ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್ ಯಶಸ್ಸಿಗೆ ಮಹತ್ವದ ಸಲಹೆ ನೀಡಿದ ಆಸಿಸ್ ದಿಗ್ಗಜ

Rishabh Pant Could Do With A Mind Coach, Says Brad Hogg

ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ರಿಷಭ್ ಪಂತ್ ಸಾಕಷ್ಟು ಭರವಸೆಯನ್ನು ಹುಟ್ಟಿಸಿರುವ ಆಟಗಾರ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂತ್‌ಗೆ ಸಾಕಷ್ಟು ಅವಕಾಶವನ್ನು ನೀಡಿದ್ದರೂ ಕುಡ ಅದನ್ನು ಸರಿಯಾಗಿ ಬಳಸಿಕೊಳ್ಳಲು ಪಂತ್‌ಗೆ ಈವರೆಗೂ ಸಾಧ್ಯವಾಗಿಲ್ಲ. ಈ ಮಧ್ಯೆ ರಿಷಭ್ ಪಂತ್ ಯಶಸ್ಸನ್ನು ಕಾಣಬೇಕಾದರೆ ಆಸಿಸ್ ಮಾಜಿ ಸ್ಪಿನ್ನರ್‌ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಜ್ ರಿಷಬ್ ಪಂತ್‌ಗೆ ಸಲಹೆಯನ್ನು ನಿಡಿರುವ ಆಟಗಾರ. ರಿಷಬ್ ಪಂತ್ ಅಗಾಧ ಪ್ರತಿಭೆಯುಳ್ಳ ಆಟಗಾರ. ಆತನಲ್ಲಿ ಕ್ರಿಕೆಟ್‌ನ ಸಾಕಷ್ಟು ಕೌಶಲ್ಯವಿದೆ. ಆತನ ಕ್ರಿಕೆಟ್‌ ಸಾಕಷ್ಟು ಮುದ ನೀಡುತ್ತದೆ ಎಂದಿದ್ದಾರೆ ಬ್ರಾಡ್ ಹಾಜ್.

ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!

ರಿಷಬ್ ಪಂತ್ ಬ್ಯಾಟಿಂಗ್ ಮಾಡುವುದನ್ನು ನಾನು ಕೂಡ ಆನಂದಿಸುತ್ತೇನೆ ಎಂದು ಬ್ರಾಡ್ ಹಾಜ್ ಹೇಳಿದ್ದಾರೆ. ಆದರೆ ತನ್ನಲ್ಲಿರುವ ಕ್ರಿಕೆಟ್‌ನ ಕೌಶಲ್ಯವನ್ನು ಸರಿಯಾದ ಸಂದರ್ಭದಲ್ಲಿ ಅಳವಡಿಸಿಕೊಳ್ಳಲು ಪಂತ್ ವಿಫಲರಾಗುತ್ತಿದ್ದಾರೆ. ಅದನ್ನು ಹೇಗೆ ಬಳಸಿಕೊಳ್ಳಬೇಕಿ ಎನ್ನುವ ಗೊಂದಲ ಅವರಲ್ಲಿದ ಎಂದು ಹಾಜ್ ಹೇಳಿದ್ದಾರೆ.

ಈ ಗೊಂದಲವನ್ನು ನಿವಾರಿಸಲು ರಿಷಬ್ ಪಂತ್ ಪ್ರತ್ಯೇಕ ಕೋಚ್‌ ಒಬ್ಬರನ್ನು ನೇಮಿಸಿಕೊಳ್ಳಬೇಕು ಎಂದಿದ್ದಾರೆ ಹಾಜ್. ಹಲವು ಕ್ರೀಡಾಪಟುಗಳು ಮೈಂಡ್ ಕೋಚ್‌ಗಳನ್ನು ನೇಮಕಮಾಡಿಕೊಳ್ಳುತ್ತಾರೆ. ಪಂತ್ ತಮ್ಮ ನೈಜ ಪ್ರದರ್ಶನವನ್ನು ನೀಡಬೇಕಾದರೆ ಆತನಿಗೆ ಮೈಂಡ್ ಕೋಚ್‌ ಅಗತ್ಯವಿದೆ ಎಂದು ಬ್ರಾಡ್ ಹಾಜ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಬ್ರಾಡ್ ಹಾಜ್ ಈ ಉತ್ತರವನ್ನು ನೀಡಿದ್ದಾರೆ.

ಒಂದು ವಾರ ಮನೆಯೊಳಗೇ ಕಾಲ ಕಳೆದ ಶಿಖರ್ ಧವನ್ ಪಾಡು ಹೀಗಿದೆಒಂದು ವಾರ ಮನೆಯೊಳಗೇ ಕಾಲ ಕಳೆದ ಶಿಖರ್ ಧವನ್ ಪಾಡು ಹೀಗಿದೆ

ಟೀಮ್ ಇಂಡಿಯಾದಲ್ಲಿ ಸಾಕಷ್ಟು ಅವಕಾಶವನ್ನು ಪಡೆದ ರಿಷಬ್ ಪಂತ್ ಸದ್ಯ ಏಕದಿನ ತಂಡದ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ಕೆಎಲ್ ರಾಹುಲ್‌ಗೆ ವಹಿಸಲಾಗಿದೆ. ಮತ್ತೆ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ಪಂತ್ ಮತ್ತಷ್ಟು ಕಸರತ್ತು ನಡೆಸಬೇಕಾಗಿದೆ.

Story first published: Wednesday, March 25, 2020, 20:44 [IST]
Other articles published on Mar 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X