವರ್ಸ್ ಬಾಸ್ ಕ್ರಿಸ್‌ಗೇಲ್

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಶನಿವಾರದ (ಮಾರ್ಚ್ 30) ಪಂದ್ಯದಲ್ಲಿ ಡೆಲ್ಲಿ ಪರ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ರಿಷಬ್ ಪಂತ್ ಮಾತನಾಡಿದ್ದರು. ಡೆಲ್ಲಿ ಬೌಲರ್ ಚೆಂಡು ಎಸೆಯುವ ಮುನ್ನವೇ ಆಟವನ್ನು ಅಂದಾಜಿಸಿ ಕಾಮೆಂಟ್ ಮಾಡಿದ್ದರು. ಇದು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿತ್ತು.

ಐಪಿಎಲ್: ಶಾ ಬ್ಯಾಟಿಂಗ್ ಸೊಗಸು, ಪಂದ್ಯ ಟೈ, ಡೆಲ್ಲಿಗೆ ಸೂಪರ್ ಗೆಲುವು!ಐಪಿಎಲ್: ಶಾ ಬ್ಯಾಟಿಂಗ್ ಸೊಗಸು, ಪಂದ್ಯ ಟೈ, ಡೆಲ್ಲಿಗೆ ಸೂಪರ್ ಗೆಲುವು!

ಅಂದು ಆಗಿದ್ದೇನು? ರಿಷಬ್ ಪಂತ್ ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದರಾ? ವಿವಾದಾತ್ಮಕ ವಿಚಾರದ ಕುರಿತು ಇಲ್ಲೊಂದಿಷ್ಟು ಮಾಹಿತಿಯಿದೆ.

ವಿಡಿಯೋ ವೈರಲ್

ನವದೆಹಲಿಯ ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 10ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಕೆಕೆಆರ್ ಇನ್ನಿಂಗ್ಸ್‌ನಲ್ಲಿ ಕೀಪಿಂಗ್ ಮಾಡುತ್ತಿದ್ದ ಪಂತ್, ಪಂದ್ಯವನ್ನು ಅಂದಾಜಿಸಿ ಕಾಮೆಂಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕಾಮೆಂಟ್‌ಗೆ ತಕ್ಕಾಗೆ ಬೌಂಡರಿ

ಪಂದ್ಯದಲ್ಲಿ ಕೆಕೆಆರ್ ಇನ್ನಿಂಗ್ಸ್ ವೇಳೆ 4ನೇ ಓವರ್ ಎಸೆಯಲು ಸಂದೀಪ್ ಲಮಿಖಾನೆ ಬಂದಿದ್ದರು. ಸಂದೀಪ್ 3.5ನೇ ಓವರ್ ಎಸೆಯುವುದಕ್ಕೂ ಮುನ್ನ 'ಏ ತೊ ವೈಸೆ ಭಿ ಚೌಕ ಹೈ (ಇದೂ ಫೋರ್ ಹೋಗಲಿದೆ)' ಅಂತ ಪಂತ್ ಕಾಮೆಂಟ್ ಮಾಡಿದ್ದರು. ಮರುಕ್ಷಣವೇ ಸಂದೀಪ್ ಎಸೆದ ಎಸೆತಕ್ಕೆ ರಾಬಿನ್ ಉತ್ತಪ್ಪ ಬೌಂಡರಿ ಬಾರಿಸಿದ್ದರು. ಇದು ನೋಡುಗರಿಗೆ ಫಿಕ್ಸಿಂಗ್ ಅನುಮಾನ ಉಂಟು ಮಾಡುವಂತಿತ್ತು.

ಅನುಮಾನಕ್ಕೆ ಹೆಚ್ಚಿದ್ದು

ಪಂತ್ ಮಾತನಾಡಿರುವ ಈ ವಿಡಿಯೋ ನೋಡಿದವರ ಫಿಕ್ಸ್ ಅನುಮಾನ ಹೆಚ್ಚಾಗಲು ಮತ್ತೊಂದು ಕಾರಣವೆಂದರೆ ಜಿದ್ದಾಜಿದ್ದಿ ಪಂದ್ಯ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ 20 ಓವರ್‌ಗೆ 8 ವಿಕೆಟ್ ಕಳೆದು 185 ರನ್ ಪೇರಿಸಿತ್ತು. 186 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 185 ರನ್ ಬಾರಿಸಿದ್ದರಿಂದ ಪಂದ್ಯ ಟೈ ಎನಿಸಿತ್ತು. ಕೊನೆಗೆ ಸೂಪರ್ ಓವರ್‌ನಲ್ಲಿ ಡೆಲ್ಲಿ 3 ರನ್ ಗೆಲುವನ್ನಾಚರಿಸಿತ್ತು. ಪಂತ್ ಮಾತಿನ ವಿಡಿಯೋ, ಪಂದ್ಯ ಟೈ ಆಗಿದ್ದೆಲ್ಲವೂ ಫಿಕ್ಸಿಂಗ್ ಅನುಮಾನ ಹೆಚ್ಚಿಸುವಂತಿತ್ತು.

ಆಗಿದ್ದೇ ಬೇರೆ!

ಪಂತ್ ಮಾತನಾಡಿರುವ ಈ ವಿಡಿಯೋ ಇದೆಯಲ್ಲ? ಇದು ತಿರುಚಿದಂತಿರುವ ವಿಡಿಯೋ. ಅಂದರೆ ಒಂದು ಫೋಟೋವನ್ನು ಕಟ್ ಮಾಡಿ ಮತ್ತೊಂದು ಆ್ಯಂಗಲ್ ನಲ್ಲಿ ತೋರಿಸಿ ವಂಚಿಸುತ್ತಾರಲ್ಲ? ಅಂಥ ವಿಡಿಯೋ ಇದು ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ವೈರಲ್ ಆಗಿರುವ ವಿಡಿಯೋಗೂ ಮೊದಲಿನ ಭಾಗ ಗಮನಿಸಿದರೆ, ಅದರಲ್ಲಿ ಪಂತ್, ಡೆಲ್ಲಿ ನಾಯಕ ಶ್ರೇಯಸ್ ಐಯ್ಯರ್ ಅವರಲ್ಲಿ ಆಫ್‌ ಸೈಡ್‌ನಲ್ಲಿ ಫೀಲ್ಡರ್ ಸಂಖ್ಯೆ ಹೆಚ್ಚಿಸಿ ಫೋರ್ ಹೋಗೋದನ್ನು ತಡೆಯಬೇಕಿದೆ ಎಂದು ಸಲಹೆ ನೀಡಿದ್ದರು. ಇದನ್ನು ಶ್ರೇಯಸ್‌ಗೆ ಅರ್ಥ ಮಾಡಿಸುವ ಸಲುವಾಗಿ ಪಂತ್, 'ಈಗ ಮತ್ತೊಂದು ಫೋರ್ ಹೋಗಲಿದೆ ನೋಡು' ಎಂದಿದ್ದರು. ಅದು ಫೋರ್ ಹೋಗಿತ್ತು. ಅಂತೂ ವಿಡಿಯೋದ ಒಂದುಭಾಗವನ್ನಷ್ಟೇ ವೈರಲ್ ಮಾಡಿ ವಿವಾದ ಹುಟ್ಟುಹಾಕುವ ಪ್ರಯತ್ನ ಇಲ್ಲಿ ಆಗಿತ್ತಷ್ಟೆ ಹೊರತು, ಫಿಕ್ಸಿಂಗ್ ಏನೂ ಇಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

Story first published: Monday, April 1, 2019, 10:19 [IST]
Other articles published on Apr 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X